ಮಂಗಳವಾರ, ಏಪ್ರಿಲ್ 29, 2025
HometechnologyAir Conditioners Tips: ನಿಮಗಿದು ಗೊತ್ತಾ? AC ಉಪಯೋಗಿಸಿಯೂ ವಿದ್ಯುತ್‌ ಬಿಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ...

Air Conditioners Tips: ನಿಮಗಿದು ಗೊತ್ತಾ? AC ಉಪಯೋಗಿಸಿಯೂ ವಿದ್ಯುತ್‌ ಬಿಲ್‌ ಕಡಿಮೆ ಮಾಡಿಕೊಳ್ಳುವುದು ಹೇಗೆ ಎಂದು?

- Advertisement -

ಭಾರತದಲ್ಲಿ ಈಗ ಬಿಸಿ ಗಾಳಿಯಿಂದ ಏರ್‌ ಕಂಡೀಷನರ್‌ನ (Air Conditioners Tips) ಬಳಕೆ ಸರ್ವೇ ಸಾಮಾನ್ಯವಾಗಿದೆ. ಏರ್‌ ಕಂಡೀಷನರ್‌ ನ ಬಳಕೆ ಮೊದಲಿಗಿಂತ ಸ್ವಲ್ಪ ಜಾಸ್ತಿಯೇ ಆಗಿದೆ ಎಂದರೆ ತಪ್ಪಾಗಲಾರದು. ಆದರೂ ಉಷ್ಣತೆ ತಡೆದುಕೊಳ್ಳಲು ಏರ್‌ ಕಂಡೀಷನರ್‌ ಉತ್ತಮ ದಾರಿ. ಏರ್‌ ಕಂಡೀಷನರ್‌ ಖರೀದಿಗೆ ಬೆಲೆ ಹೇಗೆ ಸ್ವಲ್ಪ ಜಾಸ್ತಿಯೋ ಹಾಗೆಯೇ ಅದ ಬಳಕೆಯಿಂದ ಬರುವ ವಿದ್ಯತ್‌ ಬಿಲ್‌ ಕೂಡ ದುಬಾರಿ. ಏರ್‌ ಕಂಡೀಷನರ್‌ಗೆ ಅಧಿಕ ವಿದ್ಯುತ್ತಿನ ಅವಶ್ಯಕತೆ ಇದೆ. ಇದರಿಂದ ಬೇಸಿಗೆಯ ಕಾಲ ಪೂರ್ತಿ ವಿದ್ಯುತ್‌ ಬಿಲ್‌ ಹೆಚ್ಚಾಗುತ್ತದೆ.

ನಾವು ಇಲ್ಲಿ, ನಿಮಗೆ ಏರ್‌ ಕಂಡೀಷನರ್‌ ಉಪಯೋಗಿಸಿಯೂ ವಿದ್ಯತ್‌ ಬಿಲ್‌ ಕಡಿಮೆ ಬರಲು ಏನು ಮಾಡಬೇಕು ಎಂದು ಹೇಳಿದ್ದೇವೆ. ಅದನ್ನು ಅನುಸರಿಸಿ ಏರ್‌ ಕಂಡೀಷನರ್‌ ಅನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳಿ. ‌

  • ಸೋರಿಕೆ ಇಲ್ಲದಿರುವುದನ್ನು ಖಚಿತ ಪಡಿಸಿಕೊಳ್ಳಿ:
    ಇದು ವಿಂಡೋ ಏರ್‌ ಕಂಡೀಷನರ್‌ ಗಳಲ್ಲಿ ಬಹಳ ಸಾಮಾನ್ಯವಾದ ಸಮಸ್ಯೆಯಾಗಿದೆ. ಒಂದೊಂದು ಸಲ ಏರ್‌ ಕಂಡೀಷನರ್‌ ಮತ್ತು ಕಿಟಕಿಯ ಮಧ್ಯ ಜಾಗವಿರುತ್ತದೆ. ಕಿಟಕಿ ಫ್ರೇಮ್‌ ಏರ್‌ ಕಂಡೀಷನರ್ ಗೆ ಹಾನಿಯನ್ನುಂಟು ಮಾಡುತ್ತದೆ. ಕೂಲಿಂಗ್‌ ನ ಕ್ಷಮತೆಗೆ ಹಾನಿಯುಂಟು ಮಾಡುತ್ತದೆ. ಅದಕ್ಕಾಗಿ ಬಳಕೆದಾರರು ಎಮ್‌ಸೀಲ್‌ ಗಳಿಂದ ಗ್ಯಾಪ್‌ ಅನ್ನು ಮುಚ್ಚುವುದು ಅಗತ್ಯವಾಗಿದೆ.

ಇದನ್ನೂ ಓದಿ : Yamaha Neo Electric Scooter: ರಿಮೂವೇಬಲ್ ಬ್ಯಾಟರಿ ಹೊಂದಿರುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು!

  • ನಿಯಮಿತವಾಗಿ ಸರ್ವೀಸ್‌ ಮಾಡಿಸಿ:
    ಏರ್‌ ಕಂಡೀಷನರ್‌ ನ ಬೇಸಿಕ್‌ ಪಾರ್ಟ್‌ಗಳನ್ನು ನಿಯಮಿತವಾಗಿ ಸರ್ವೀಸ್‌ ಮಾಡಿಸಿ. ಪ್ರತಿ ಋತುಮಾನಗಳ ಬದಲಾಣೆಯಾದ ನಂತರ ಸರ್ವೀಸ್‌ ಮಾಡಿಸುವುದಕ್ಕೆ ಒಳ್ಳೆಯ ಸಮಯ. ಸರ್ವೀಸ್‌ ಮಾಡಬೇಕಾದರೆ ಏರ್‌ ಕಂಡೀಷನರ್‌ನ ಕಾಯಲ್‌ಗಳು ಸ್ಚಚ್ಛಗೊಳ್ಳುತ್ತವೆ. ವೋಲ್ಟೇಜ್‌ ಕನೆಕ್ಷನ್‌ಗಳು, ಕೂಲಂಟ್‌ ಲೆವಲ್‌ ಎಲ್ಲವನ್ನೂ ಚೆಕ್‌ ಮಾಡುವುದರಿಂದ ಇದು ಹೊಸತರಂತೆಯೇ ಕೆಲಸ ಮಾಡುವುದು.
  • ಟೈಮರ್‌ ಸೆಟ್‌ ಮಾಡಿಕೊಳ್ಳಿ:
    ಸಾಮಾನ್ಯವಾಗಿ ಜನರು ವಿದ್ಯುತ್‌ ಬಿಲ್‌ ಕಡಿಮೆ ಭರಿಸುವ ಸಲುವಾಗಿ ಆಗಾಗ ಏರ್‌ ಕಂಡೀಷನರ್‌ ಅನ್ನು ಬಂದ್‌ ಮಾಡುವುದು ಮತ್ತು ತಮಗೆ ಬೇಕಾದಾಗ ಆನ್‌ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಅದರ ಬದಲಿಗೆ ಟೈಮರ್‌ ಸೆಟ್‌ ಮಾಡಿಕೊಳ್ಳಬಹುದು. ಇದರಿಂದ ಏರ್‌ ಕಂಡೀಷನರ್‌ ತಾನಾಗಿಯೇ ಆನ್‌ ಆಗುವುದು ಮತ್ತು ಆಪ್‌ ಆಗುವುದು.
  • ನಿಯಮಿತವಾಗಿ ಏರ್‌ ಫಿಲ್ಟ್‌ರಗಳನ್ನು ಸ್ವಚ್ಛ ಮಾಡಿ:
    ನಿಮ್ಮ ಏರ್‌ ಕಂಡೀಷನರ್‌ಗಳಲ್ಲಿನ ಏರ್‌ ಫಿಲ್ಟರ್‌ಗಳು HVAC ಸಿಸ್ಟಂನಿಂದ ದೂಳನ್ನು ಹೊರಗಿಡುವಲ್ಲಿ ಸಹಾಯ ಮಾಡಿತ್ತದೆ. ಇದರಿಂದ ಬಳಕೆಯು ಸುಗಮವಾಗುತ್ತದೆ. ಆದರೆ ಏರ್‌ ಫಿಲ್ಟರ್‌ಗಳಲ್ಲಿ ಧೂಳಿನಿಂದ ಬ್ಲಾಕ್‌ ಆಗುತ್ತಲೇ ಇರುತ್ತವೆ. ಇದು ಯಾವಾಗಲೂ ಕೊಳಕಾಗುತ್ತಲೇ ಇರುತ್ತದೆ. ಆದ್ದರಿಂದ ಅದನ್ನು ಸ್ವಚ್ಛಗೊಳಿಸುವಂತೆ ಸಲಹೆ ನೀಡುತ್ತಾರೆ. ಧೂ ಜಾಡಿಸಿ, ನೀರಿನಿಂದ ರನ್‌ ಮಾಡಿದರೆ ಸಾಕು ಏರ್‌ ಕಂಡೀಷನರ್‌ನ ಏರ್‌ ಫಿಲ್ಟರ್‌ ಸ್ವಚ್ಛವಾಗುತ್ತದೆ.
  • ಕಟ್‌–ಆಪ್‌ ಟೆಂಪ್ರೇಚರ್‌ ನ ಬಳಕೆ ಮಾಡಿ
    ಏರ್‌ ಕಂಡೀಷನರ್‌ನ ಕಟ್‌–ಆಪ್‌ ಟೆಂಪ್ರೇಚರ್‌ ಸೆಟ್‌ ಮಾಡುವುದು ಎಂದರೆ, ರೂಮ್‌ನ ತಾಪಮಾನವು ಏರ್‌ ಕಂಡೀಷನರ್‌ ನ ತಾಪಮಾನಕ್ಕೆ ಸರಿಯಾದಾಗ ತಕ್ಷಣ ಆಪ್‌ ಆಗುವುದು ಎಂದರ್ಥ. ಉದಾಹರಣೆಗೆ, ಏರ್‌ ಕಂಡೀಷನರ್‌ನ ಕಟ್‌–ಆಪ್‌ ಟೆಂಪ್ರೇಚರ್‌ 24 ಡಿಗ್ರೀ ಎಂದಿದ್ದರೆ, ರೂಮಿನ ತಾಪಮಾನವು 24 ಡಿಗ್ರೀಗೆ ಬಂದ ತಕ್ಷಣವೇ ಏರ್‌ ಕಂಡೀಷನರ್‌ ಬಂದ್‌ ಆಗುವುದು. ತಾಪಮಾನ ಹೆಚ್ಚಾದ ಕೂಡಲೇ ಇದು ಸ್ವಯಂಚಾಲಿತವಾಗಿ ಆನ್‌ ಆಗುವುದು.

ಇದನ್ನೂ ಓದಿ : Google Mapನಲ್ಲಿ ನಿಮ್ಮ ಮನೆಯ ಅಡ್ರೆಸ್‌ ಬದಲಾಯಿಸಬಹುದು! ಹೇಗೆ ಗೊತ್ತೇ?

(Air Conditioners Tips how to reduce electricity bill in summer)

RELATED ARTICLES

Most Popular