ಸೋಮವಾರ, ಏಪ್ರಿಲ್ 28, 2025
HometechnologyMobile Battery Savings : ಮೊಬೈಲ್ ಚಾರ್ಜ್ ಉಳಿಸುವ ಸುಲಭ ಉಪಾಯಗಳು

Mobile Battery Savings : ಮೊಬೈಲ್ ಚಾರ್ಜ್ ಉಳಿಸುವ ಸುಲಭ ಉಪಾಯಗಳು

- Advertisement -

ಮೊಬೈಲ್ ನಮ್ಮ ಜೀವನದ ಅವಿಭಾಜ್ಯ ಅಂಗ ಎಂದರೆ ತಪ್ಪಾಗಲಾರದು. ಈ ಶತಮಾನದಲ್ಲಿ ಪ್ರತಿಯೊಬ್ಬರಲ್ಲೂ ಮೊಬೈಲ್ ಇರುವುದು ಸರ್ವೇ ಸಾಮಾನ್ಯ. ಬೆಳಿಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವ ವರೆಗೂ ನಮ್ಮ ಬಳಿಯಲ್ಲಿ ಮೊಬೈಲ್ ಇರುತ್ತದೆ. ಇತ್ತೀಚಿಗೆ ಮೊಬೈಲ್ ಮಿನಿ ಕಂಪ್ಯೂಟರ್ ಆಗಿದ್ದು ಹೊಸ ಹೊಸ ಫೀಚರ್ಸ್ ಗಳನ್ನು ಹೊಂದಿದೆ. ಮೊಬೈಲ್ ಕಾಲದಿಂದ ಕಾಲಕ್ಕೆ ನವೀಕರಣಗೊಳ್ಳುತ್ತಾ, ಮೊಬೈಲ್ ಪ್ರೇಮಿಗಳ ಅಂದರೆ ಮೊಬೈಲ್ ಬಳಕೆದಾರರ ಖರೀದಿ ಮಾಡಿಕೊಳ್ಳುವ ಉತ್ಸಾಹವನ್ನು ಹೆಚ್ಚಿಸಿದೆ. ದೈನಂದಿನ ಜೀವನದಲ್ಲಿ ಮಹತ್ವದ ಪಾತ್ರ ವಹಿಸುವ ಮೊಬೈಲ್ ಒಂದಿಷ್ಟು ಸಮಸ್ಯೆಗಳನ್ನ ಹೊಂದಿದೆ ಅದರಲ್ಲಿ ಮೊಬೈಲ್ ಬ್ಯಾಟರಿ ಅಂದರೆ ಚಾರ್ಜ್ ಮಾಡುವುದು ಒಂದು. ಕೆಲವೊಮ್ಮೆ ಅಗತ್ಯ ಸಮಯದಲ್ಲಿ ಬ್ಯಾಟರಿ ಲೋ ಆಗಿ ಮೊಬೈಲ್ ಸ್ವಿಚ್ ಆಫ್ ಆಗುವುದೂ ಉಂಟು. ಅದರಲ್ಲಿಯೂ ದೂರದ ಪ್ರಯಾಣವನ್ನು ಕೈಗೊಂಡಾಗ ಮೊಬೈಲ್ ಬ್ಯಾಟರಿ ಕೈ ಕೊಟ್ಟರೆ ನಮ್ಮನ್ನು ಆ ದೇವರೇ ಕಾಪಾಡ ಬೇಕಾಗುತ್ತದೆ. ಹಾಗಾದರೆ ಮೊಬೈಲ್ ಅಲ್ಲಿ ಚಾರ್ಜ್ ಅನ್ನು ( Mobile Battery Savings) ಉಳಿಸಲು ಸಾಧ್ಯವೇ ಇಲ್ಲವೇ ಎಂದು ಯೋಚಿಸಿದರೆ ಖಂಡಿತಾ ಇದೆ. ನಾವು ಮೊಬೈಲ್ ಚಾರ್ಜ್ ಉಳಿಸಿಕೊಳ್ಳಲು ಒಂದಿಷ್ಟು ಸುಲಭ ಉಪಾಯಗಳಿವೆ. ಅವುಗಳೆಂದರೆ :

ಮೊದಲನೆಯದು ನಿಮ್ಮ ಮೊಬೈಲ್ ಸೆಟ್ಟಿಂಗ್ಸ್ ಗೆ ತೆರಳಿ ಅಲ್ಲಿ ಮೊಬೈಲ್ ವೈಬ್ರೇಷನ್ ಆನ್ ಆಗಿದ್ದಲ್ಲಿ ಆಫ್ ಮಾಡಿ. ಜೊತೆಗೆ ಗೂಗಲ್ ಅಕೌಂಟ್ ಸೆಟ್ಟಿಂಗ್ಸ್ ನಲ್ಲಿ ನೋಟಿಫಿಕೇಶನ್ ಕಳಿಸುವ ಗೂಗಲ್ ಟಿವಿ ಗೂಗಲ್ ಡಾಕ್ಸ್ ಮುಂತಾದ ಅಪ್ಲಿಕೇಶನ್ ಗಳನ್ನು ಆಫ್ ಮಾಡಿ. ಹೀಗೆ ಮಾಡುವುದರಿಂದ ಚಾರ್ಜ್ ಖಾಲಿ ಆಗದಂತೆ ನೋಡಿಕೊಳ್ಳಬಹುದು. ಇಷ್ಟೇ ಅಲ್ಲದೆ ಯಾವ ಅಪ್ಲಿಕೇಶನ್ ಹೆಚ್ಚು ನೋಟಿಫಿಕೇಶನ್ ಕಳಿಸುತ್ತದೆಯೋ ಆ ಆಪ್ ನ ಬ್ಯಾಗ್ರೌಂಡ್ ಡಾಟಾವನ್ನು ಆಫ್ ಮಾಡಿ, ಅಲ್ಲದೆ ಅನವಶ್ಯಕ ನೋಟಿಫಿಕೇಶನ್ ಗಳಿದ್ದರೆ ನೋಟಿಫಿಕೇಶನ್ ಆಫ್ ಮಾಡಿ ಇದರಿಂದ ನಾವು ಅನಾವಶ್ಯಕ ನೋಟಿಫಿಕೇಶನ್ ನಿಂದ ಬಚಾವಾಗುವುದಲ್ಲದೆ ಆ ಮೂಲಕ ನಮ್ಮ ಬ್ಯಾಟರಿ ಚಾರ್ಜ್ ಬಹುಬೇಗ ಇಳಿಕೆ ಆಗುವುದನ್ನು ತಡೆದು ಹೆಚ್ಚು ಸಮಯ ಬಳಸಬಹುದು.

ಈ ಉಪಾಯದಿಂದ ನಮ್ಮ ಮೊಬೈಲ್ ಬ್ಯಾಟರಿ ಉಳಿತಾಯದ ಜೊತೆ ದೂರದ ಪ್ರಯಾಣ ಬೆಳೆಸಿದಾಗ ಎಲ್ಲಿ ಮೊಬೈಲ್ ಚಾರ್ಜ್ ಖಾಲಿಯಾಗಿ ಬಿಡುತ್ತದೆಯೋ ಎಂದು ಹೆದರುವ ಅವಶ್ಯಕತೆ ಇಲ್ಲ. ಆರಾಮವಾಗಿ ನಮಗೆ ಬೇಕಾದಂತೆ ಮೊಬೈಲ್ ಅನ್ನು ಬಳಸಬಹುದು.

ಇದನ್ನೂ ಓದಿ: Yellow Alert : ಕರ್ನಾಟಕ, ಕರಾವಳಿಯಲ್ಲಿ 4 ದಿನ ಬಾರೀ ಮಳೆ : ಯೆಲ್ಲೋ ಅಲರ್ಟ್‌ ಘೋಷಣೆ

ಇದನ್ನೂ ಓದಿ: Ayodhya Ram Mandir : ರಾಮಮಂದಿರ ನಿರ್ಮಾಣ ಸಮಿತಿಗೆ ಶಾಕ್ : ದೇಣಿಗೆ ಮೊತ್ತದ 22 ಕೋಟಿ ರೂ. ಚೆಕ್ ತಿರಸ್ಕೃತ

Best Methods of Mobile Battery Savings

RELATED ARTICLES

Most Popular