Facebook Instagram Close: ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಬಂದ್ ಆಗಲಿದೆಯೇ?

ಮೆಟಾ ಪ್ಲಾಟ್ ಫಾರ್ಮ್(Meta Platforms Inc.) ತನ್ನ ಬಳಕೆದಾರರ ಡೇಟಾವನ್ನು ಅಮೆರಿಕಕ್ಕೆ  ವರ್ಗಾಯಿಸದೇ ಇದ್ದರೆ ಯುರೋಪ್‌ನಲ್ಲಿ ಫೇಸ್‌ಬುಕ್ (Facebook) ಮತ್ತು ಇನ್ಸ್ಟಾಗ್ರಾಮ್ (Instagram) ಅನ್ನು ಮುಚ್ಚುವುದಾಗಿ (Facebook Instagram Close) ಯೂರೋಪಿಯನ್ ಯೂನಿಯನ್‌ಗೆ ಸೆಡ್ಡು ಹೊಡೆದಿರುವ ಫೇಸ್‌ಬುಕ್ ಗಂಭೀರ ಎಚ್ಚರಿಕೆ ನೀಡಿದೆ. ಆದರೆ 2020 ರಲ್ಲಿ ಯೂರೋಪಿಯನ್ ಯೂನಿಯನ್ ಕೋರ್ಟ್ ಆಫ್ ಜಸ್ಟಿಸ್‌ ವಿಚಾರಣೆಯಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯದಲ್ಲಿ ಈಕುರಿತು ಹಿನ್ನೆಡೆ ಉಂಟಾಗಿದೆ.

ಗುರುವಾರ ಪ್ರಕಟವಾದ ತನ್ನ ವಾರ್ಷಿಕ ವರದಿಯಲ್ಲಿ, ಮೆಟಾವು “ಹೊಸ ಅಥವಾ ಅಸ್ತಿತ್ವದಲ್ಲಿರುವ ಒಪ್ಪಂದಗಳ ಮೇಲೆ ಅವಲಂಬಿತವಾಗದಿದ್ದರೆ ಸ್ಟ್ಯಾಂಡರ್ಡ್ ಒಪ್ಪಂದದ ಷರತ್ತುಗಳು ಎಂದು ಕರೆಯಲ್ಪಡುವ – ಡೇಟಾವನ್ನು ಬದಲಾಯಿಸಲು, ಸಾಧ್ಯವಾಗುವುದಿಲ್ಲ” ಎಂದು ಹೇಳಿದೆ. ಮೆಟಾ ತನ್ನ ಹಿಂದಿನ ವಾರ್ಷಿಕ ವರದಿಯಲ್ಲಿ ಸ್ಟ್ಯಾಂಡರ್ಡ್ ಒಪ್ಪಂದದ ಷರತ್ತುಗಳನ್ನು ಬಳಸಲು ಅನುಮತಿಸದಿದ್ದರೆ, ಯುರೋಪ್‌ನಲ್ಲಿ ತನ್ನ ಎರಡು ಪ್ರಮುಖ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು  ಅದರ ವ್ಯವಹಾರದ ಭಾಗಗಳನ್ನು “ನಿರ್ವಹಿಸಲು ಸಾಧ್ಯವಾಗುವುದಿಲ್ಲ” ಎಂದು ಎಚ್ಚರಿಸಿದೆ.

“ನಮಗೆ ಯುರೋಪ್‌ನಿಂದ ಹಿಂತೆಗೆದುಕೊಳ್ಳುವ ಯಾವುದೇ ಅಪೇಕ್ಷೆ ಮತ್ತು ಯಾವುದೇ ಯೋಜನೆಗಳಿಲ್ಲ. ಆದರೆ  ವಾಸ್ತವವೆಂದರೆ ಮೆಟಾ ಮತ್ತು ಇತರ ಅನೇಕ ವ್ಯವಹಾರಗಳು, ಸಂಸ್ಥೆಗಳು ಮತ್ತು ಸೇವೆಗಳು ಜಾಗತಿಕ ಸೇವೆಗಳನ್ನು ನಿರ್ವಹಿಸಲು ಯುರೋಪ್ ಮತ್ತು ಅಮೇರಿಕ ನಡುವಿನ ಡೇಟಾ ವರ್ಗಾವಣೆಯನ್ನು ಅವಲಂಬಿಸಿವೆ,” ಎಂದು ಮೆಟಾ ವಕ್ತಾರರು ಇಮೇಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಫೇಸ್‌ಬುಕ್ ತನ್ನ ಸೇವೆಗಳನ್ನು ಹಿಂಪಡೆಯುವುದಾಗಿ ಬೆದರಿಕೆ ಹಾಕುತ್ತಿರುವುದು ಇದೇ ಮೊದಲಲ್ಲ. 2020 ರಲ್ಲಿ ಆಸ್ಟ್ರೇಲಿಯಾದಲ್ಲಿ ಜನರು ಮತ್ತು ಪ್ರಕಾಶಕರನ್ನು ಸುದ್ದಿ ಹಂಚಿಕೊಳ್ಳದಂತೆ ನಿರ್ಬಂಧಿಸಲು ಯೋಜಿಸಿದೆ ಎಂದು ಹೇಳಿದೆ. ಕಂಪನಿಯು ತಮ್ಮ ಲೇಖನಗಳಿಗಾಗಿ ಮಾಧ್ಯಮ ಸಂಸ್ಥೆಗಳಿಗೆ ಪಾವತಿಸಲು ಒತ್ತಾಯಿಸುವ ಉದ್ದೇಶಿತ ಕಾನೂನಿಗೆ ವಿರುದ್ಧವಾಗಿ ಯೋಚನೆಯನ್ನು ಹೊಂದಿದ್ದು ಲಾಭವನ್ನು ತನಗೇ ಉಳಿಸಿಕೊಳ್ಳುವ ಪ್ರಯತ್ನದಲ್ಲಿದೆ.

ಅಮೆರಿಕದ ಷೇರುಪೇಟೆಯಲ್ಲಿ ಮೆಟಾ ಪ್ಲಾಟ್‌ಫಾರ್ಮ್ ಇಂಕ್ ಕಂಪನಿಯ ಷೇರು ಮೌಲ್ಯ ಇಳಿಕೆ ಆಗಿದ್ದರಿಂದ ಈ ಕಂಪನಿಯ ಒಡೆತನಕ್ಕೆ ಒಳಪಡುವ ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾರ್ಕ್ ಝುಕರ್‌ಬರ್ಗ್‌ ಸಂಪತ್ತು 2.31 ಲಕ್ಷ ಕೋಟಿ ರೂಪಾಯಿ (31 ಬಿಲಿಯನ್ ಡಾಲರ್) ಕುಸಿತವಾಗಿದೆ. ಇದರಿಂದಾಗಿ 2015ರ ಜುಲೈ ನಂತರದಲ್ಲಿ ವಿಶ್ವದ 10 ಅತಿ ಶ್ರೀಮಂತರ ಪಟ್ಟಿಯಿಂದ ಝುಕರ್‌ಬರ್ಗ್‌ಹೊರಗುಳಿಯುವಂತಾಗಿದೆ.

ಇದನ್ನೂ ಓದಿ: Best Budget Smartphones: 16,500 ರೂ. ಒಳಗಿನ ಸಖತ್ ಸ್ಮಾರ್ಟ್‌‌ಫೋನ್‌ಗಳಿವು; ನಿಮ್ಮ ಸಂಗಾತಿಗೆ ಉಡುಗೊರೆ ನೀಡಿ

ಇದನ್ನೂ ಓದಿ: Facebook Loan: 2ರಿಂದ 50 ಲಕ್ಷದವರೆಗೆ ಸಾಲ ಕೊಡುತ್ತೆ ಫೇಸ್‌ಬುಕ್; ಯಾರಿಗೆ ಸಿಗುತ್ತೆ? ಪಡೆಯುವುದು ಹೇಗೆ?

(Facebook Instagram Close Meta owned companies may shut in Europe soon)

Comments are closed.