ಭಾರತದ ಪಬ್ಜಿ ಪ್ರಿಯರಿಗೆ ಕಾಯುವಿಕೆಯ ಕಾಲ ಮುಗಿದಿದೆ. ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿಯೊಂದು ಹೊರಬಿದ್ದಿದೆ. ಬ್ಯಾಟೆಲ್ ಗ್ರೌಂಡ್ ಮೊಬೈಲ್ ಇಂಡಿಯಾ ಆಂಡ್ರಾಯ್ಡ್ ಬಳಕೆದಾರರಿಗಾಗಿ ಪೂರ್ವ ನೋಂದಣಿಯನ್ನು ಪ್ರಾರಂಭಿಸಿದ್ದು, ಪೂರ್ವ ನೋಂದಣಿ ಮಾಡಿದವರಿಗೆ ರಿವಾರ್ಡ್ಸ್ ಘೋಷಣೆ ಮಾಡಿದೆ.
ಆರಂಭಿಕ ಹಂತದಲ್ಲಿ ಐಒಎಸ್ ಬಳಕೆದಾರರಿಗೆ ಇದು ಯಾವಾಗ ಲಭ್ಯವಾಗಲಿದೆ ಎಂಬ ಮಾಹಿತಿ ಸಿಕ್ಕಿಲ್ಲ. ಆದ್ರೆ ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಆಟ ಉಚಿತವಾಗಿರಲಿದೆ ಎಂದು ಗೇಮ್ ಡೆವಲಪರ್ ಕ್ರಾಫ್ಟನ್ ಹೇಳಿದೆ.
ಪಬ್ಜಿ ಮೊಬೈಲ್ ನ ಭಾರತೀಯ ಆವೃತ್ತಿ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಬ್ಯಾಟಲ್ ಗ್ರೌಂಡ್ ಮೊಬೈಲ್ ಇಂಡಿಯಾ ಜೂನ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆಟಗಾರರ ಸಂಖ್ಯೆ ಹೆಚ್ಚಿಸುವ ಸಲುವಾಗಿ ಈಗಾಗಲೇ ಹೆಸರು ನೋಂದಾಯಿಸುವ ಆಟಗಾರರಿಗೆ ರಿವಾರ್ಡ್ಸ್ ನೀಡುವುದಾಗಿ ಕ್ರಾಫ್ಟನ್ ಹೇಳಿದೆ.
ಪೂರ್ವ ನೋಂದಣಿ ಕೇವಲ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ. ಪೂರ್ವ ನೋಂದಣಿ ಲಿಂಕ್ ಲೈವ್ ಆಗಿದ್ದು, ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳ ಬಹುದಾಗಿದೆ.
