India vs Australia 3rd test : ಇಂದೋರ್ ಟೆಸ್ಟ್ ಪಂದ್ಯ; ಆಸೀಸ್ ಸ್ಪಿನ್ ಜಾಲದಲ್ಲಿ ಬಂಧಿಯಾದ ಭಾರತ, ಸೋಲಿನ ಸುಳಿಯಲ್ಲಿ ರೋಹಿತ್ ಬಳಗ

ಇಂದೋರ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ (India Vs Australia Border-Gavaskar test series) 3ನೇ ಪಂದ್ಯದಲ್ಲಿ ಆತಿಥೇಯ ಭಾರತ ಸೋಲಿನ ಸುಳಿಯಲ್ಲಿ ಸಿಲುಕಿದೆ. ಪ್ರಥಮ ಇನ್ನಿಂಗ್ಸ್’ನಲ್ಲಿ 88 ರನ್’ಗಳ ಹಿನ್ನಡೆಗೊಳಗಾದ ಭಾರತ, ದ್ವಿತೀಯ ಇನ್ನಿಂಗ್ಸ್’ನಲ್ಲಿ ಆಸೀಸ್’ನ ಅನುಭವಿ ಆಫ್’ಸ್ಪಿನ್ನರ್ ನೇಥನ್ ಲಯಾನ್ ದಾಳಿಗೆ ತತ್ತರಿಸಿ ಕೇವಲ 163 ರನ್’ಗಳಿಗೆ ಆಲೌಟಾಗಿದ್ದು, ಆಸ್ಟ್ರೇಲಿಯಾ ತಂಡ ಕೇವಲ 76 ರನ್’ಗಳ ಗೆಲುವಿನ ಗುರಿ ಪಡೆದಿದೆ.

ಭಾರತದ ದ್ವಿತೀಯ ಇನ್ನಿಂಗ್ಸ್’ನಲ್ಲಿ ಚೇತೇಶ್ವರ್ ಪೂಜಾರ 59 ರನ್ ಹಾಗೂ ಶ್ರೇಯಸ್ ಅಯ್ಯರ್ 26 ರನ್ ಗಳಿಸಿದ್ದನ್ನು ಹೊರತು ಪಡಿಸಿದ್ರೆ, ಬೇರಾವ ಬ್ಯಾಟ್ಸ್’ಮನ್ ಕೂಡ ತಂಡಕ್ಕೆ ಆಸರೆಯಾಗಲಿಲ್ಲ. ನಾಯಕ ರೋಹಿತ್ ಶರ್ಮಾ (12), ಕನ್ನಡಿಗ ಕೆ.ಎಲ್ ರಾಹುಲ್ ಬದಲು ಪ್ಲೇಯಿಂಗ್ XI ನಲ್ಲಿ ಸ್ಥಾನ ಪಡೆದ ಶುಭಮನ್ ಗಿಲ್ (5), ವಿರಾಟ್ ಕೊಹ್ಲಿ (13), ರವೀಂದ್ರ ಜಡೇಜ (7), ವಿಕೆಟ್ ಕೀಪರ್ ಕೆ.ಎಸ್ ಭರತ್ (3) ಮತ್ತೊಮ್ಮೆ ತಂಡಕ್ಕೆ ಕೈ ಕೊಟ್ಟರು. ಆಸೀಸ್ ಪರ ಮಾರಕ ದಾಳಿ ಸಂಘಟಿಸಿದ ನೇಥನ್ ಲಯಾನ್ 64 ರನ್ನಿಗೆ 8 ವಿಕೆಟ್ ಕಬಳಿಸಿದರು.

ಇದಕ್ಕೂ ಮೊದಲು 4 ವಿಕೆಟ್ ನಷ್ಟಕ್ಕೆ 156 ರನ್’ಗಳಿಂದ ದ್ವಿತೀಯ ದಿನದಾಟ ಮುಂದುವರಿಸಿದ ಆಸ್ಟ್ರೇಲಿಯಾ, ತನ್ನ ಪ್ರಥಮ ಇನ್ನಿಂಗ್ಸ್’ನಲ್ಲಿ 197 ರನ್’ಗಳಿಗೆ ಆಲೌಯಾಯಿತು. 186 ರನ್ನಿಗೆ 4 ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿದ್ದ ಆಸೀಸ್, ರವಿಚಂದ್ರನ್ ಅಶ್ವಿನ್ ಮತ್ತು ವೇಗಿ ಉಮೇಶ್ ಯಾದವ್ ದಾಳಿಗೆ ನಲುಗಿ ಕೇವಲ 11 ರನ್ ಅಂತರದಲ್ಲಿ ಕೊನೆಯ 6 ವಿಕೆಟ್’ಗಳನ್ನು ಕಳೆದುಕೊಂಡಿತು. ಭಾರತ ಪರ ಅಶ್ವಿನ್ 44 ರನ್ನಿಗೆ 3 ವಿಕೆಟ್ ಪಡೆದ್ರೆ, ರವೀಂದ್ರ ಜಡೇಜ 78 ರನ್ನಿಗೆ 4 ವಿಕೆಟ್ ಪಡೆದರು. ವೇಗಿ ಉಮೇಶ್ ಯಾದವ್ 12 ರನ್ನಿಗೆ 3 ವಿಕೆಟ್ ಉರುಳಿಸಿದರು.

ಇದನ್ನೂ ಓದಿ : Japrit Bumrah : ವೇಗಿ ಜಸ್‌ಪ್ರೀತ್ ಬುಮ್ರಾಗೆ ನ್ಯೂಜಿಲೆಂಡ್‌ನಲ್ಲಿ ಶಸ್ತ್ರಚಿಕಿತ್ಸೆ, ಏಳು ತಿಂಗಳು ಕ್ರಿಕೆಟ್‌ನಿಂದ ಔಟ್

ಇದನ್ನೂ ಓದಿ : Michael Clarke backs KL Rahul : “ನಾನು ಕ್ಯಾಪ್ಟನ್ ಆಗಿದ್ದಿದ್ರೆ ಕೆ.ಎಲ್ ರಾಹುಲ್‌ರನ್ನು ಪ್ಲೇಯಿಂಗ್ XIನಿಂದ ಕೈಬಿಡುತ್ತಿರಲಿಲ್ಲ” ಎಂದ ಆಸೀಸ್ ಮಾಜಿ ನಾಯಕ

India vs Australia 3rd test India trapped in the Aussie spin net Rohit Sharma team in the vortex of defeat

Comments are closed.