dangerous apps : ಈಗಂತೂ ಸ್ಮಾರ್ಟ್ಫೋನ್ ಬಳಕೆ ಮಾಡದವರು ಯಾರೂ ಇಲ್ಲ. ಆಂಡ್ರಾಯ್ಡ್ ಫೋನ್ಗಳಲ್ಲಿ ನಾವು ಗೂಗಲ್ ಪ್ಲೇ ಸ್ಟೋರ್ನಲ್ಲಿ ಲಭ್ಯವಿರುವ ಯಾವುದೇ ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಅನ್ನೋದು ಕೂಡ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನೀವು ಆಂಡ್ರಾಯ್ಡ್ ಫೋನ್ಗಳಲ್ಲಿ ಡೌನ್ಲೋಡ್ ಮಾಡುವ ಕೆಲವು ಆ್ಯಪ್ಗಳು ನಿಮ್ಮ ಖಾಸಗಿ ಮಾಹಿತಿಗಳನ್ನು ಕದಿಯೋದರ ಜೊತೆಯಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನೂ ಮಂಗ ಮಾಯ ಮಾಡಲಿವೆ ಎಂಬುದು ಫ್ರೆಂಚ್ ಸಂಶೋಧಕರೊಬ್ಬರ ಅಧ್ಯಯನದಲ್ಲಿ ತಿಳಿದು ಬಂದಿದೆ.
ಹಾಗಾದರೆ ಜನರಿಗೆ ಟೊಪ್ಪಿ ಹಾಕುವ ಆ ಅಪ್ಲಿಕೇಶನ್ಗಳು ಯಾವುದು..? ಇಲ್ಲಿದೆ ಮಾಹಿತಿ
ಫನ್ನಿ ಕ್ಯಾಮರಾ :

ಅನೇಕ ಫಿಲ್ಟರ್ಗಳನ್ನು ಹೊಂದಿರುವ ಆ್ಯಪ್ ಇದಾಗಿದೆ. ಈಗಾಗಲೇ 50 ಸಾವಿರಕ್ಕೂ ಅಧಿಕ ಮಂದಿ ಡೌನ್ ಮಾಡಿರುವ ಈ ಅಪ್ಲಿಕೇಶನ್ ನಿಜಕ್ಕೂ ಡೇಂಜರಸ್
ವ್ಲಾಗ್ ಸ್ಟಾರ್ ವಿಡಿಯೋ ಎಡಿಟರ್ :

ಹೆಚ್ಚು ಪ್ರಚಲಿತಿಯನ್ನು ಹೊಂದಿರುವ ಈ ಅಪ್ಲಿಕೇಶನ್ನ್ನು ಈಗಾಗಲೇ 10 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿದ್ದಾರೆ. ಆದರೆ ಇದು ಕೂಡ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆ ನೀಡುವ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ.
ವಾವ್ ಬ್ಯೂಟಿ ಕ್ಯಾಮರಾ :

ಇದೂ ಕೂಡ ಅನೇಕ ಫಿಲ್ಟರ್ಗಳನ್ನು ಹೊಂದಿರುವ ಒಂದು ಅಪ್ಲಿಕೇಶನ್ ಆಗಿದೆ. ಫೋಟೋ ಚಂದ ಕಾಣಬೇಕೆಂದು ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿದಲ್ಲಿ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸೊನ್ನೆಗೆ ಬಂದು ನಿಲ್ಲುವುದು ಪಕ್ಕಾ.
ಕ್ರಿಯೇಟಿವ್ ತ್ರಿಡಿ ಲಾಂಚರ್ :

ಇದು ಸ್ಮಾರ್ಟ್ಫೋನ್ಗಳಿಗೆ 3 ಡಿ ನೋಟವನ್ನು ನೀಡುತ್ತದೆ. ಆದರೆ ಇದರಲ್ಲಿ ಮಾಲ್ವೇರ್ ವೈರಸ್ಗಳಿದ್ದು ನಿಮ್ಮ ಎಲ್ಲಾ ಖಾಸಗಿ ಮಾಹಿತಿಗಳನ್ನು ಕದಿಯಲಾಗುತ್ತದೆ.
ಫ್ರೀಗ್ಲೋ ಕ್ಯಾಮರಾ 1.0.0 :

ಈ ಅಪ್ಲಿಕೇಶನ್ನಲ್ಲಿ ನೀವು ಯಾವುದೇ ಶುಲ್ಕ ಪಾವತಿಸದೇ ನಿಮ್ಮ ಫೋಟೋಗಳನ್ನು ಎಡಿಟ್ ಮಾಡಬಹುದು . ಆದರೆ ಈ ಅಪ್ಲಿಕೇಶನ್ ನಿಮ್ಮ ಮೊಬೈಲ್ನಲ್ಲಿದ್ದರೆ ಕೂಡಲೇ ಅನ್ ಇನ್ಸ್ಟಾಲ್ ಮಾಡಿ.
ರೇಜರ್ ಕೀಬೋರ್ಡ್ & ಥೀಮ್ಸ್ :

ಇದು ಒಂದು ಕೂಲ್ ಕೀ ಬೋರ್ಡ್ ಅಪ್ಲಿಕೇಶನ್ ಆಗಿದ್ದು ಈಗಾಗಲೇ 1 ಲಕ್ಷಕ್ಕೂ ಅಧಿಕ ಮಂದಿ ಡೌನ್ಲೋಡ್ ಮಾಡಿದ್ದಾರೆ.
ಎಮೊಜಿ ಕೀಬೋರ್ಡ್ :

GIF ಎಮೋಜಿಗಳನ್ನು ಹೊಂದಿರುವ ಕೀ ಬೋರ್ಡ್ ಅಪ್ಲಿಕೇಶನ್ ಇದಾಗಿದೆ. ಈಗಾಗಲೇ 1 ಲಕ್ಷಕ್ಕೂ ಅಧಿಕ ವೀವ್ಸ್ ಸಂಪಾದಿಸಿದೆ.
ಕೊಕೊ ಕ್ಯಾಮರಾ 51.1 :

ಇದು ನಿಮ್ಮ ಫೋಟೋಗಳಿಗೆ ರೆಟ್ರೋ ಲುಕ್ ನೀಡುತ್ತದೆ. ಆದರೆ ಇದು ಕೂಡ ಒಂದು ನಕಲಿ ಆ್ಯಪ್ ಆಗಿದೆ.
ಇದನ್ನು ಓದಿ : kambala srinivasa gowda : ಕಂಬಳದ ಉಸೇನ್ ಬೋಲ್ಟ್ ಖ್ಯಾತಿಯ ಶ್ರೀನಿವಾಸ ಗೌಡ ವಿರುದ್ಧ ಕ್ರಿಮಿನಲ್ ದೂರು
ಇದನ್ನೂ ಓದಿ : Samsung Smartphone Launch :ಸ್ಯಾಮ್ ಸಂಗ್ ನಿಂದ ಮತ್ತೆರಡು ಸ್ಮಾರ್ಟ್ ಫೋನ್ ಬಿಡುಗಡೆ
dangerous apps do you have these apps on your mobile then your data money will be drained away