Best Smartphones : 12,000 ರೂಪಾಯಿಗಳ ಒಳಗೆ ಖರೀದಿಸಬಹುದಾದ ಬೆಸ್ಟ್‌ ಸ್ಮಾರ್ಟ್‌ಫೋನ್‌ಗಳು

ಭಾರತದ ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹಲವಾರು ಕಂಪನಿಯ ಫೋನ್‌ಗಳಿವೆ. ಹಾಗೆಯೇ ಸ್ಮಾರ್ಟ್‌ಫೋನ್‌ಗಳು ತಮ್ಮನ್ನು ಸ್ಪರ್ಧೆಗೆ ಒಡ್ಡಿಕೊಂಡಿವೆ. ಕೆಲವು ಬಜೆಟ್‌ ಬೆಲೆಯವಾದರೆ ಇನ್ನು ಕೆಲವು ದುಬಾರಿಯವು. ರಿಯಲ್‌ಮಿ, ಸ್ಯಾಮ್‌ಸಂಗ್‌, ಲಾವಾದಂತಹ ಫೋನ್‌ಗಳು ಗ್ರಾಹಕರಿಗೆ ಅನುಕೂಲವಾಗುವಂತೆ ಸ್ಮಾರ್ಟ್‌ಫೋನ್‌ಗಳನ್ನು (Best Smartphones) ಮಾರುಕಟ್ಟೆಗೆ ಬಿಡುಗಡೆ ಮಾಡಿವೆ. ನಿಮಗೆ ಬಜೆಟ್‌ ಬೆಲೆಯ ಹೊಸ ಸ್ಮಾರ್ಟ್‌ಫೋನ್‌ ಖರೀದಿಸುವ ಯೋಚನೆಯಿದ್ದರೆ ಇಲ್ಲಿ ಹೇಳಿರುವ ಸ್ಮಾರ್ಟ್‌ಫೋನ್‌ಗಳನ್ನೊಮ್ಮೆ ಗಮನಿಸಿ. ಎಲ್ಲಾ ವೈಶಿಷ್ಟ್ಯಗಳಿರುವ 12,000 ರೂ. ಗಳ ಒಳಗೆ ಖರೀದಿಸಬಹುದಾದ ಬೆಸ್ಟ್‌ ಫೋನ್‌ಗಳಿವೆ.

ಲಾವಾ ಬ್ಲೇಜ್‌ 5G:
ದೇಶೀಯ ಸ್ಮಾರ್ಟ್‌ಫೋನ್‌ ತಯಾಕಾ ಕಂಪನಿ ಲಾವಾ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಫೋನ್‌ ಅನ್ನು ಪರಿಚಯಿಸಿದೆ. ಲಾವಾ ಬ್ಲೇಜ್‌ 5ಜಿ ಸ್ಮಾರ್ಟ್‌ಫೋನ್‌ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿದೆ. ಇದು 6.5 ಇಂಚಿನ HD ಪ್ಲಸ್‌ ಡಿಸ್ಪ್ಲೇಯನ್ನು ಹೊಂದಿದ್ದು, 90 Hz ರಿಫ್ರೆಶ್‌ ದರ ಹೊಂದಿದೆ. ಇದು ಮೀಡಿಯಾ ಟೆಕ್‌ ಡೈಮೆನ್ಸಿಟಿ 700 ಪ್ರೊಸೆಸ್ಸರ್‌ನಿಂದ ವೇಗ ಪಡೆದುಕೊಳ್ಳಲಿದೆ. ಇದು ಆಂಡ್ರಾಯ್ಡ್‌ 12 ರಲ್ಲಿ ಕಾರ್ಯನಿರ್ವಹಿಸಲಿದೆ. ಫೋಟೋಗ್ರಾಫಿಗಾಗಿ ಹಿಂಬದಿಯಲ್ಲಿ ಟ್ರಿಪಲ್‌ ಕ್ಯಾಮೆರಾ ಅಳವಡಿಸಲಾಗಿದೆ. ಇದರ ಪ್ರಾಥಮಿಕ ಕ್ಯಾಮೆರಾ 50 ಮೆಗಾಪಿಕ್ಸೆಲ್‌ ಮತ್ತು ಮುಂಭಾಗದಲ್ಲಿ ಸೆಲ್ಫೀಗಾಗಿ 8 ಮೆಗಾಪಿಕ್ಸೆಲ್‌ ಕ್ಯಾಮೆರಾ ಇದೆ. ಇದರಲ್ಲಿ ಸುರಕ್ಷತೆಗಾಗಿ ಫೇಸ್‌ ಲಾಕ್‌ ಮತ್ತು ಸೈಡ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್‌ಗಳಿವೆ. ಈ ಫೋನ್‌ನ ಬೆಲೆ 10,999 ರೂ.

ಇದನ್ನೂ ಓದಿ : AC For Rented House : ನೀವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೀರಾ? ಯಾವ ಎಸಿ ಖರೀದಿಸುವುದು ಎಂಬ ಗೊಂದಲವಿದ್ದರೆ ಇಲ್ಲಿದೆ ಪರಿಹಾರ

ರಿಯಲ್‌ಮಿ ಸಿ 55:
ರಿಯಲ್‌ಮಿ ಸಿ 55 ಸ್ಮಾರ್ಟ್‌ಫೋನ್‌ ಉತ್ತಮ ಫೀಚರ್‌ಗಳಿರುವ ಅತ್ಯಂತ ಕೈಗೆಟುಕುವ ಸ್ಮಾರ್ಟ್‌ಫೋನ್‌ ಎಂದು ಪರಿಗಣಿಸಲಾಗಿದೆ. ಈ ಸ್ಮಾರ್ಟ್‌ಫೋನ್‌ ಅನ್ನು 10,999 ರೂ. ಗಳಲ್ಲಿ ಖರೀದಿಸಬಹುದಾಗಿದೆ.ಇದು 6.72-ಇಂಚಿನ ಪೂರ್ಣ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಇದರೊಂದಿಗೆ, ಮೀಡಿಯಾ ಟೆಕ್‌ ಹೀಲಿಯೊ ಜಿ88 ಪ್ರೊಸೆಸರ್ ಬೆಂಬಲಿಸುವ ಮತ್ತು 128 GB ಸಂಗ್ರಹಣೆಯು ಈ ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದು 64 ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಮತ್ತು 8 ಮೆಗಾಪಿಕ್ಸೆಲ್ ಫ್ರಂಟ್ ಸೆನ್ಸಾರ್‌ನೊಂದಿಗೆ ಬರುತ್ತದೆ.

ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ M13 5G :
12,000 ದ ಬೆಜೆಟ್‌ನಲ್ಲಿ ಬ್ರ್ಯಾಂಡೆಡ್‌ ಮೊಬೈಲ್‌ ಹುಡುಕುತ್ತಿದ್ದರೆ ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ M13 5G ಅನ್ನು ಆಯ್ದುಕೊಳ್ಳಬಹುದು. ಇದು 90 Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ HD ಪ್ಲಸ್ ಡಿಸ್ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿ ಮೀಡಿಯಾ ಟೆಕ್‌ ಡೈಮೆನ್ಸಿಟಿ 700 ಪ್ರೊಸೆಸರ್ ಅನ್ನು ನೀಡಲಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ ಆಧಾರಿತ ಸಿಸ್ಟಮ್ 12 ಜೊತೆಗೆ One UI 4 ನಲ್ಲಿ ಕಾರ್ಯನಿರ್ವಹಿಸುತ್ತದೆ. ಫೋಟೋಗ್ರಫಿಗಾಗಿ 50-ಮೆಗಾಪಿಕ್ಸೆಲ್ ಪ್ರಾಥಮಿಕ ಲೆನ್ಸ್ ಅನ್ನು ಅಳವಡಿಸಲಾಗಿದೆ. ಸೆಲ್ಫಿಗಳಿಗಾಗಿ 5-ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮರಾ. ಇದರ ಬೆಲೆ ಕೇವಲ 11,999 ರೂ.‌‌

ಇದನ್ನೂ ಓದಿ : Lava Blaze 2 : ಭಾರತದಲ್ಲಿ ಬಿಡುಗಡೆಯಾದ ಲಾವಾ ಬ್ಲೇಜ್‌ 2 ಸ್ಮಾರ್ಟ್‌ಫೋನ್‌; ಬೆಲೆ ಮತ್ತು ವೈಶಿಷ್ಟ್ಯ

(Best Smartphones under Rs. 12,000. Know the features and price.)

Comments are closed.