Omicron Shaneshwara Maha Yaga : ಶನೈಶ್ವರ ದೇವಾಲಯದಲ್ಲಿ ಓಮಿಕ್ರಾನ್ ಶನೀಶ್ವರ ಮಹಾಯಾಗ

ಬೆಂಗಳೂರು : ಓಮಿಕ್ರಾನ್‌ ಸೋಂಕು ಇದೀಗ ವಿಶ್ವವನ್ನೇ ಕಾಡುತ್ತಿದೆ. ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಓಮಿಕ್ರಾನ್‌ನಿಂದ ಪಾರಾಗಲು ಇನ್ನಿಲ್ಲದ ಕಸರತ್ತು ನಡೆಸುತ್ತಿವೆ. ಇದೀಗ ಕರ್ನಾಟಕದಲ್ಲಿಯೂ ಓಮಿಕ್ರಾನ್‌ ಮಹಾಮಾರಿ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಕೊರೊನಾ ರೂಪಾಂತರಿ ಓಮಿಕ್ರಾನ್‌ ಆತಂಕ ದೂರವಾಗಲಿ ಅನ್ನೋ ಸಲುವಾಗಿ ಲೋಕ ಕಲ್ಯಾಣಾರ್ಥ ಶನೇಶ್ವರ ದೇವಸ್ಥಾನದಲ್ಲಿ( T Dasarahalli Shaneswara Temple ) ಓಮಿಕ್ರಾನ್‌ ಹಿನ್ನೆಲೆ ಶನೀಶ್ವರ ಮಹಾಯಾಗ (Omicron Shaneshwara Maha Yaga) ನಡೆಸಲಾಯಿತು.

Omicron Shaneshwara Maha Yaga Held in Bangalore T Dasarahalli Shaneswara Temple 4

ಬೆಂಗಳೂರಿನ ಟಿ. ದಾಸರಹಳ್ಳಿಯಲ್ಲಿರುವ ಗುರು ಶನೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನದ ಸಂಸ್ಥಾಪಕರಾದ ಸುಬ್ಬರಾಯ ಆಚಾರ್‌ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದ ಮಹಾಯಾಗದ ಪೂರ್ಣಾಹುತಿ ನೆರವೇರಿದ್ದು, ಕಲ್ಯಾಣೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.

Omicron Shaneshwara Maha Yaga Held in Bangalore T Dasarahalli Shaneswara Temple 1

ಕೊರೊನಾ ವೈರಸ್‌ ಸೋಂಕಿನ ಆತಂಕದಿಂದಾಗಿ ಕಳೆದ ಎರಡು ವರ್ಷಗಳಿಂದಲೂ ದೇಶದಲ್ಲಿನ ಜನರು ಕೆಲಸವಿಲ್ಲದೇ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಭಯದ ನಡುವಲ್ಲೇ ಇದೀಗ ಓಮಿಕ್ರಾನ್‌ ಸೋಂಕು ಆವರಿಸುತ್ತಿದೆ. ಜನರನ್ನು ಈ ಆತಂಕದಿಂದ ಪಾರು ಮಾಡುವುದರ ಜೊತೆಗೆ ದೇಶವನ್ನು ಮೂರನೇ ಅಲೆಯಿಂದ ಕಾಪಾಡುವಂತೆ ಮಹಾಯಾಗದ ಸಂದರ್ಭದಲ್ಲಿ ದೇವರಲ್ಲಿ ಪ್ರಾರ್ಥಿಸಲಾಯಿತು. ಮಹಾಯಾಗದ ಆಯೋಜಕರಾದ ರಮೇಶ್ , ಆಶ್ವಿನಿ ಭೂಷಣ್, ನೀಲಕಂಠಾಚಾರ್ಯ ಸ್ವಾಮೀಜಿ ಬಿಜೆಪಿ ‌ ಮುಖಂಡರಾದ ಮುನಿರಾಜು, ಲೋಕೇಶ್ ಸೇರಿದಂತೆ ಸಹಸ್ರಾರು ಭಕ್ತರು ಯಾಗದಲ್ಲಿ ಪಾಲ್ಗೊಂಡಿದ್ದರು.

ಫೆಬ್ರವರಿಯಿಂದ ದೇಶದಲ್ಲಿ ಕೊರೊನಾ ಮೂರನೇ ಅಲೆ

ಕೊರೊನಾ ಓಮಿಕ್ರಾನ್​ ರೂಪಾಂತರಿ ವಿಶ್ವಾದ್ಯಂತ ತನ್ನ ಕಬಂಧ ಬಾಹುಗಳನ್ನು ಚಾಚಲು ಈಗಾಗಲೇ ಆರಂಭಿಸಿದ್ದು ಆತಂಕ ಮನೆ ಮಾಡಿದೆ. ದೇಶದಲ್ಲಿ ಓಮಿಕ್ರಾನ್​ ಅಪಾಯದ ಬಗ್ಗೆ ಮುನ್ಸೂಚನೆ ನೀಡಿದ ಕೋವಿಡ್​ 19 ಸೂಪರ್ ಮಾಡೆಲ್​ ಸಮಿತಿ ಸದಸ್ಯರು ಕೊರೊನಾ ಡೆಲ್ಟಾ ರೂಪಾಂತರಿಯ ಜಾಗಕ್ಕೆ ಸಂಪೂರ್ಣವಾಗಿ ಓಮಿಕ್ರಾನ್​ ಬಂದ ಬಳಿಕ ಸೋಂಕಿತರ ಸಂಖ್ಯೆಯಲ್ಲಿ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆ ಎಂದು ಹೇಳಿದ್ದಾರೆ. ಅಲ್ಲದೆ ಮುಂದಿನ ವರ್ಷದ ಆರಂಭದಲ್ಲಿಯೇ ಕೋವಿಡ್​ ಮೂರನೇ ಅಲೆ ಬರುವ ಸಾಧ್ಯತೆ ಇದೆ ಎಂದೂ ಹೇಳಿದ್ದಾರೆ.

https://www.youtube.com/watch?v=cR5WolyMeyQ

ರಾಷ್ಟ್ರೀಯ ಕೋವಿಡ್​ 19 ಸೂಪರ್​ ಮಾಡೆಲ್​ ಸಮಿತಿ ಮುಖ್ಯಸ್ಥರಾಗಿರುವ ವಿದ್ಯಾಸಾಗರ್​ , ದೇಶದಲ್ಲಿ ಮೂರನೇ ಅಲೆಯು ಕೋವಿಡ್​ ಒಮಿಕ್ರಾನ್​ ರೂಪಾಂತರಿಯನ್ನು ಹೊಂದಿರುತ್ತದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಕೊರೊನಾ ಮೂರನೇ ಅಲೆಯು ಮುಂದಿನ ವರ್ಷದ ಆರಂಭದಲ್ಲಿಯೇ ಅಪ್ಪಳಿಸುವ ನಿರೀಕ್ಷೆ ಇದೆ. ಆದರೆ ಇದು ಎರಡನೇ ಅಲೆಗಿಂತ ಸೌಮ್ಯವಾಗಿ ಇರಲಿದೆ. ದೇಶದ ಜನತೆಯಲ್ಲಿ ಇದೀಗ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಇರುವುದರಿಂದ ಕೋವಿಡ್​ ಮೂರನೇ ಅಲೆಯು ಅಷ್ಟೊಂದು ಸಮಸ್ಯೆಯನ್ನು ತಾರಲಾರದು. ಖಂಡಿತವಾಗಿಯೂ ದೇಶಕ್ಕೆ ಮೂರನೆ ಅಲೆ ಬಂದೇ ಬರುತ್ತದೆ. ಪ್ರಸ್ತುತ ದೇಶದಲ್ಲಿ ಪ್ರತಿ ದಿನಕ್ಕೆ ಸರಿ ಸುಮಾರು 7500 ಕೇಸುಗಳು ವರದಿಯಾಗುತ್ತಿದೆ. ಆದರೆ ಯಾವಾಗ ಡೆಲ್ಟಾ ರೂಪಾಂತರಿಯ ಬದಲು ಸಂಪೂರ್ಣ ಓಮಿಕ್ರಾನ್​ ರೂಪಾಂತರಿಯು ಬರುತ್ತದೆಯೋ ಆದ ದೈನಂದಿನ ಕೊರೊನಾ ಕೇಸ್​ಗಳಲ್ಲಿ ಏರಿಕೆ ಕಂಡು ಬರಲಿದೆ ಎಂದು ವಿದ್ಯಾಸಾಗರ್​ ಹೇಳಿದ್ದಾರೆ.

ಹೈದರಾಬಾದ್​​ ಐಐಟಿಯಲ್ಲಿ ಉಪನ್ಯಾಸಕ ಕೂಡ ಆಗಿರುವ ವಿದ್ಯಾಸಾಗರ್​ ಎರಡನೆ ಅಲೆಯಲ್ಲಿ ವರದಿಯಾದ ಕೋವಿಡ್​ ಕೇಸ್​ಗಳಿಗಿಂತ ಹೆಚ್ಚು ಕೇಸ್​ಗಳನ್ನ ನಾವು ಮೂರನೇ ಅಲೆಯಲ್ಲಿ ಕಾಣಲಿದ್ದೇವೆ ಎಂದು ಹೇಳಿದ್ದಾರೆ. ನಾವು ಎರಡನೆ ಅಲೆಯಲ್ಲಿ ವರದಿ ಮಾಡಿದ ಕೋವಿಡ್​ ಕೇಸ್​ಗಳಿಗಿಂತ ಹೆಚ್ಚು ಸೋಂಕಿತರನ್ನು ಮೂರನೇ ಅಲೆಯ ಸಂದರ್ಭದಲ್ಲಿ ವರದಿ ಮಾಡಲಿದ್ದೇವೆ. ಕೊರೊನಾ ಎರಡನೆ ಅಲೆಯ ಸಂದರ್ಭದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಹೊರತುಪಡಿಸಿ ಮತ್ಯಾರಿಗೂ ಲಸಿಕೆ ಕೂಡ ಆಗಿರಲಿಲ್ಲ. ಹೀಗಾಗಿ ದೇಶದ ಬಹುತೇಕ ಜನತೆಯು ಕೊರೊನಾ ಎರಡನೆ ಅಲೆಯ ಅಪಾಯಕ್ಕೆ ಸಿಲುಕಿಕೊಂಡಿದೆ. ಆದರೆ ಈಗ ಪರಿಸ್ಥಿತಿ ಹಾಗಿಲ್ಲ. ದೇಶದ ಬಹುತೇಕ ಜನತೆ ಕೊರೊನಾ ಲಸಿಕೆಯನ್ನು ಪಡೆದಿದ್ದಾರೆ. ಅಲ್ಲದೇ ಬಹುತೇಕರಿಗೆ ಡೆಲ್ಟಾ ರೂಪಾಂತರಿ ಸೋಂಕು ತಗುಲಿ ಗುಣಮುಖರಾದ ಹಿನ್ನೆಲೆಯಲ್ಲಿ ಅವರಲ್ಲಿ ಆ್ಯಂಟಿಬಾಡಿ ಅಭಿವೃದ್ಧಿಗೊಂಡಿದೆ. ಹೀಗಾಗಿ ದೇಶದಲ್ಲಿ ಕೊರೊನಾ ಮೂರನೇ ಅಲೆಯು ಅಷ್ಟೊಂದು ಗಂಭೀರ ಪ್ರಮಾಣದ ಅಪಾಯ ಉಂಟು ಮಾಡೋದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ನಿತ್ಯವೂ 14 ಲಕ್ಷ ಓಮಿಕ್ರಾನ್ ಪ್ರಕರಣ : ಎಚ್ಚರಿಕೆ ಕೊಟ್ಟ ಕೇಂದ್ರ ಸರಕಾರ

ಇದನ್ನೂ ಓದಿ :  ದಕ್ಷಿಣ ಕನ್ನಡದಲ್ಲಿ ಓಮಿಕ್ರಾನ್‌ ಸ್ಪೋಟ : ಒಂದೇ ದಿನ 5 ಕಾಲೇಜು ವಿದ್ಯಾರ್ಥಿಗಳಿಗೆ ಓಮಿಕ್ರಾನ್‌ ದೃ

(Omicron Shaneshwara Maha Yaga Held in Bangalore T Dasarahalli Shaneswara Temple)

Comments are closed.