ಮೊಬೈಲ್ (Mobile) ತಯಾರಿಕಾ ಕಂಪನಿಗಳು ಪ್ರತಿ ಸ್ಮಾರ್ಟ್‌ಫೋನ್ (Smartphone) ನಲ್ಲಿ ಕೆಲವು ಅದ್ಭುತ ವೈಶಿಷ್ಟ್ಯಗಳನ್ನು ಅಳವಡಿಸಿರುತ್ತಾರೆ (Android Phone Features). ಇದರಿಂದಾಗಿ ಮೊಬೈಲ್ ಫೋನ್‌ನಲ್ಲಿ ಕೆಲಸ ಮಾಡುವುದು ಇನ್ನಷ್ಟು ಸರಳ ಮತ್ತು ಸುರಕ್ಷಿತವಾಗಿರುತ್ತದೆ. ಆದರೆ ಕೆಲವು ವೈಶಿಷ್ಟ್ಯಗಳ ಬಗ್ಗೆ ಬಹಳ ಜನರಿಗೆ ತಿಳಿದಿರುವುದಿಲ್ಲ. ಅವುಗಳ ಉಪಯೋಗಿಸುವುದು ಹೇಗೆ ಎಂಬುದು ಅವರ ಅರಿವಿಗೆ ಬಂದಿರುವುದಿಲ್ಲ. ಅದಕ್ಕಾಗಿ ನಾವು ಇಂದು ನಿಮಗೆ ಸಹಾಯ ಆಗುವ ಅಂತಹ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಐದು ಅದ್ಭುತ ವೈಶಿಷ್ಟ್ಯಗಳನ್ನು ಇಲ್ಲಿ ಹೇಳಿದ್ದೇವೆ. ಅದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ ಮತ್ತು ಸ್ಮಾರ್ಟ್ಫೋನ್‌ನಲ್ಲಿ ಆರಾಮವಾಗಿ ಕೆಲಸ ಮಾಡಬಹುದು.
ನೀವು ತಿಳಿದುಕೊಳ್ಳಲೇ ಬೇಕಾದ ಸ್ಮಾರ್ಟ್‌ಫೋನ್‌ನ ಫೀಚರ್ಸ್:
ನೋಟಿಫಿಕೇಶನ್ ಹಿಸ್ಟರಿ:
ಇಂದು ಮೊಬೈಲ್ ಫೋನ್ ಡೇಟಾ ಆನ್ ಮಾಡಿದ ತಕ್ಷಣ ಇದ್ದಕ್ಕಿದ್ದಂತೆ ಹಲವು ನೋಟಿಫಿಕೇಷನ್ ಗಳು ಬರುತ್ತವೆ. ನಾವು ಅಗತ್ಯ ನೋಟಿಫಿಕೇಷನ್‌ಗಳನ್ನು ನೋಡುತ್ತೇವೆ ಮತ್ತು ಉಳಿದವುಗಳನ್ನು ಡಿಲೀಟ್ ಮಾಡುತ್ತೇವೆ. ಆದರೆ ಹಾಗೆ ನೋಡಿದ ನೋಟಿಫಿಕೇಷನ್ ಗಳನ್ನು ಪುನಃ ನೋಡಬಹುದು ಎಂದು ನಿಮಗೆ ಗೊತ್ತಾ? ಅವುಗಳನ್ನು ನೋಡಲು ಬಯಸಿದರೆ, ನೋಟಿಫಿಕೇಷನ್ ಹಿಸ್ಟರಿ ಸಹಾಯದಿಂದ ಸುಲಭವಾಗಿ ನೋಡಬಹುದು. ಇದಕ್ಕಾಗಿ, ನೀವು ಸೆಟ್ಟಿಂಗ್‌ಗೆ ಹೋಗಿ, ಅಲ್ಲಿ ನೋಟಿಫಿಕೇಷನ್ ಒಳಗೆ ಹೋಗಿ, ನಂತರ ನೋಟಿಫಿಕೇಷನ್ ಹಿಸ್ಟರಿಯನ್ನು ಆನ್ ಮಾಡಬೇಕು.
ಬ್ಯಾಕ್‌ಗ್ರೌಂಡ್ ಡಾಟಾ ಯುಸೇಜ್:
ನೀವು ಅನಗತ್ಯವಾಗಿ ಬಳಕೆಯಾಗುತ್ತಿರುವ ಬ್ಯಾಕ್‌ಗ್ರೌಂಡ್ ಡಾಟಾವನ್ನು ಆಫ್ ಮಾಡಬಹುದು. ಡೇಟಾ ಅಗತ್ಯವಿರುವ ಅಪ್ಲಿಕೇಶನ್‌ಗಳನ್ನು ಮಾತ್ರ ಆಯ್ಕೆ ಮಾಡಬಹುದು. ಅಂದರೆ, ಯಾವ ಅಪ್ಲಿಕೇಶನ್ ಹಿನ್ನೆಲೆಯಲ್ಲಿ ಡೇಟಾವನ್ನು ಬಳಸುತ್ತದೆ ಎಂಬುದನ್ನು ನೀವು ಮಾನ್ಯುವಲಿ ನಿರ್ಧರಿಸಬಹುದು. ಅದಕ್ಕಾಗಿ, ನೀವು ಸೆಟ್ಟಿಂಗ್‌ನಲ್ಲಿ ಮೊಬೈಲ್ ನೆಟ್‌ವರ್ಕ್ ಮತ್ತು ಡೇಟಾ ಬಳಕೆಗೆ ಹೋಗಬೇಕು. ನಂತರ ಅಪ್ಲಿಕೇಶನ್ ಅನ್ನು ಕ್ಲಿಕ್ ಮಾಡಿ ಮತ್ತು ಇಲ್ಲಿಂದ ನೀವು ಹಿನ್ನೆಲೆ ಡೇಟಾವನ್ನು ಆನ್ ಅಥವಾ ಆಫ್ ಮಾಡಬಹುದು.
ಒನ್ ಹ್ಯಾಂಡ್ ಮೋಡ್:
ಇಂದು ಸ್ಮಾರ್ಟ್‌ಫೋನ್‌ನ ಪರದೆಯು ಸಾಮಾನ್ಯವಾಗಿ 6 ಇಂಚಿನ ಮೇಲಿರುತ್ತದೆ. ಇಷ್ಟು ದೊಡ್ಡ ಪರದೆಯನ್ನು ಒಂದೇ ಕೈಯಲ್ಲಿ ನಿರ್ವಹಿಸುವುದು ಕಷ್ಟ. ಆದ್ದರಿಂದ, ವಿಷಯಗಳನ್ನು ಸುಲಭಗೊಳಿಸಲು, ಸ್ಮಾರ್ಟ್‌ಫೋನ್‌ನಲ್ಲಿ ಒನ್ ಹ್ಯಾಂಡ್ ಮೋಡ್ ಫೀಚರ್ ಲಭ್ಯವಿದೆ. ಇದರಿಂದ ನೀವು ದೊಡ್ಡ ಪರದೆಯಲ್ಲಿ ಸುಲಭವಾಗಿ ಕೆಲಸ ಮಾಡಬಹುದು. ಸಾಮಾನ್ಯವಾಗಿ, ನೀವು ಮೊಬೈಲ್‌ನ ನೋಟಿಫಿಕೇಷನ್ ಪ್ಯಾನಲ್ ಅನ್ನು ತೆರೆಯಲು ಬಯಸಿದರೆ, ಇದಕ್ಕಾಗಿ ನೀವು ನಿಮ್ಮ ಕೈಯನ್ನು ಎತ್ತಬೇಕಾಗುತ್ತದೆ. ಆದರೆ ನೀವು ಒನ್ ಹ್ಯಾಂಡ್ ಮೋಡ್ ಅನ್ನು ಓಪನ್ ಮಾಡುವ ಮೂಲಕ ಈ ಕೆಲಸವನ್ನು ಮಾಡಿದರೆ, ನಂತರ ನೀವು ಮೊಬೈಲ್‌ನ ಬಾಟಮ್ ನಿಂದಲೇ ಅಪ್ಲಿಕೇಷನ್ ನೋಟಿಫಿಕೇಷನ್ ಅನ್ನು ಪ್ರವೇಶಿಸಬಹುದು. ಅದಷ್ಟೇ ಅಲ್ಲ, ಬಾಟಮ್‌ನಲ್ಲಿ ಒಮ್ಮೆ ಕ್ಲಿಕ್ ಮಾಡುವ ಮೂಲಕ ನೀವು ಯಾವುದೇ ಅಪ್ಲಿಕೇಶನ್‌ನಲ್ಲಿ ಟಾಪ್ ವಿಷಯಗಳನ್ನು ಪ್ರವೇಶಿಸಬಹುದು. ನಿಮ್ಮ ಅನುಕೂಲಕ್ಕೆ ತಕ್ಕಂತೆ ನೀವು ಈ ಸೆಟ್ಟಿಂಗ್ ಅನ್ನು ಆನ್ ಅಥವಾ ಆಫ್ ಮಾಡಿಕೊಳ್ಳಬಹುದು.
ಸ್ಮಾರ್ಟ್ ಲಾಕ್:
ಸ್ಮಾರ್ಟ್‌ಫೋನ್ ನಿಮ್ಮ ಬಳಿ ಇರುವಾಗಲೂ ಅದನ್ನು ತೆರೆಯಲು ನೀವು ಲಾಕ್ ಅಥವಾ ಪ್ಯಾಟರ್ನ್ ಅನ್ನು ಪದೇ ಪದೇ ನಮೂದಿಸಬೇಕಾಗುತ್ತದೆ. ಇದರಿಂದ ಹಲವು ಸಲ ಕಿರಿಕಿರಿಯ ಅನುಭವವಾಗುತ್ತದೆ. ಆದರೆ ಸ್ಮಾರ್ಟ್‌ಲಾಕ್ ಆಯ್ಕೆಯನ್ನು ಆನ್ ಮಾಡಿಕೊಳ್ಳುವ ಮೂಲಕ ಹಲವು ಆಯ್ಕೆಗಳನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ನಿಮ್ಮ ಮೊಬೈಲ್ ಫೋನ್ ನಿಮ್ಮ ಬಳಿ ಇರುವಾಗ, ಈ ಸೆಟ್ಟಿಂಗ್ ಆನ್ ಆಗಿರುವ ಕಾರಣ ಅದು ಮತ್ತೆ ಮತ್ತೆ ಲಾಕ್ ಅನುಮತಿಯನ್ನು ಕೇಳುವುದಿಲ್ಲ. ಇದನ್ನು ಸಿಸ್ಟಂ ಸೆಕ್ಯೂರಿಟಿ ಫೀಚರ್ ಗೆ ಹೋಗುವ ಮೂಲಕ ನೀವು ಈ ಸೆಟ್ಟಿಂಗ್ ಅನ್ನು ಆನ್ ಮಾಡಿಕೊಳ್ಳಬಹುದು.
(Android Phone Features you should know these for better operating)