Amazon Prime membership : ಒಟಿಟಿ ಬಳಕೆದಾರರ ಗಮನಕ್ಕೆ: ಈ ತಾರೀಖಿನಿಂದ ಹೆಚ್ಚಲಿದೆ ಅಮೆಜಾನ್​ ಪ್ರೈಮ್​ ಸದಸ್ಯತ್ವದ ಬೆಲೆ..!

ಕೋವಿಡ್​ ಸಾಂಕ್ರಾಮಿಕದ ಬಳಿಕ ಒಟಿಟಿ ವೇದಿಕೆಗಳನ್ನು ಬಳಕೆ ಮಾಡುವವರ ಸಂಖ್ಯೆ ಜಾಸ್ತಿ ಆಗಿದೆ. ಹೀಗಾಗಿ ಒಟಿಟಿ ವೇದಿಕೆಗಳಿಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಒಟಿಟಿ ವೇದಿಕೆಗಳಿಗೆ ಬೇಡಿಕೆ ಹೆಚ್ಚಾದ ಬೆನ್ನಲ್ಲೇ ಅಮೆಜಾನ್​ ಪ್ರೈಮ್​​ ವಾರ್ಷಿಕ ಸದಸ್ಯತ್ವದ ( Amazon Prime membership) ದರ ಏರಿಕೆ ಮಾಡಿದ್ದು ಪರಿಷ್ಕೃತ ದರವು ಡಿಸೆಂಬರ್​ 14ರಿಂದ ಜಾರಿಗೆ ಬರಲಿದೆ.

ದೇಶದಲ್ಲಿ ಈಗಿರುವ ಚಂದಾದಾರಿಕೆಯ ಬೆಲೆಗಿಂತ 50 ಪ್ರತಿಶತ ದರ ಏರಿಕೆ ಮಾಡಿದೆ.ಡಿಸೆಂಬರ್​ 13ರ ಬಳಿಕ ಮೆಂಬರ್​ಶಿಪ್​​ನಲ್ಲಿ ಏರಿಕೆ ಕಂಡುಬರಲಿದೆ. ಡಿಸೆಂಬರ್​ 14ರಿಂದ ವಾರ್ಷಿಕ ಅಮೆಜಾನ್ ಪ್ರೈಂ ಸದಸ್ಯತ್ವವನ್ನು ಪಡೆಯಲು ಗ್ರಾಹಕರು 1500 ರೂಪಾಯಿ ಪಾವತಿ ಮಾಡಬೇಕು. ಈ ಹಿಂದೆ 999 ರೂಪಾಯಿ ಮೌಲ್ಯಕ್ಕೆ ಬಳಕೆದಾರರು ಅಮೆಜಾನ್​ ಪ್ರೈಮ್​ ಸದಸ್ಯತ್ವ ಪಡೆಯುತ್ತಿದ್ದರು.

ಈಗಾಗಲೇ ಅಮೆಜಾನ್​ ಪ್ರೈಮ್​ ( Amazon Prime )ಸದಸ್ಯತ್ವ ಹೊಂದಿರುವವರಿಗೂ ಕಂಪನಿಯು ಒಂದು ರಿಲೀಫ್​ ನೀಡಿದೆ. ಏನೆಂದರೆ ನೀವು ಡಿಸೆಂಬ್​ 13ರ ಒಳಗಾಗಿ ಮುಂದಿನ ಅವಧಿಗೆ ಸದಸ್ಯತ್ವವನ್ನು 999 ರೂಪಾಯಿ ಮೌಲ್ಯಕ್ಕೆ ಖರೀದಿ ಮಾಡಿಟ್ಟುಕೊಳ್ಳಬಹುದು. ಆದರೆ ಡಿಸೆಂಬರ್​ 14ರ ಬಳಿಕ ಪರಿಷ್ಕೃತ ದರ ಪ್ರತಿಯೊಬ್ಬರಿಗೂ ಅನ್ವಯವಾಗಲಿದೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಂದರೆ ಅಕ್ಟೋಬರ್​ ತಿಂಗಳಲ್ಲಿ ಅಮೆಜಾನ್​ ಕಂಪನಿಯು ಪ್ರೈಮ್​ ಸದಸ್ಯತ್ವದ ದರ ಏರಿಕೆ ಬಗ್ಗೆ ಘೋಷಣೆ ಮಾಡಿತ್ತು. ಆದರೆ ಹೊಸ ದರ ಯಾವಾಗಿಂದ ಜಾರಿಗೆ ಬರುತ್ತೆ ಎಂಬುದನ್ನು ಹೇಳಿರಲಿಲ್ಲ. ಕಳೆದ ತಿಂಗಳಲ್ಲಿ ದಿನಾಂಕವನ್ನೂ ಕಂಪನಿ ಘೋಷಣೆ ಮಾಡಿದೆ. ಅದರಂತೆ ಡಿಸೆಂಬರ್​ 14ರಿಂದ ಹೊಸ ದರ ಅನ್ವಯವಾಗಲಿದೆ.ಹೀಗಾಗಿ ಅನೇಕರು ಮುಂಗಡವಾಗಿ ಅಮೆಜಾನ್​ ಪ್ರೈಮ್​ ಸದಸ್ಯತ್ವವನ್ನು ಪಡೆಯಲು ಮುಗಿಬಿದ್ದಿದ್ದಾರೆ.

ರಿಯಲ್‌ ಮಿ ಸ್ಮಾರ್ಟ್‌ಫೋನ್‌ಗೆ ಭರ್ಜರಿ 5 ಸಾವಿರ ಡಿಸ್ಕೌಂಟ್; ಗ್ರಾಹಕರು ಫುಲ್ ಖುಷ್

ಡಿಸ್ಕೌಂಟ್ ಸೇಲ್ಸ್ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಅದ್ರಲ್ಲೂ ದುಬಾರಿ ಬೆಲೆಯ ವಸ್ತುಗಳು ಕಡಿಮೆ ಬೆಲೆಗೆ ಸಿಕ್ಕರೆ ಅದೃಷ್ಟವೇ ಸರಿ. ಇದೀಗ ಸ್ಮಾರ್ಟ್ ಫೋನ್ ಕಂಪೆನಿ ರಿಯಲ್ ಮಿ ಇಂಥದೇ ಒಂದು ಭರ್ಜರಿ ಆಫರ್‌ನ್ನು (Realme Discounts Offers) ತನ್ನ ಗ್ರಾಹಕರಿಗೆ ನೀಡಿದೆ. ರಿಯಲ್ ಮಿ ಮತ್ತೊಂದು ಸರಣಿಯ ಅತ್ಯಾಕರ್ಷಕ ಕೊಡುಗೆಗಳು (flipkart) ಮತ್ತು ಸೂಪರ್ ಉಳಿತಾಯ ಡೀಲ್‌ಗಳನ್ನು ರಿಯಲ್‌ ಮಿ ಡೇಸ್‌ನ (Realme Days sale) ಶ್ರೇಣಿಯ ಸ್ಮಾರ್ಟ್‌ಫೋನ್‌ಗಳ ಮಾರಾಟದ ಬೊನಾನ್ಜಾ ಆಫರ್ ಘೋಷಿಸಿದೆ.

ಈ ಆಫರ್ ಡಿಸೆಂಬರ್ 9 ಮಧ್ಯರಾತ್ರಿಯಿಂದ ಪ್ರಾರಂಭವಾಗಲಿದೆ. ಕಂಪನಿಯ ಅಧಿಕೃತ ವೆಬ್‌ಸೈಟ್ realme.com ಮತ್ತು ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ನೀವು ಈ ಸ್ಮಾರ್ಟ್‌ ಫೋನ್‌ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಈಗಾಗಲೇ ರಿಯಲ್ ಮಿ ಸ್ಮಾರ್ಟ್‌ಫೋನ್‌ಗಳ 5 ದಿನಗಳ ಮಾರಾಟ ಪ್ರಾರಂಭ ಆಗಿದ್ದು, ಇಂದು ಮುಗಿಯಲಿದೆ. ಈ ಅವಕಾಶವನ್ನು ಕಳೆದುಕೊಂಡ ಗ್ರಾಹಕರಿಗಾಗಿ ಡಿಸೆಂಬರ್ 9 ರಿಂದ ರಿಯಲ್ ಮಿ ಡೇಸ್ ಮಾರಾಟವನ್ನು ಆರಂಭಿಸಲಾಗಿದೆ. ಡಿಸೆಂಬರ್ 9 ರಿಂದ 13 ವರೆಗೆ ಅಂದರೆ 5 ದಿನಗಳ ಕಾಲ ಈ ಆಫರ್ ಇರಲಿದೆ. Realms X7, Realms 8S 5G, Realme narzo 5A , ಫೋನ್ ಗಳ ಮೇಲೆ ₹5000 ವರೆಗೆ ಡಿಸ್ಕೌಂಟ್ ಸಿಗಲಿದೆ. ಇದಕ್ಕಾಗಿ www.realme.com ಅಥವಾ ಫ್ಲಿಫ್ ಕಾರ್ಟ್‌ಗೆ ಭೇಟಿ ನೀಡಬೇಕಾಗುತ್ತದೆ.

ರಿಯಲ್ ಮಿ ಡೇಸ್ ಸೇಲ್‌ನ ಟಾಪ್ ಡೀಲ್‌ಗಳು (Top Deals)

ರಿಯಲ್ ಮಿ ಸೇಲ್ಸ್ ಅಡಿಯಲ್ಲಿ ₹29,999 ಬೆಲೆಯ 8ಜಿ ಬಿ ರಾಮ್ ಮತ್ತು 128 ಜಿಬಿ ಮೆಮೊರಿ ಇರುವ Realme X7 Pro ಉತ್ತಮ ಆಫರ್ ಇರುವ ಸ್ಮಾರ್ಟ್‌ಫೋನ್‌ಗಳಲ್ಲಿ ಒಂದಾಗಿದೆ. ಈ ಆಫರ್ ನಲ್ಲಿ ನೀವು ₹5000 ಪ್ರಿಪೇಯ್ಡ್ ಕೊಡುಗೆಯನ್ನು ಪಡೆಯಬಹುದು. Realme X7 Pro 5G ಸ್ಮಾರ್ಟ್‌ಫೋನ್ ಸೋನಿ IMX686 ಸೆನ್ಸಾರ್ ಮತ್ತು 64 MP ಕ್ವಾಡ್ ಕ್ಯಾಮೆರಾ ಸೆಟಪ್‌ನ್ನು ಒಳಗೊಂಡಿದೆ. ಇದು ಡೈಮೆನ್ಸಿಟಿ 1000+ ಪ್ರೊಸೆಸರ್ ಮತ್ತು 65W ಸೂಪರ್‌ಡಾರ್ಟ್ ಚಾರ್ಜಿಂಗ್‌ ಹೊಂದಿದೆ. ನೀವು Realme X7 ಅನ್ನು (8GB ಮೆಮೊರಿ ) ₹21,999 ಬೆಲೆಯ ರಿಯಾಯತಿಯ ಅಡಿಯಲ್ಲಿ ಕೊಳ್ಳಬಹುದು. ಅಥವಾ 8GB ಯ Realme X7 Max ಮತ್ತು 12GB ಯ Realme X7 Max ಅನ್ನು ಕ್ರಮವಾಗಿ ₹26,999 ಮತ್ತು ₹29,999 ದರದಲ್ಲಿ ಪಡೆಯಬಹುದು. ಎಲ್ಲಾ ಮೂರು ರೂಪಾಂತರಗಳು ₹3000 ಪ್ರಿಪೇಯ್ಡ್ ಜೊತೆಗೆ ರಿಯಲ್ ಮಿ ಡೇಸ್ ಆಫರ್‌ನೊಂದಿಗೆ ಲಭ್ಯವಿದೆ.

Realme 8 5G ಮತ್ತು Realme 8s 5G ಅನ್ನು ಕ್ರಮವಾಗಿ ₹18,499 ಮತ್ತು ₹19,999 ರ ಡಿಸ್ಕೌಂಟ್ ನಲ್ಲಿ ಖರೀದಿಸಬಹುದಾಗಿದೆ. ₹17,999 ಬೆಲೆಯ Realme 8 (8GB ಮತ್ತು 128GB) ಅನ್ನು ₹2000 ಪ್ರಿಪೇಯ್ಡ್ ಜೊತೆಗೆ ಮತ್ತು Realme 8 (6GB ಮತ್ತು 128GB) ಅನ್ನು ₹16,999 ರ ಜೊತೆಗೆ ₹1500 ರ Realme ಪ್ರಿಪೇಯ್ಡ್ ಕೊಡುಗೆಯನ್ನು ಪಡೆದುಕೊಳ್ಳಬಹುದು

ಇದನ್ನು ಓದಿ : Atmanirbhar DMK MP Kanimozhi : ಈ ಕಾರಣಕ್ಕೆ ಸಂಸತ್ತಿನಲ್ಲಿ ತಮಿಳು ಭಾಷೆಯಲ್ಲಿ ಭಾಷಣ ಮಾಡಿದ ಡಿಎಂಕೆ ಸಂಸದೆ..!

ಇದನ್ನೂ ಓದಿ: CDS General Bipin Rawat : ಶತ್ರುರಾಷ್ಟ್ರ ಚೀನಾದ ಬಗ್ಗೆ ಕೊನೆಯ ಬಾರಿಗೆ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಹೇಳಿದ್ದೇನು ಗೊತ್ತೇ..?

Amazon Prime membership is set to cost more after December 13: New prices and all that users need to know

Comments are closed.