Apple ಕಂಪೆನಿಯ ಐಪೋನ್ 11 ಪ್ರೋ ಮ್ಯಾಕ್ಸ್ (iPhone 11 Pro Max ) ಮೊಬೈಲ್‌ಗಳು ಇದೀಗ ಬಾರೀ ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ನವರಾತ್ರಿ, ದಸರಾ, ದೀಪಾವಳಿ ಹಬ್ಬದ ಸಂದರ್ಭದಲ್ಲಿಯೇ ಮೊಬೈಲ್ ಪೋನ್‌ಗಳಿಗೆ ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ( Flipkart Big Billion Days Sale 2023)ನಲ್ಲಿ ಭರ್ಜರಿಗೆ ಆಫರ್ ಘೋಷಿಸಿದೆ.
Apple iPhone 11 Pro Max ಸ್ಮಾರ್ಟ್ ಪೋನ್ ಮಿಡ್‌ನೈಟ್ ಗ್ರೀನ್ ಬಣ್ಣದಲ್ಲಿ ಲಭ್ಯವಿದ್ದು, 64 GB ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿದೆ. ಈ ಮೊಬೈಲ್ ಮೂಲ ಬೆಲೆ 109,900 ರೂಪಾಯಿ. ಆದರೆ Flipkart ನೀಡುತ್ತಿರುವ ರಿಯಾಯಿತಿ ಸೇಲ್‌ನಲ್ಲಿ ಈ ಸ್ಮಾರ್ಟ್‌ಪೋನ್ ಅನ್ನು ಕೇವಲ 95,699 ರೂಪಾಯಿ ಖರೀದಿ ಮಾಡಬಹುದಾಗಿದೆ.

ಕೇವಲ ಪ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್ ಮಾತ್ರವಲ್ಲದೇ ಐಪೋನ್ 11 ಪ್ರೋ ಮ್ಯಾಕ್ಸ್ ಮೊಬೈಲ್ ಖರೀದಿಯ ವೇಳೆಯಲ್ಲಿ ಐಸಿಐಸಿಐ ಕ್ರೆಡಿಟ್ ಕಾರ್ಡ್ ಹೊಂದಿರುವ ಗ್ರಾಹಕರು ಹೆಚ್ಚುವರಿಯಾಗಿ ಶೇ.10ರ ರಿಯಾಯಿತಿಯ ಜೊಗೆಗೆ ವಿಶೇಷ ರೂ. 1,000 ವಿನಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಇದನ್ನೂ ಓದಿ : 8GB Ram 64MP ಕ್ಯಾಮೆರಾ : ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿ OPPO F21 Pro
ಅಷ್ಟೇ ಅಲ್ಲದೇ ಹಳೆಯ ಪೋನ್ ಜೊತೆಗೆ Apple iPhone 11 Pro Max ಅನ್ನು ಎಕ್ಸ್‌ಚೇಂಜ್ ಮಾಡಿಕೊಳ್ಳಲು ಅವಕಾಶವಿದೆ. ಅಲ್ಲದೇ ವಿವಿಧ ಬ್ಯಾಂಕುಗಳು ಇಎಂಐ ಆಫರ್‌ಗಳನ್ನು ನೀಡುತ್ತಿದ್ದು, ಅತ್ಯಂತ ಕಡಿಮೆ ಬೆಲೆಯಲ್ಲಿ ಈ ಪೋನ್ ಖರೀದಿ ಮಾಡಲು ಇದೊಂದು ಸುವರ್ಣಾವಕಾಶ.
iPhone 11 Pro Max ವೈಶಿಷ್ಟ್ಯ
Flipkart ಸಾಲು ಸಾಲು ಹಬ್ಬದ ಹೊತ್ತಲೇ ಐಪೋನ್ ಸ್ಮಾರ್ಟ್‌ಪೋನ್‌ಗಳ ಮೇಲೆ ಬಾರೀ ರಿಯಾಯಿತಿ ಘೋಷಣೆ ಮಾಡಿದೆ. ಅದರಲ್ಲೂ ಮೊಬೈಲ್ ಖರೀದಿಗೆ ಯೋಚನೆ ಮಾಡುತ್ತಿರುವವರಿಗೆ ಐಫೋನ್ 11 ಪ್ರೊ ಮ್ಯಾಕ್ಸ್ ಉತ್ತಮ ಮೊಬೈಲ್ ಎನ್ನಬಹುದು. ಈ ಬಾರಿ ಐಪೋನ್ ವಿವಿಧ ಸರಣಿಗಳನ್ನು ಬಿಡುಗಡೆ ಮಾಡಿದೆ.

ಅಷ್ಟಕ್ಕೂ ಐಫೋನ್ 11 ಪ್ರೊ ಮ್ಯಾಕ್ಸ್ ಹಲವು ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಈ ಐಫೋನ್ 11 ಪ್ರೊ ಮ್ಯಾಕ್ಸ್ 6.5-ಇಂಚಿನ ಸೂಪರ್ ರೆಟಿನಾ XDR ಡಿಸ್ಪ್ಲೇ ಒಳಗೊಂಡಿದೆ. ಅತ್ಯುತ್ತಮ ದರ್ಜೆಯ ಸ್ಮಾರ್ಟ್ ಪೋನ್ ಅಸಾಧಾರಣ A13 ಬಯೋನಿಕ್ ಚಿಪ್ ಪ್ರೊಸೆಸರ್ ಹೊಂದಿದ್ದು, ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸಲಿದೆ. ಜೊತೆಗೆ ದೀರ್ಘ ಅವಧಿಯ ಬ್ಯಾಟರಿಯನ್ನು ಹೊಂದಿದೆ.
ಇದನ್ನೂ ಓದಿ : ವಿಶ್ವಕಪ್ 2023: ಜಿಯೋ ಹೊಸ 6 ಪ್ರಿಪೇಯ್ಡ್ ಫ್ಲಾನ್ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್ ಡೇಟಾ
ಇನ್ನು iPhone 11 Pro Max ಮೂರು ಕ್ಯಾಮೆರಾಗಳನ್ನು ಒಳಗೊಂಡಿದ್ದು, 12 MP ಕ್ಯಾಮೆರಾದ ಮೂಲಕ ಅತ್ಯುತ್ತಮ ಗುಣಮಟ್ಟದ ಪೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿಯಬಹುದಾಗಿದೆ. ಮೂರು ಕ್ಯಾಮೆರಾಗಳ ಮೂಲಕ ಅಲ್ಟ್ರಾವೈಡ್, ವೈಡ್ ಮತ್ತು ಟೆಲಿಪೋಟೋಗಳನ್ನು ತೆಗೆಯಲು ಸಹಕಾರಿಯಾಗಿದೆ.

ಅಲ್ಟ್ರಾ ವೈಡ್ ಕ್ಯಾಮೆರಾವು 120° ಆಂಗಲ್‌ನಲ್ಲಿ ಪೋಟೋಗಲನ್ನು ತೆಗೆಯಬಹುದಾಗಿದ್ರೆ, ವೈಡ್ ಕ್ಯಾಮೆರಾವು 100 ಪ್ರತಿಶತ ಫೋಕಸ್ ಪಿಕ್ಸೆಲ್‌ಗಳು ಮತ್ತು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅನ್ನು ಹೊಂದಿದೆ. ಅತ್ಯಂತ ಕಡಿಮೆ ಬೆಳಕಿನಲ್ಲಿಯೂ ಡಿಎಸ್‌ಎಲ್‌ಆರ್ ಗುಣಮಟ್ಟದ ಪೋಟೋಗಳನ್ನು ಸೆರೆ ಹಿಡಿಯಲು ಸಹಕಾರಿಯಾಗಿದೆ.
ಇದನ್ನೂ ಓದಿ : ಕೇವಲ 16,399 ರೂ.ಗೆ ಖರೀದಿಸಿ Apple IPhone 12 : ಫ್ಲಿಪ್‌ಕಾರ್ಟ್ ಬಿಗ್ ಬಿಲಿಯನ್ ಡೇಸ್ ಸೇಲ್
ಇನ್ನು ಈ ಸ್ಮಾರ್ಟ್‌ಪೋನ್‌ನ ಮತ್ತೊಂದು ವಿಶೇಷತೆಯೇ ಟೆಲಿಫೋಟೋ ಕ್ಯಾಮೆರಾ. ಈ ಕ್ಯಾಮೆರಾವು ಎಫ್/2.0 ಅಪರ್ಚರ್ ಅನ್ನು ಹೊಂದಿದೆ ಮತ್ತು ಸ್ಟ್ರೈಕಿಂಗ್ ಕ್ಲೋಸ್-ಅಪ್ ಶಾಟ್‌ಗಳನ್ನು ಸೆರೆಹಿಡಿಯಲು 2x ಆಪ್ಟಿಕಲ್ ಜೂಮ್ ಸಹಾಯವನ್ನು ನೀಡುತ್ತದೆ. ಅಲ್ಲದೇ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡಿಂಗ್ ಮಾಡಲು ಅತ್ಯುತ್ತಮ ಎನಿಸಿದೆ.
ಐಫೋನ್ 11 ಪ್ರೊ ಮ್ಯಾಕ್ಸ್ ಸ್ಮಾರ್ಟ್‌ಪೋನ್ ಅತ್ಯುತ್ತಮ ತಂತ್ರಜ್ಞಾನಗಳನ್ನು ಒಳಗೊಂಡಿದೆ. ಅದ್ರಲ್ಲೂ ಐಪೋನ್ ಸರಣಿಯಲ್ಲಿ ಅತ್ಯುತ್ತಮ ಕ್ಯಾಮೆರಾ ಒಳಗೊಂಡಿರುವ ಮೊಬೈಲ್ ಅನ್ನೋ ಖ್ಯಾತಿಗೆ ಪಾತ್ರವಾಗಿದೆ. ದಸರಾ, ದೀಪಾವಳಿಯ ಹೊತ್ತಲ್ಲಿ ಐಪೋನ್ ಖರೀದಿಸಲು ಯೋಚಿಸುತ್ತಿರುವವರಿಗೆ ಇದೊಂದು ಅತ್ಯಂತ ಉತ್ತಮ ಆಯ್ಕೆ ಎನಿಸಲಿದೆ.
Apple iPhone 11 Pro Max Price Drop Golden Opportunity in Flipkart Big Billion Days Sale