ಪ್ಯಾಕೇಜ್ಡ್ ವಾಟರ್ ಬಾಟಲಿಗಳ ಕಂಪನಿಯ ದೈತ್ಯ ಬಿಸ್ಲೆರಿ ಇಂಟರ್ನ್ಯಾಷನಲ್ ಇದೀಗ ಬಿಸ್ಲೆರಿ @ ಡೋರ್‌ಸ್ಟೆಪ್ (Bisleri Mobile App) ಎಂಬ ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಈ ಗ್ರಾಹಕ ಸ್ನೇಹಿ ಅಪ್ಲಿಕೇಶನ್ ಪ್ರಾರಂಭಿಕ ಹಂತದಲ್ಲಿ ದೇಶದ 26 ನಗರಗಳಲ್ಲಿ ಬಳಕೆಗೆ ನೀಡಲಾಗಿದೆ. ಬಿಸ್ಲೆರಿ ಇಂಟರ್ನ್ಯಾಷನಲ್ ತನ್ನ ಇ ಕಾಮರ್ಸ್ ಉದ್ಯಮವನ್ನು ವಿಸ್ತರಿಸುವ ಸಲುವಾಗಿ ಹಾಗೂ ಗ್ರಾಹಕರ ಬೇಡಿಕೆಗಳನ್ನು ಸರಿಯಾದ ಸಮಯದಲ್ಲಿ ಪೂರೈಸುವ ನಿಮಿತ್ತ ಈ ಅಪ್ಲಿಕೇಶನ್ನ್ನು ಅಭಿವೃದ್ಧಿ ಪಡಿಸಿದೆ.
ಕೋವಿಡ್ 19 ಲಾಕ್ಡೌನ್ ಸಂದರ್ಭದಲ್ಲಿ ಗ್ರಾಹಕರಿಗೆ ಸೇವೆಯನ್ನು ನೀಡಲು ಅಡೆತಡೆಗಳು ಎದುರಾದ ಸಂದರ್ಭದಲ್ಲಿ ಕಂಪನಿಗೆ ಈ ಅಪ್ಲಿಕೇಶನ್ ಅಭಿವೃದ್ಧಿಪಡಿಸಬೇಕು ಎಂಬ ಆಲೋಚನೆಯು ಮೊಳಕೆಯೊಡೆಯಿತು . ಕಂಪನಿಯದ್ದೇ ಒಂದು ಅಪ್ಲಿಕೇಶನ್ ಬಂದು ಬಿಟ್ಟರೆ ಒಂದೇ ವೇದಿಕೆಯ ಅಡಿಯಲ್ಲಿ ಗ್ರಾಹಕರು ಕಂಪನಿಯ ಎಲ್ಲಾ ಉತ್ಪನ್ನಗಳನ್ನು ನೋಡಲು ಸಾಧ್ಯವಾಗುತ್ತದೆ ಎಂದು ಯೋಚಿಸಿತು.
ಇನ್ನು ಈ ವಿಚಾರವಾಗಿ ಮಾತನಾಡಿದ ಬಿಸ್ಲೆರಿ ಇಂಟರ್ನ್ಯಾಷನಲ್ ಸಿಇಓ , ಗ್ರಾಹಕರು ತಂತ್ರಜ್ಞಾನದ ಲಾಭವನ್ನು ಹೆಚ್ಚಾಗಿ ಬಳಸಿಕೊಳ್ಳಲಿ ಎಂದು ನಾವು ಬಯಸುತ್ತೇವೆ. ನಮ್ಮ ಗ್ರಾಹಕರ ಶಾಪಿಂಗ್ ಅನುಭವವನ್ನು ಸುಗಮಗೊಳಿಸಲು ಈ ಅಪ್ಲಿಕೇಶನ್ನ್ನು ತಂದಿದ್ದೇವೆ. ಈ ಅಪ್ಲಿಕೇಶನ್ ಸಂಗ್ರಹಿಸಿದ ಡೇಟಾಗಳನ್ನು ಆಧರಿಸಿ ಕಂಪನಿಯು ಗ್ರಾಹಕರ ಸೇವೆಯನ್ನು ಅಭಿವೃದ್ಧಿಪಡಿಸುತ್ತದೆ. ಇದು ಗ್ರಾಹಕರು ಹಾಗೂ ಕಂಪನಿಯ ನಡುವಿನ ಸಂಬಂಧವನ್ನು ಇನ್ನಷ್ಟು ಸುಧಾರಿಸಲು ಈ ಅಪ್ಲಿಕೇಶನ್ ಸಹಕಾರಿಯಾಗಬಹುದು ಎಂಬ ನಂಬಿಕೆಯಿದೆ ಎಂದು ಹೇಳಿದರು.
ಬಿಸ್ಲೆರಿ @ ಡೋರ್‌ಸ್ಟೆಪ್ ಅಪ್ಲಿಕೇಶನ್‌ನ ಬಿಡುಗಡೆ ಮಾಡುವ ಮೂಲಕ ಕಂಪನಿಯು ಈ ದಿಕ್ಕಿನಲ್ಲಿ ಹೆಜ್ಜೆ ಇಟ್ಟ ಪ್ಯಾಕೆಜ್ಡ್ ವಾಟರ್ ಕ್ಷೇತ್ರದ ಮೊದಲಿಗನಾಗಿ ಮಾರ್ಪಟ್ಟಿದೆ. ನಮ್ಮ ಸೇವೆಗೆ ಚಂದಾದಾರರಾಗುವ ಸಂಖ್ಯೆಯು ಹೆಚ್ಚಾಗುತ್ತಲೇ ಇದೆ. ನಮ್ಮ ವೆಬ್ಸೈಟ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುತ್ತಿರೋದನ್ನು ನಾವು ಕಾಣುತ್ತಿದ್ದೇವೆ. ಈ ಅಪ್ಲಿಕೇಶನ್ ಆರಂಭದ ಬಳಿಕ ಚಂದಾದಾರರ ಸಂಖ್ಯೆಯು ವೇಗವಾಗಿ ಬೆಳೆಯುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಏಂಜಲೋ ಹೇಳಿದರು.
Bisleri Mobile App: You can Get Water Delivered at your Doorstep 24×7 Directly from App
ಇದನ್ನು ಓದಿ : Nora Fatehi : ಮಿಂಚಿನಂತೆ ಬಳುಕುವ ತಾರೆ : ಬಾಲಿವುಡ್ ನ ನಂ1. ಐಟಂ ಡ್ಯಾನ್ಸರ್ ನೋರಾ ಪತೇಹಿ
ಇದನ್ನೂ ಓದಿ : Revenge of the Apes : ಕೋತಿಗಳಲ್ಲೂ ಇದೆಯಾ ಸೇಡಿನ ಬುದ್ಧಿ..? ಬೆಚ್ಚಿಬೀಳಿಸುತ್ತೆ ಶ್ವಾನ-ವಾನರದ ನಡುವಿನ ಈ ದ್ವೇಷದ ಕತೆ..!