ಬೆಂಗಳೂರು : ಫ್ಯಾಂಟಸಿ ಕ್ರಿಕೆಟ್ ಆಪ್ ಡ್ರೀಮ್ 11 (DREAM 11 ) ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು ಸಂಸ್ಥೆ ಅಧಿಕೃತವಾಗಿ ಘೋಟನೆಯನ್ನು ಮಾಡಿದೆ. ಮುಂಬೈ ಮೂಲದ ಡ್ರೀಮ್ 11 ಸಂಸ್ಥೆ ಕರ್ನಾಟಕದಲ್ಲಿ ಜಾರಿಯಾಗಿರುವ ಆನ್‌ಲೈನ್ ಜೂಜು ನಿಷೇಧ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ ಅನ್ನೋ ದೂರು ದಾಖಲಾಗಿತ್ತು. ಬೆಂಗಳೂರು ಪೊಲೀಸರು ಡ್ರೀಮ್ 11 ಸಂಸ್ಥಾಪಕರಾದ ಹರ್ಷ ಜೈನ್ ಮತ್ತು ಭವಿತ್ ಶೇಟ್ ವಿರುದ್ದ ಪ್ರಕರಣ ದಾಖಲು ಮಾಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಡ್ರೀಮ್ 11 ಹಣಕಟ್ಟಿ ಕನ್ನಡಿಗರಿಗೆ ನಿರ್ಬಂಧ ವಿಧಿಸಿದೆ.
ಕರ್ನಾಟಕದಲ್ಲಿ ವಾಸಿಸುವ ಅಥವಾ ಕರ್ನಾಟಕದಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿರುವ ಬಳಕೆದಾರರು ಡ್ರೀಮ್ 11 ನಲ್ಲಿ ನಗದು ಸ್ಪರ್ಧೆಗಳಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ನೀಡುತ್ತಿದೆ. ಉಚಿತವಾಗಿ ಡ್ರೀಮ್ 11 ನಲ್ಲಿ ತನ್ನ ಕನಸಿನ ತಂಡವನ್ನು ಕಟ್ಟಲು ಅವಕಾಶ ನೀಡಿದೆಯಾದ್ರೂ, ಹಣ ಪಾವತಿ ಮಾಡಿ ತಂಡ ಸೇರ್ಪಡೆಗೆ ಅವಕಾಶವನ್ನು ನಿರ್ಬಂಧಿಸಲಾಗಿದೆ.

ಡ್ರೀಮ್ 11 ಸಂಸ್ಥೆ ತನ್ನ ನಿಮಯ ಮತ್ತು ಷರತ್ತುಗಳನ್ನು ಕೂಡ ನವೀಕರಣ ಮಾಡಿದೆ. ಈಗಾಗಲೇ ಆಂಧ್ರಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್, ಒಡಿಶಾ, ಸಿಕ್ಕಿಂ, ತೆಲಂಗಾಣ ರಾಜ್ಯಗಳು ಈಗಾಗಲೇ ಡ್ರೀಮ್ 11ನಲ್ಲಿ ಹಣಪಾವತಿಯನ್ನು ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ಇದೀಗ ಡ್ರೀಮ್ 11 ನಿಷೇಧಿತ ರಾಜ್ಯಗಳ ಸಾಲಿಗೆ ಕರ್ನಾಟಕ ಸೇರ್ಪಡೆ ಯಾಗಿದೆ.

ಕರ್ನಾಟಕ ಪೊಲೀಸ್ ಕಾಯ್ದೆಯು ಆನ್‌ಲೈನ್ ಜೂಜು, ಬೆಟ್ಟಿಂಗ್ ಮತ್ತು ಪಂತವನ್ನು ನಿಷೇಧಿಸಲು ತನ್ನ ಗೇಮಿಂಗ್ ಕಾನೂನನ್ನು ಇತ್ತೀಚೆಗೆ ತಿದ್ದುಪಡಿ ಮಾಡಿದೆ. ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯ್ದೆ 2021 ತನ್ನ ಸದಸ್ಯ ಫ್ಯಾಂಟಸಿ ಸ್ಪೋರ್ಟ್ಸ್ ಆಪರೇಟರ್‌ಗಳಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿ, ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ಅಭಿಪ್ರಾಯ ಹಂಚಿಕೊಂಡಿರುವ ಭಾರತೀಯ ಫ್ಯಾಂಟಸಿ ಕ್ರೀಡೆಗಳ ಒಕ್ಕೂಟ (FIFS) ನಮಗೆ ಸಲಹೆ ನೀಡಿದೆ ಎಂದು ಮನಿ ಕಂಟ್ರೋಲ್ ತನ್ನ ವರದಿಯಲ್ಲಿ ತಿಳಿಸಿದೆ.
ಇದನ್ನೂ : ಚೆನ್ನೈ ಡೆಲ್ಲಿ ನಡುವೆ ಮೊದಲ ಕ್ವಾಲಿಫೈಯರ್ : ಗೆದ್ರೆ ಫೈನಲ್, ಸೋತ್ರು ಇದೆ ಚಾನ್ಸ್
ಇದನ್ನೂ : ಭಾರತಕ್ಕೊಬ್ಬ ವೇಗದ ಬೌಲರ್ : ತರಕಾರಿ ವ್ಯಾಪಾರಿಯ ಮಗನ ವೇಗಕ್ಕೆ ಬೆರಗಾಯ್ತು ಕ್ರಿಕೆಟ್ ಜಗತ್ತು
( Dream11 fantasy sports platform suspends operations in Karnataka )