Dunia Vijay : ಟಾಲಿವುಡ್​ಗೂ ಕಾಲಿಟ್ಟ ದುನಿಯಾ ವಿಜಯ್​: ಚಿತ್ರತಂಡದಿಂದ ಅಧಿಕೃತ ಘೋಷಣೆ

Dunia Vijay :ಸಲಗ ಸಿನಿಮಾದ ಬಳಿಕ ದುನಿಯಾ ವಿಜಯ್​​ಗೆ ಸಿನಿಮಾ ಲೋಕದಲ್ಲಿ ಮತ್ತೊಂದು ಸುವರ್ಣಯುಗ ಆರಂಭವಾಯ್ತು ಎಂದು ಹೇಳಿದರೂ ತಪ್ಪಾಗಲಾರದು. ದುನಿಯಾ ಸಿನಿಮಾದ ಹಿಟ್​ ಬಳಿಕ ದುನಿಯಾ ವಿಜಯ್​ ಸಿನಿಮಾದ ಮೂಲಕ ಸುದ್ದಿ ಮಾಡಿದ್ದಕ್ಕಿಂತ ವಿವಾದಗಳ ಮೂಲಕ ಸುದ್ದಿ ಮಾಡಿದ್ದೇ ಹೆಚ್ಚು. ಮಾಸ್ತಿ ಗುಡಿ ಸಿನಿಮಾ ದುರಂತ, ಮೊದಲ ಪತ್ನಿ ಜೊತೆಗಿನ ಗಲಾಟೆ, ಸ್ನೇಹಿತರ ಜೊತೆ ಜಟಾಪಟಿ ಹೀಗೆ ದುನಿಯಾ ವಿಜಯ್​ ಒಳ್ಳೆಯ ಕಾರಣಗಳಿಗೆ ಸುದ್ದಿಯಲ್ಲಿ ಇರ್ತಾನೇ ಇರಲಿಲ್ಲ. ಆದರೆ ಇದೀಗ ದುನಿಯಾ ವಿಜಯ್​ ಭಾಗ್ಯ ಬದಲಾದಂತಿದೆ. ಸಲಗ ಸಿನಿಮಾ ಸಕ್ಸಸ್​ ಬಳಿಕ ನಟ ವಿಜಯ್​ ಕುಮಾರ್​ ಇದೀಗ ಟಾಲಿವುಡ್​ ಅಂಗಳಕ್ಕೂ ಪದಾರ್ಪಣೆ ಮಾಡುತ್ತಿದ್ದಾರೆ.

ಹೌದು..! ಸಲಗ ಸಕ್ಸಸ್​ನಿಂದಲೇ ಫುಲ್​ ಖುಶ್​ ಆಗಿದ್ದ ದುನಿಯಾ ವಿಜಯ್​ಗೆ ಮತ್ತೊಂದು ಜಾಕ್​ಪಾಟ್​ ಹೊಡೆದಿದೆ. ತೆಲಗು ಚಿತ್ರರಂಗದ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟಿಸಲಿರುವ ಹೊಸ ಸಿನಿಮಾದಲ್ಲಿ ಅಭಿನಯಿಸಲು ನಟ ದುನಿಯಾ ವಿಜಯ್​ಗೆ ಚಾನ್ಸ್​ ಸಿಕ್ಕದೆಂತೆ. ಈ ಬಗ್ಗೆ ಈ ಹಿಂದೆ ಸಾಕಷ್ಟು ಊಹಾಪೋಹಗಳು ಹರಿದಾಡಿದ್ದವು. ಆದರೆ ಇದೀಗ ಟಾಲಿವುಡ್​​ಗೆ ದುನಿಯಾ ವಿಜಯ್​ ಕಾಲಿಡುತ್ತಿರೋದರ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.


ಈ ಸಿನಿಮಾದ ನಿರ್ದೇಶನ ಮಾಡಲಿರುವ ಗೋಪಿಚಂದ್​ ಮಲಿನೇನಿ ನಟ ದುನಿಯಾ ವಿಜಯ್​​ಗೆ ಸಿನಿಮಾಗೆ ಸ್ವಾಗತ ಕೋರಿ ಪೋಸ್ಟರ್​ ಒಂದನ್ನು ಸೋಶಿಯಲ್​ ಮೀಡಿಯಾದಲ್ಲಿ ರಿಲೀಸ್​ ಮಾಡಿದ್ದಾರೆ. ಇನ್ನು ಹೆಸರಿಡದ ಈ ಸಿನಿಮಾದಲ್ಲಿ ನಂದಮೂರಿ ಬಾಲಕೃಷ್ಣನ್​​ರಿಗೆ ಜೋಡಿಯಾಗಿ ನಟಿ ಶೃತಿ ಹಾಸನ್​ ಕಾಣಿಸಿಕೊಳ್ಳಲಿದ್ದಾರೆ. ಮೈತ್ರಿ ಮೂವಿ ಮೇಕರ್ಸ್​ ಬ್ಯಾನರ್​ನಡಿಯಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾಗೆ ಇನ್ನೂ ಪಾತ್ರಗಳನ್ನು ಆಯ್ಕೆ ಮಾಡಲಾಗುತ್ತಿದೆ. ಇದೊಂದು ನೈಜ ಘಟನೆ ಆಧಾರಿತ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.


ಸಲಗ ಸಿನಿಮಾ ಮೂಲಕ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ವೃತ್ತಿಗೆ ಇಳಿದಿದ್ದರೂ ಸಹ ಮೊದಲ ಪ್ರಯತ್ನದಲ್ಲಿಯೇ ದುನಿಯಾ ವಿಜಯ್​ ಸೈ ಎನಿಸಿಕೊಂಡಿದ್ದಾರೆ. ಕೊರೊನಾ ಎರಡನೇ ಅಲೆ ಬಳಿಕ ಧೈರ್ಯದಿಂದ ಸಿನಿಮಾ ರಿಲೀಸ್​ ಮಾಡಿ ಹೌಸ್​ಫುಲ್​ ಪ್ರದರ್ಶನ ಕಾಣುವ ಮೂಲಕ ಸ್ಯಾಂಡಲ್​ವುಡ್​ನ ಇತರೆ ಸಿನಿಮಾಗಳ ಬಿಡುಗಡೆಗೂ ಧೈರ್ಯ ತುಂಬುವ ಕೆಲಸವನ್ನು ದುನಿಯಾ ವಿಜಯ್​ ಮಾಡಿದ್ದಾರೆ. ಇದೀಗ ಟಾಲಿವುಡ್​ನಲ್ಲೂ ದುನಿಯಾ ವಿಜಯ್​ ಕಮಾಲ್​ ನೋಡೋಕೆ ಅಭಿಮಾನಿಗಳು ಕಾತುರರಾಗಿದ್ದಾರೆ.

actor dunia vijay to act in tollywood movie

ಇದನ್ನು ಓದಿ : jote joteyali big twist : ಜೊತೆ ಜೊತೆಯಲಿ ಮೇಲೆ ಮುನಿಸಿಕೊಂಡ ಪ್ರೇಕ್ಷಕ: ಆರ್ಯವರ್ಧನ್ ಮೇಲೆಯೇ ವೀಕ್ಷಕರ ಆಕ್ರೋಶ

ಇದನ್ನೂ ಓದಿ : Nandi milk puneeth photo : ನಂದಿನಿ ಹಾಲಿನ ಪ್ಯಾಕೇಟ್ ಮೇಲೆ ಅಪ್ಪು ಪೋಟೋ: ಕೆಎಂಎಫ್ ಅಧಿಕಾರಿಗಳು ಹೇಳಿದ್ದೇನು ಗೊತ್ತಾ?!

Comments are closed.