Neeraj Chopra : ಕಾಮನ್​ವೆಲ್ತ್​​ ಗೇಮ್ಸ್​ 2022ನಿಂದ ಹೊರಗುಳಿದ ಚಿನ್ನದ ಹುಡುಗ ನೀರಜ್​ ಚೋಪ್ರಾ : ಭಾರತಕ್ಕೆ ಭಾರಿ ಆಘಾತ

ದೆಹಲಿ : Neeraj Chopra : ಕಾಮನ್​ವೆಲ್ಸ್​ ಗೇಮ್ಸ್​ 2022ನಲ್ಲಿ ಭಾರತದ ಪದಕದ ನಿರೀಕ್ಷೆಗೆ ಭಾರಿ ದೊಡ್ಡ ಹೊಡೆತ ಬಿದ್ದಿದ್ದು ಟೋಕಿಯೋ ಒಲಿಂಪಿಕ್ಸ್​ ಚಿನ್ನದ ಪದಕ ವಿಜೇತ ನೀರಜ್​​ ಚೋಪ್ರಾ ಕಾಮನ್​​ವೆಲ್ತ್​ ಗೇಮ್ಸ್​ 2022ರಿಂದ ಹೊರಗುಳಿಯಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​ನಲ್ಲಿ ಉಂಟಾದ ತೊಡೆಸಂದು ಗಾಯದಿಂದಾಗಿ ನೀರಜ್ ಚೋಪ್ರಾ ಮುಂಬರುವ ಕಾಮನ್​ವೆಲ್ಸ್​ ಗೇಮ್ಸ್​ನಿಂದ (Neeraj Chopra To Miss Commonwealth Games) ಹೊರಗುಳಿಯಲಿದ್ದಾರೆ . ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​ನಲ್ಲಿ ನೀರಜ್​ ಚೋಪ್ರಾ ಪುರುಷರ ಜಾವೆಲಿನ್​ ಎಸೆತ ವಿಭಾಗದಲ್ಲಿ ಐತಿಹಾಸಿಕ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದರು.

ನೀರಜ್​ ಚೋಪ್ರಾ ತಮ್ಮ ಗಾಯದ ಸಮಸ್ಯೆಯ ಬಗ್ಗೆ IOA ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾರಿಗೆ ಮಾಹಿತಿ ನೀಡಿದ್ದಾರೆ .ಮೆಹ್ತಾ ಹೇಳುವಂತೆ, ನೀರಜ್​ ಚೋಪ್ರಾ ತೊಡೆಸಂದು ಗಾಯವನ್ನು ವೀಕ್ಷಿಸಿದ ವೈದ್ಯರು ಒಂದು ತಿಂಗಳುಗಳ ಕಾಲ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.


ವಿಶ್ವ ಅಥ್ಲೆಟಿಕ್ಸ್​ ಚಾಂಪಿಯನ್​ಶಿಪ್​​ನಲ್ಲಿ ನೀರಜ್​ ಚೋಪ್ರಾ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕವನ್ನು ಸಂಪಾದಿಸಿದ ಮೊದಲ ಟ್ರ್ಯಾಕ್​ & ಫೀಲ್ಡ್​ ಅಥ್ಲೀಟ್​ ಎನಿಸಿದ್ದಾರೆ. ಅಲ್ಲದೇ ಅಂಜು ಬಾಬಿ ಜಾರ್ಜ್​ ಬಳಿಕ ಪೋಡಿಯಂ ಫಿನಿಶ್​​ ಮಾಡಿದ ಎರಡನೇ ಭಾರತೀಯ ಅಥ್ಲೀಟ್​ ಎನಿಸಿದ್ದಾರೆ. ನೀರಜ್​ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88,13 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆಯುವ ಮೂಲಕ ಎರಡನೇ ಸ್ಥಾನವನ್ನು ಪಡೆದಿದ್ದಾರೆ.

ವಿಶ್ವ ಚಾಂಪಿಯನ್​ಶಿಪ್​​ನಲ್ಲಿ ಸಾಧನೆಗೈದ ಬಳಿಕ ಮಾತನಾಡಿದ ನೀರಜ್​ ಚೋಪ್ರಾ, ಕಾಮನ್​ವೆಲ್ತ್​​ ಗೇಮ್ಸ್​ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದೇನೆ ಎಂದು ಹೇಳಿದ್ದರು.

ಇದನ್ನು ಓದಿ : Afghanistan : ಹಿಂದೂ ಹಾಗೂ ಸಿಖ್ಖರಿಗೆ ಅಪ್ಘಾನಿಸ್ತಾನಕ್ಕೆ ಮರಳಿ ಬನ್ನಿ ಎಂದು ಮನವಿ ಮಾಡಿದ ತಾಲಿಬಾನ್​ ಸರ್ಕಾರ

ಇದನ್ನೂ ಓದಿ : Nathan Lyon : ಸಹ ಆಟಗಾರನ ಮಾಜಿ ಪ್ರೇಯಸಿಯನ್ನೇ ಮದುವೆಯಾದ ಆಸೀಸ್ ಕ್ರಿಕೆಟರ್ ನೇಥಲ್ ಲಯಾನ್

ಇದನ್ನೂ ಓದಿ : Avesh, Axar Recreates Yuzvendra Chahal pose : ವಿಂಡೀಸ್‌ನಲ್ಲಿ ಚಹಾಲ್ ಪೋಸ್ ರೀಕ್ರಿಯೇಟ್ ಮಾಡಿದ ಅಕ್ಷರ್ ಪಟೇಲ್, ಆವೇಶ್ ಖಾನ್

ಇದನ್ನೂ ಓದಿ : Mithali Raj ಮಹಿಳಾ ಐಪಿಎಲ್‌ಗಾಗಿ ನಿವೃತ್ತಿ ಹಿಂಪಡೆಯಲಿದ್ದಾರೆ ಸ್ಟಾರ್ ಬ್ಯಾಟರ್ ಮಿಥಾಲಿ ರಾಜ್ ?

Neeraj Chopra To Miss Commonwealth Games 2022 Due to Injury

Comments are closed.