TENANT : ‘ಟೆನೆಂಟ್’ ಕಥೆ ಹೇಳೊದಕ್ಕೆ ರೆಡಿಯಾದ್ರು ಅನ್‌ಲಾಕ್‌ ಶ್ರೀಧರ ಶಾಸ್ತ್ರಿ

ಚಂದನವನದಲ್ಲೀಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ಈ ನಡುವಲ್ಲೇ ಹೊಸ ಸಿನಿಮಾಗಳು ಕೂಡ ಸೆಟ್ಟೇರುತ್ತಿವೆ. ಅದ್ರರಲ್ಲೂ ಹೊಸಬರ ತಂಡವೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಯುವ ಪ್ರತಿಭೆ ಶ್ರೀಧರ್ ಶಾಸ್ತ್ರಿ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಹೊಚ್ಚ ಹೊಸ ಸಿನಿಮಾ ‘ಟೆನೆಂಟ್’. ಟೈಟಲ್ ಹಾಗೂ ಚಿತ್ರದ ಥೀಮ್ ಪೋಸ್ಟರ್ ಬಿಡುಗಡೆ ಮಾಡಿ ಗಮನ ಸೆಳೆಯುತ್ತಿರುವ ಚಿತ್ರತಂಡ ಮುಂದಿನ ವಾರದಿಂದ ಚಿತ್ರೀಕರಣ ಆರಂಭಿಸಲಿದೆ.

ಈಗಾಗಲೇ ಅನ್ ಲಾಕ್ ಕಿರುಚಿತ್ರದ ಮೂಲಕ ಖ್ಯಾತಿ ಪಡೆದುಕೊಂಡಿರುವ ಶ್ರೀಧರ್ ಶಾಸ್ತ್ರಿ ಇದೇ ಮೊದಲ ಬಾರಿಗೆ ಸಿನಿಮಾ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. ನಿರ್ದೇಶನದ ಜೊತೆಗೆ ಟೆನೆಂಟ್‌ಗೆ ಅದ್ಬುತ ಕಥೆಯೊಂದನ್ನು ಸಿದ್ದಪಡಿಸಿದ್ದಾರೆ. ಅಷ್ಟೇ ಅಲ್ಲದೇ ಚಿತ್ರಕತೆಯ ಜವಾಬ್ದಾರಿಯನ್ನೂ ಶ್ರೀಧರ್‌ ಹೊತ್ತುಕೊಂಡಿದ್ದಾರೆ.

ಧರ್ಮ ಕೀರ್ತಿರಾಜ್, ತಿಲಕ್ ಶೇಖರ್, ಸೋನು ಗೌಡ, ರಾಕೇಶ್ ಮಯ್ಯ, ಉಗ್ರಂ ಮಂಜು ಸೇರಿದಂತೆ ಖ್ಯಾತ ನಟ, ನಟಿಯರ ದಂಡೇ ಸಿನಿಮಾದಲ್ಲಿದೆ. ಕೊರೊನಾ ವೈರಸ್‌ ಸೋಂಕಿನ ಹಿನ್ನೆಲೆಯಲ್ಲಿ ವಿಶ್ವವೇ ತತ್ತರಿಸಿದೆ. ಅದ್ರಲ್ಲೂ ಲಾಕ್‌ಡೌನ್‌ ಹೇರಿಕೆಯ ಹೊತ್ತಲ್ಲಿ ನಡೆದ ಕ್ರೈಂ ಥ್ರಿಲ್ಲರ್‌ ಸಿನಿಮಾವೇ ಟೆನೆಂಟ್. ಬಾಡಿಗೆದಾರ ಹಾಗೂ ಮಾಲೀಕನ ನಡುವೆ ನಡೆಯುವ ಸಂಘರ್ಷದ ಸ್ಟೋರಿಯನ್ನೇ ಸಿನಿಮಾ ಮಾಡಲಾಗಿದೆ.

ಮನೋಹರ್ ಜೋಶಿ ಛಾಯಾಗ್ರಹಣ, ಗಿರೀಶ್ ಒತ್ತೂರು ಸಂಗೀತ ನಿರ್ದೇಶನ ಚಿತ್ರಕ್ಕಿದೆ. ಮಾಸ್ಟರ್ ಚಾಯ್ಸ್ ಕ್ರಿಯೇಷನ್ ಬ್ಯಾನರ್ ನಡಿ ಟಿ.ನಾಗಾರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಶ್ರೀಧರಶಾಸ್ತ್ರೀ ನಿರ್ದೇಶನದಲ್ಲಿ ಮೂಡಿಬಂದಿದ್ದ ಅನ್‌ಲಾಕ್‌ ಕಿರುಚಿತ್ರದ ಕುರಿತು ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ಅನುಭವವನ್ನು ಇಟ್ಟುಕೊಂಡು ಸಿನಿಮಾ ರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

ಇದನ್ನೂ ಓದಿ : ನಾಯಕಿ ಪೋಸ್ಟರ್ ಬಿಡುಗಡೆ ಮಾಡಿದ ‘ಭಜರಂಗಿ 2’ ಚಿತ್ರ ತಂಡ

ಇದನ್ನೂ ಓದಿ : ಪ್ರೇಮಕ್ಕೆ ಕಣ್ಣಿಲ್ಲಾ’ ಅಂತಿದೆ ಸಖತ್ ಚಿತ್ರತಂಡ

( Director Sridhar Shastri, who has gained acclaim through Unlock, is ready to direct Tenant Cinema )

Comments are closed.