5g spectrum : 4ಜಿ ಗಿಂತ 10 ಪಟ್ಟು ಹೆಚ್ಚಿನ ವೇಗವನ್ನು ಹೊಂದಿರುವ 5ಜಿ ಸ್ಪೆಕ್ಟ್ರಂ ಹರಾಜು ನಡೆಯುತ್ತಿದ್ದು ಸಂಪೂರ್ಣ ದೇಶದ ಚಿತ್ತ ಈ ಹರಾಜು ಪ್ರಕ್ರಿಯೆ ಮೇಲೆ ನೆಟ್ಟಿದೆ. ಬರೋಬ್ಬರಿ 4.3 ಲಕ್ಷ ಕೋಟಿ ರೂಪಾಯಿ ಮೌಲ್ಯದ 72 ಗಿಗಾಹರ್ಟ್ಸ್ ರೇಡಿಯೋ ತರಂಗಗಳ ಹಕ್ಕನ್ನು ಯಾರು ಗೆಲ್ತಾರೆ ಎಂಬ ಕುತೂಹಲ ಇದೀಗ ಎಲ್ಲರಲ್ಲೂ ಮನೆ ಮಾಡಿದೆ. 5 ಜಿ ಸ್ಪೆಕ್ಟ್ರಂ ಬಳಿಕ ಭಾರೀ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ.
ಕೇಂದ್ರ ಸರ್ಕಾರ ಈ ಹಿಂದೆ ದೇಶದಲ್ಲಿ ಶೀಘ್ರದಲ್ಲಿಯೇ 5ಜಿ ಸೇವೆಗಳು ಬರಲಿವೆ ಎಂದು ಹೇಳಿಕೆ ನೀಡಿತ್ತು. ಇದಾದ ಬಳಿಕ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಸಭೆಯಲ್ಲಿ ಈ ತಿಂಗಳಿನಲ್ಲಿ 5 ಜಿ ತರಂಗಾತರಗಳ ಹರಾಜಿಗೆ ಅನುಮತಿ ಕೂಡ ನೀಡಲಾಗಿದೆ. ವರದಿಗಳ ಪ್ರಕಾರ ಮುಂದಿನ ಆರರಿಂದ ಹನ್ನೆರಡು ತಿಂಗಳ ಅವಧಿಯಲ್ಲಿ ದೇಶದಲ್ಲಿ 5ಜಿ ಸೇವೆ ಸೌಕರ್ಯ ಸಿಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಹರಾಜು ಪ್ರಕ್ರಿಯೆಯಲ್ಲಿ 72 ಗಿಗಾಹರ್ಟ್ಸ್ ಪ್ರಮಾಣದ ಸ್ಪೆಕ್ಟ್ರಂನ್ನು ಸುಮಾರು 20 ವರ್ಷಗಳ ಮಾನ್ಯತೆಯ ಅಡಿಯಲ್ಲಿ ಹರಾಜಿಗೆ ಇಡಲಾಗುತ್ತದೆ.
ರಿಲಾಯನ್ಸ್ ಜಿಯೋ , ವೋಡಾಫೋನ್, ಏರ್ಟೆಲ್ ಭಾರ್ತಿ ಹಾಗೂ ಅದಾನಿ ಡೇಟಾ ನೆಟ್ವರ್ಕ್ಸ್ ಈ ಸ್ಪೆಕ್ಟ್ರಂನ್ನು ಖರೀದಿ ಮಾಡಲಿವೆ . ಪ್ರಸ್ತುತ ಇರುವ 4ಜಿ ನೆಟ್ವರ್ಕ್ಗಿಂತ 5ಜಿ ಸ್ಪೆಕ್ಟ್ರಂಗಳು 10 ಪಟ್ಟು ಹೆಚ್ಚಿನ ವೇಗವನ್ನು ಹೊಂದಿವೆ. ಬೆಳಗ್ಗೆ 10 ಗಂಟೆಯಿಂದಲೇ ಹರಾಜು ಪ್ರಕ್ರಿಯೆ ಆರಂಭಗೊಂಡಿದೆ. ಇಂದು ಸಂಜೆ ಆರು ಗಂಟೆಯವರೆಗೂ ಈ ಹರಾಜು ಪ್ರಕ್ರಿಯೆ ಮುಂದುವರಿಯಲಿದೆ ಎನ್ನಲಾಗಿದೆ.
ದೂರಸಂಪರ್ಕ ಇಲಾಖೆಯು ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ 13 ಪ್ರಮುಖ ನಗರಗಳಲ್ಲಿ 5ಜಿ ಸೇವೆಯನ್ನು ನೀಡಲಾಗುತ್ತದೆ. ಮೊದಲ ಹಂತದಲ್ಲಿ 5ಜಿ ನೆಟ್ವರ್ಕ್ ಪಡೆಯುವ ದೇಶದ ಪ್ರಮುಖ ನಗರಗಳ ಪಟ್ಟಿಯಲ್ಲಿ ಬೆಂಗಳೂರು, ಮುಂಬೈ, ದೆಹಲಿ, ಅಹಮದಾಬಾದ್, ಜಾಮ್ನಗರ,ಹೈದರಾಬಾದ್, ಲಕ್ನೋ, ಚೆನ್ನೈ, ಪುಣೆ, ಗಾಂಧಿ ನಗರ,ಸ್ಥಾನ ಪಡೆದಿವೆ .
ಇದನ್ನು ಓದಿ : Train Update: ಕಾರ್ಯಾಚರಣೆ ಮತ್ತು ನಿರ್ವಹಣೆ ಸಮಸ್ಯೆಗಳಿಂದ 148 ರೈಲು ಸಂಪೂರ್ಣವಾಗಿ ರದ್ದು
ಇದನ್ನೂ ಓದಿ : Afghanistan : ಹಿಂದೂ ಹಾಗೂ ಸಿಖ್ಖರಿಗೆ ಅಪ್ಘಾನಿಸ್ತಾನಕ್ಕೆ ಮರಳಿ ಬನ್ನಿ ಎಂದು ಮನವಿ ಮಾಡಿದ ತಾಲಿಬಾನ್ ಸರ್ಕಾರ
5g spectrum auction begins in india