amit shah cancelled a high level meeting : ವೆಸ್ಟ್​ ಎಂಡ್​ ಹೋಟೆಲ್​​ನಲ್ಲಿ ಉನ್ನತ ಮಟ್ಟದ ಸಭೆ ರದ್ದುಗೊಳಿಸಿದ ಅಮಿತ್​ ಶಾ

ಬೆಂಗಳೂರು :amit shah cancelled a high level meeting : ಮುಂದಿನ ವರ್ಷ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ರಾಜ್ಯ ನಾಯಕರನ್ನು ಚಾರ್ಜ್​ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಆಗಮಿಸಿದ್ದಾರೆ. ರಾಜ್ಯದಲ್ಲಿ ಮುಂದಿನ ವರ್ಷವೂ ಅಧಿಕಾರದ ಗದ್ದುಗೆ ಏರುವುದು, ನಾಯಕತ್ವ ಬದಲಾವಣೆ, ಸಂಪುಟ ವಿಸ್ತರಣೆ ಸೇರಿದಂತೆ ಸಾಕಷ್ಟು ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ತಾಜ್​ ವೆಸ್ಟ್​ ಎಂಡ್​ ಹೋಟೆಲ್​​ನಲ್ಲಿ ಕರೆಯಲಾಗಿದ್ದ ಮಹತ್ವದ ಸಭೆಯನ್ನು ಕೇಂದ್ರ ಗೃಹ ಸಚಿವ ಅಮಿತ್​ ಶಾ ರದ್ದುಪಡಿಸುವ ಮೂಲಕ ಅಚ್ಚರಿಯ ನಿರ್ಧಾರ ಕೈಗೊಂಡಿದ್ದಾರೆ.


ಇಂದು ಸಂಜೆ 4 ಗಂಟೆ ಸುಮಾರಿಗೆ ವೆಸ್ಟ್​ ಎಂಡ್​​ ಹೋಟೆಲ್​​ನಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಅಧಿಕಾರವನ್ನು ಉಳಿಸಿಕೊಳ್ಳುವ ಸಂಬಂಧ ಕರೆಯಲಾದ ಈ ಸಭೆಯಲ್ಲಿ 30 ಮಂದಿ ಪದಾಧಿಕಾರಿಗಳು, ನಾಲ್ವರು ವಿಭಾಗವಾರು ಪ್ರತಿನಿಧಿಗಳು ಹಾಗೂ 16 ಮಂದಿ ಸದಸ್ಯರು ಸೇರಿದಂತೆ 50 ಮಂದಿ ಪ್ರಮುಖರು ಭಾಗಿಯಾಗುವವರಿದ್ದರು.


ಈ ಸಭೆಯಲ್ಲಿ ಅಮಿತ್​ ಶಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಸರ್ಕಾರ ಕೈಗೊಳ್ಳಬೇಕಾದ ನೀತಿ, ವಿವಾದಗಳಿಂದ ದೂರ ಉಳಿಯುವ ಬಗ್ಗೆ , ಸಂಪುಟ ವಿಸ್ತರಣೆ ಹಾಗೂ ಪುನಾರಚನೆ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಅಮಿತ್​ ಶಾ ಮಾತನಾಡುವವರಿದ್ದರು. ಆದರೆ ಅಚ್ಚರಿಯ ನಡೆ ಎಂಬಂತೆ ಅಮಿತ್​ ಶಾ ಈ ಸಭೆಯನ್ನು ರದ್ದುಗೊಳಿಸಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ನಿವಾಸದಲ್ಲಿ ಮೊದಲೇ ನಿಗದಿಯಾಗಿದ್ದ ಭೋಜನ ಕೂಟಕ್ಕೆ ಅಮಿತ್​ ಶಾ ಭಾಗಿಯಾಗಿದ್ದಾರೆ.

ಇದನ್ನು ಓದಿ : Amit Shah ಆಗಮನದ ಹೊತ್ತಲ್ಲೇ ಅಶ್ವತ್ಥ ನಾರಾಯಣ್ ಗೆ ಶಾಕ್ : ಭ್ರಷ್ಟಾಚಾರದ ಆರೋಪ ಕೆಂಡಾಮಂಡಲ

ಇದನ್ನೂ ಓದಿ : BJP Secret Meeting : ಸಿಎಂ ಬೊಮ್ಮಾಯಿ ಬದಲಾವಣೆ ? ಕುತೂಹಲ ಮೂಡಿಸಿದೆ ಬಿಜೆಪಿ ತ್ರಿಮೂರ್ತಿಗಳ ಸಭೆ

amit shah cancelled a high level meeting to be held in taj west end

Comments are closed.