BlackBerry OS smartphone :ಈಗ ಏನಿದ್ದರೂ ಯಾರ ಕೈಯಲ್ಲಿ ನೋಡಿದರೂ ನಿಮಗೆ ಸ್ಮಾರ್ಟ್ ಫೋನ್ಗಳೇ ಕಾಣುತ್ತದೆ. ಆದರೆ ಈ ಸ್ಮಾರ್ಟ್ಫೋನ್ಗಳು ಬರುವ ಮುಂಚೆ ಬ್ಲ್ಯಾಕ್ ಬೆರಿ ಫೋನ್ಗಳು ಮಾರುಕಟ್ಟೆಯಲ್ಲಿ ಭಾರೀ ಸದ್ದು ಮಾಡುತ್ತಿದ್ದವು. ಕ್ವರ್ಟಿ ಕೀಪ್ಯಾಡ್ಗಳನ್ನು ಹೊಂದಿದ್ದ ಈ ಮೊಬೈಲ್ ಫೋನ್ಗಳು ಯುವ ಜನತೆಯ ಪಾಲಿಗೆ ಹಾಟ್ ಫೇವರಿಟ್ ಆಗಿತ್ತು. ಈಗಲೂ ಅನೇಕರ ಬಳಿಯಲ್ಲಿ ಈ ಬ್ಲ್ಯಾಕ್ ಬೆರಿ ಕ್ವರ್ಟಿ ಕೀಪ್ಯಾಡ್ ಫೋನ್ಗಳು ಇದ್ದಿರಬಹುದು.
ನೀವೂ ಕೂಡ ಈ ಫೋನ್ಗಳನ್ನು ಬಳಕೆ ಮಾಡುವವರಾಗಿದ್ದರೆ ನಿಮಗೊಂದು ಶಾಕಿಂಗ್ ಸುದ್ದಿ ಕಾದಿದೆ. ಅದೇನೆಂದರೆ ನಾಳೆಯಿಂದ ಈ ಕಂಪನಿಯು ತನ್ನ ಕ್ಲಾಸಿಕ್ ಫೋನ್ ಕಾರ್ಯ ನಿರ್ವಹಿಸೋದಿಲ್ಲ. ಈ ಬಗ್ಗೆ ಬ್ಲ್ಯಾಕ್ ಬೆರಿ ಫೋನ್ಗಳು ಅಧಿಕೃತ ಘೋಷಣೆ ಮಾಡಿವೆ.
ಈ ಸಂಬಂಧ ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಪ್ರಕಟಣೆ ಹೊರಡಿಸಿರುವ ಬ್ಲ್ಯಾಕ್ ಬೆರಿ ಕಂಪನಿಯು ಜನವರಿ ನಾಲ್ಕರಿಂದ ಬ್ಲ್ಯಾಕ್‌ಬೆರಿ 7.1 OS ಹಾಗೂ ಬ್ಲ್ಯಾಕ್‌ಬೆರಿ 10 ಸಾಫ್ಟ್‌ವೇರ್ , ಬ್ಲ್ಯಾಕ್‌ಬೆರಿ ಪ್ಲೇಬುಕ್ OS 2.1 ಹಾಗೂ ಇದಕ್ಕಿಂತ ಹಳೆಯ ಫೋನ್ಗಳು ಕಾರ್ಯ ನಿರ್ವಹಿಸೋದಿಲ್ಲ ಎಂದು ಹೇಳಿದೆ.
ಅಂದರೆ ಈ ಮೊಬೈಲ್ ಫೋನ್ಗಳನ್ನು ಹೊಂದಿರುವ ಗ್ರಾಹಕರಿಗೆ ನಾಳೆಯಿಂದ ಡೇಟಾ ಸೌಕರ್ಯ ಸಿಗೋದಿಲ್ಲ. ಅದು ಮಾತ್ರವಲ್ಲದೇ ಫೋನ್ ಕರೆ, ಎಸ್ಎಂಎಸ್ ಬಳಕೆ, ವೈ ಫೈ ಬಳಕೆ ಹೀಗೆ ಯಾವುದೇ ಸೌಲಭ್ಯಗಳನ್ನೂ ಬಳಕೆ ಮಾಡುವುದು ಸಾಧ್ಯವಿಲ್ಲ ಎಂದು ಕಂಪನಿಯು ಹೇಳಿದೆ.
ಒಂದು ಕಾಲದಲ್ಲಿ ಯುವಜನತೆಯ ಕನಸಿನ ಫೋನ್ ಎಂದೇ ಕರೆಯಿಸಿಕೊಳ್ತಿದ್ದ ಬ್ಲ್ಯಾಕ್ ಬೆರ್ರಿಯ ಫೋನ್ಗಳು ಕಾಲಾಂತರದಲ್ಲಿ ಒಂದೊಂದಾಗಿಯೇ ಮೂಲೆಗೆ ಸರಿದಂತಾಗಿದೆ. 2013ರಲ್ಲಿ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡಬೇಕೆಂಬ ಉದ್ದೇಶದಿಂದ ಕಂಪನಿಯು ಬ್ಲಾಕ್ಬೆರಿ 10ನ್ನು ಮಾರುಕಟ್ಟೆಗೆ ತಂದಿತ್ತು. ಇದಾದ ಬಳಿಕ 2015 ರಲ್ಲಿ ಆಂಡ್ರಾಯ್ಡ್ಗೂ ಶಿಫ್ಟ್ ಆಯಿತು. ಸ್ಯಾಮ್ಸಂಗ್ , ಆ್ಯಪಲ್ಗಳಂತಹ ಫೋನ್ಗಳಿಗೆ ಬ್ಲ್ಯಾಕ್ ಬೆರಿ ಸಾಕಷ್ಟು ಪೈಪೋಟಿ ನೀಡಿಲು ಯತ್ನಿಸಿದರೂ ಸಹ ಯಾವುದೂ ಪ್ರಯೋಜನವಾಗಲಿಲ್ಲ.ಕೊನೆಯ ಬಾರಿಗೆ ಬ್ಲ್ಯಾಕ್ ಬೆರಿ ಕಿ 2 ಎಲ್ಇ ಬ್ರ್ಯಾಂಡ್ ಮಾರುಕಟ್ಟೆಗೆ ತಂದಿದ್ದ ಕಂಪನಿಯು 2020ರ ಫೆಬ್ರವರಿ ತಿಂಗಳಿನಲ್ಲಿ ಇನ್ಮುಂದೆ ಬ್ಲಾಕ್ಬೆರಿ ಫೋನ್ಗಳನ್ನು ತಯಾರಿಸುವುದಿಲ್ಲ ಎಂದು ಘೋಷಣೆ ಮಾಡಿದೆ.
BlackBerry OS smartphone will stop working properly from 4th January
ಇದನ್ನು ಓದಿ : Jio Airtel Vi 2022 Best Plans: ವರ್ಷಕ್ಕೆ ಒಂದೇ ಸಲ ರಿಚಾರ್ಜ್ ಮಾಡಿ ಹಣ ಉಳಿಸಿ; Jio, Airtel, Vi ಬೆಸ್ಟ್ ಪ್ಲಾನ್‌ಗಳ ವಿವರ ಇಲ್ಲಿದೆ
ಇದನ್ನೂ ಓದಿ : Quit Smoking in 2022 : ಮೊಬೈಲ್ ಆ್ಯಪ್ ಬಳಸಿಯೂ ಸ್ಮೋಕಿಂಗ್ ಬಿಡಬಹುದು: ಇಲ್ಲಿವೆ ಸ್ಮೋಕಿಂಗ್ ಬಿಡಲು ಟಾಪ್ 5 ಆ್ಯಪ್‌ಗಳು