Best Photo Editing Website : ನಿಮ್ಮ ಫೋಟೋವನ್ನು ನೀವೆ ಎಡಿಟ್ ಮಾಡಿ

Best Photo Editing Website : ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ದಿನಕಳೆದಂತೆ ಹೊಸ ಹೊಸ ಆವಿಸ್ಕಾರಗಳನ್ನು ಮಾಡಲಾಗುತ್ತಿದೆ. ತಂತ್ರಜ್ಞಾನದ ಬೆಳವಣಿಗೆಯ ವೇಗಕ್ಕೆ ನಾವು ಹೊಂದಿಕೊಂಡು ನಮ್ಮನ್ನು ಅಪಡೇಟೆಡ್ ಆಗಿ ಇಟ್ಟುಕೊಳ್ಳುವು ಇಂದು ಮುಖ್ಯವಾಗಿದೆ. ಮೊದಲಿನಂತೆ ಯಾವ ಕೆಲಸಕ್ಕೂ ಯಾರಿಗೂ ಕಾಯುವ ಅವಶ್ಯಕತೆ ಇಲ್ಲ. ನಮ್ಮಲ್ಲಿನ ಗೂಗಲ್ ನ ಸಹಾಯದಿಂದ ಎಲ್ಲವನ್ನೂ ಕ್ಷಣಾರ್ಧದಲ್ಲಿ ತಿಳಿದುಕೊಳ್ಳ ಬಹುದಾಗಿದೆ. ಮೊದಲಾದರೆ ಫೋಟೋ ತೆಗೆಯುವುದರಿಂದ ಹಿಡಿದು ಎಡಿಟಿಂಗ್ ಮಾಡುವವರೆಗೂ ಸೈಬರ್ ನವನಿಗಾಗಿ ಅಥವಾ ಫೋಟೋಗ್ರಾಪರ್ ನಿಗಾಗಿ ಕಾಯಬೇಕಿತ್ತು. ಆದರೆ ಇಂದು ಕಾಲ ಬದಲಾಗಿದೆ ಜೊತೆಗೆ ಎಲ್ಲಾ ತಂತ್ರಜ್ಞಾನಗಳು ಕೈ ಮುಷ್ಟಿಯಲ್ಲಿಯೇ ಇರುವಂತೆ ಆಗಿದೆ.

ಇಂದು ನಾನು ನಿಮಗೆ ಎರಡು ಫೇಸ್ ಅನಿಮೇಶ ವೆಬ್ಸೈಟ್ ಗಳ ಬಗ್ಗೆ ತಿಳಿಸಿಕೊಡಲು ಇಚ್ಛಿಸುತ್ತೇನೆ. ಈ ವೆಬ್ಸೈಟ್ ಗಳ ಸಹಾಯದಿಂದ ನಮ್ಮ ಫೋಟೋವನ್ನು ನಾವು ನಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಿಕೊಳ್ಳಬಹುದಾಗಿದೆ. ಹೌದು, ಮೈ ಹೆರಿಟೇಜ್ ಡಾಟ್ ಕಾಮ್ ಫೇಸ್ ಅನಿಮೇಷನ್ ಎಂದು ಗೂಗಲ್ ನಲ್ಲಿ ಹುಡುಕಿದಾಗ ನಮಗೆ ಅನಿಮೇಷನ್ ಲಿಂಕ್ ಸಿಗುತ್ತದೆ. ಆ ಲಿಂಕ್ ಅನ್ನು ಒತ್ತಿದಾಗ ನಮಗೆ ನಮ್ಮ ಫೋಟೋ ಅಪ್ಲೋಡ್ ಮಾಡುವ ಒಂದು ಆಪ್ಷನ್ ಕಾಣುತ್ತದೆ. ನಂತರ ಅದನ್ನು ಕ್ಲಿಕ್ ಮಾಡಿ ಅಲ್ಲಿ ಯಾವುದಾದರೂ ಒಂದು ನಮ್ಮ ಫೋಟೋನಾ ಅಪ್ಲೋಡ್ ಮಾಡಬೇಕು. ನಂತರ ನಮಗೆ ಬೇಕಾದ ಹಾಗೆ ಆ ಫೋಟೋವನ್ನು ಅನಿಮೇಷನ್ ಮಾಡಬಹುದು. ಕಣ್ಣು, ಮೂಗು, ಬಾಯಿ ಹೀಗೆ ಎಲ್ಲವನ್ನು ಚಲಿಸುವಂತೆ ಮಾಡಬಹುದು. ಇದು ಒಂದು ರೀತಿಯಲ್ಲಿ ನಮ್ಮ ಫೋಟೋವನ್ನು ಬದಲಾಯಿಸುವ ಅಂಶವಾಗಿದೆ. ಇನ್ನು ಎರಡನೆಯದಾಗಿ ಯಾವುದೇ ಡ್ಯಾಮೇಜ್ ಫೋಟೋ ಅಥವಾ ಕಪ್ಪು ಬಿಳುಪು ಫೋಟೋವನ್ನು ತೆಗೆದುಕೊಂಡು ಅದು ಸುಂದರವಾಗಿ ಕಾಣುವ ಹಾಗೆ ಮಾಡಬಹುದು. ಡ್ಯಾಮೇಜ್ ಫೋಟೋ ಇದ್ದರೆ ಅದರಲ್ಲಿ ಡ್ಯಾಮೇಜ್ ಕಾಣದ ಹಾಗೆ ಮಾಡಬಹುದು. ಕಪ್ಪು ಬಿಳುಪು ಫೋಟೋವನ್ನು ಕಲರ್ ಫೋಟೋವನ್ನಾಗಿ ಬದಲಾಯಿಸಬಹುದು.


ಹೀಗೆ ಈ ಎರಡು ರೀತಿಗಳನ್ನು ಅನುಸರಿಸುವುದರ ಮೂಲಕ ನಾವು ನಮ್ಮ ಫೋಟೋವನ್ನು ಸುಂದವಾಗಿ ಕಾಣುವ ಹಾಗೆ ಮಾಡಬಹುದು. ಅಷ್ಟೇ ಅಲ್ಲದೇ ಈ ಫೋಟೋ ಆನಿಮೇಷನ್ ಮಾಡುವ ವೆಬ್ ಸೈಟ್ ನಮ್ಮ ಸಮಯವನ್ನು ಉಳಿತಾಯ ಮಾಡುವುದರ ಜೊತೆಗೆ ನಾವು ಯಾರಿಗಾಗಿಯೂ ಕಾಯುವ ಅವಶ್ಯಕತೆ ಇಲ್ಲ ಎಂಬುದನ್ನು ತೋರಿಸುತ್ತದೆ.

ಇದನ್ನೂ ಓದಿ: Mobile Battery Save: ಮೊಬೈಲ್ ಚಾರ್ಜ್ ಉಳಿಸುವ ಸುಲಭ ಉಪಾಯಗಳು

ಇದನ್ನೂ ಓದಿ: Music Day 2022: ವಿಶ್ವ ಸಂಗೀತ ದಿನಾಚರಣೆ; ಇತಿಹಾಸ ಹಾಗೂ ಮಹತ್ವ

Best Photo Editing Website You Never Miss

Comments are closed.