Facebook Settings: ಫೇಸ್‌ಬುಕ್‌ ನಲ್ಲಿ ನೀವು ಮಾಡಲೇಬೇಕಾದ ಸೆಟ್ಟಿಂಗ್ಸ್‌ಗಳು ಯಾವುದು ಅಂತ ನಿಮಗೆ ಗೊತ್ತಾ?

ಫೇಸ್‌ಬುಕ್‌(Facebook) ಅನ್ನು ಉಪಯೋಗಿಸುವಾಗ ನಿಮ್ಮ ಖಾಸಗೀ ವಿಷಯಗಳನ್ನು ಎಷ್ಟು ಉತ್ತಮವಾಗಿ ಪ್ರೊಟೆಕ್ಟ್‌(Protect) ಮಾಡಬಹುದು ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು(Facebook Settings). ಮೆಟಾದ ಒಡೆತನದಲ್ಲಿರುವ ಫೇಸ್‌ಬುಕ್‌ ಒಂದು ಜನಪ್ರಿಯ ಸಾಮಾಜಿಕ ಮಾಧ್ಯಮ. ಆದರೆ ಇತ್ತೀಚೆಗೆ ಬಳಕೆದಾರರ ದತ್ತಾಂಶಗಳ ಗೌಪ್ಯತೆಯ ಸಮಸ್ಯೆಗಳು ಕಾಣಿಸುತ್ತಿವೆ. ಅದಕ್ಕಾಗಿ ನಿಯಮಿತವಾಗಿ ಗೌಪ್ಯತಾ ತಪಾಸಣೆಗಳ(Privacy checkup)ನ್ನು ಮಾಡಿಕೊಳ್ಳುವುದು ಉತ್ತಮ ಆಲೋಚನೆಯಾಗಿದೆ. ಇದು ಫೇಸ್‌ಬೇಕ್‌ನಲ್ಲಾದ ಬದಲಾವಣೆಗಳನ್ನು ತಿಳಿಯಪಡಿಸುವುದರ ಜೊತೆಗೆ, ಯಾವ ಅಪ್ಲಿಕೇಶನ್‌ಗಳು ನಿಮ್ಮ ದತ್ತಾಂಶಗಳನ್ನು ಓದುತ್ತಿವೆ ಎಂಬುದನ್ನು ತಿಳಿಸುತ್ತದೆ. ವೀಕ್‌ ಪಾಸ್‌ವರ್ಡ್‌ ನಿಂದಾಗಿ ನಿಮ್ಮ ಅಕೌಂಟ್‌ನ್ನು ಸುಲಭವಾಗಿ ಓದಬಹುದಾಗಿದೆ. ನಿಮ್ಮ ಫೇಸ್‌ಬುಕ್‌ನ ಖಾಸಗೀ ಸೆಟ್ಟಿಂಗ್ಸ್‌ಗಳನ್ನು ನಿಮಗೆ ಬೇಕಾದ ಹಾಗೆ ಸೆಟ್‌ ಮಾಡಿಕೊಳ್ಳಬಹುದಾಗಿದೆ.

ನೀವು ನೀಡುವ ವೀಕ್‌ ಪಾಸ್‌ವರ್ಡ್‌ನಿಂದಾಗಿ ನಿಮ್ಮ ಖಾಸಗೀ ವಿಷಯಗಳನ್ನು ನೇರವಾಗಿ ಪಡೆಯಬಹುದಾಗಿದೆ. ಪ್ರೈವೆಸಿ ಸೆಟ್ಟಿಂಗ್ಸ್‌ಗಳು ನಿಮ್ಮ ಗೌಪ್ಯತೆಯನ್ನು ಕಾಪಾಡುತ್ತವೆ. ನೀವು ಹೊಂದಿಸಿದ ಪ್ರೈವೆಸಿ ಸೆಟ್ಟಿಂಗ್ಸ್‌ಗಳನ್ನು ಸುಲಭವಾಗಿ ನೋಡಬಹುದಾಗಿದೆ ಮತ್ತು ಯಾವುದೇ ಸಮಯದಲ್ಲಿ ಹೊಸದಾಗಿ ಹೊಂದಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ : Google Mapನಲ್ಲಿ ನಿಮ್ಮ ಮನೆಯ ಅಡ್ರೆಸ್‌ ಬದಲಾಯಿಸಬಹುದು! ಹೇಗೆ ಗೊತ್ತೇ?

ಫೇಸ್‌ಬುಕ್‌ನಲ್ಲಿ ಪ್ರೈವೇಸಿ ಸೆಟ್ಟಿಂಗ್ಸ್‌ ಮಾಡುವುದು ಹೇಗೆ?

  • ನಿಮ್ಮ ಫೇಸ್‌ಬುಕ್‌ ಖಾತೆ ತೆರೆಯಿರಿ.
  • ಬಲ ಮೂಲೆಯಲ್ಲಿರುವ ನೇರ 3 ಲೈನ್‌ ಮೆನ್ಯು ಆಯ್ದುಕೊಳ್ಳಿ.
  • ಸೆಟ್ಟಿಂಗ್ಸ್‌ ಮತ್ತು ಪ್ರೈವೇಸಿ ಆಯ್ದುಕೊಳ್ಳಿ.
  • ಡ್ರಾಪ್‌ ಡೌನ್‌ ಮೆನ್ಯುವಿನಲ್ಲಿರುವ ಸೆಟ್ಟಿಂಗ್ಸ್‌ ಗೆ ಹೋಗಿ.
  • ಪ್ರೈವೇಸಿ ಚೆಕ್‌ಅಪ್‌ ಅನ್ನು ಟ್ಯಾಪ್‌ ಮಾಡಿ.

ಫೇಸ್‌ಬುಕ್‌ನ ಇತರ ಮಾಹಿತಿಗಳನ್ನು ನಿಭಾಯಿಸಲು ಹೀಗೆ ಮಾಡಿ :

  • ನೀವು ಆದ್ಯತೆ ನೀಡುವ ವಿಷಯಗಳನ್ನು ಉಪ್ಡೇಟ್‌ ಮಾಡಿಕೊಳ್ಳಿ.
  • ಕಸ್ಟಮೈಜ್‌ ಮಾಡುವುದರ ಮೂಲಕ ಜಾಹಿರಾತುಗಳನ್ನು ನಿಭಾಯಿಸಬಹುದಾಗಿದೆ.
  • ನಿಮಗೆ ಆಸಕ್ತಿಯಿರದ ವಿಷಯಗಳ ಜಾಹಿರಾತುಗಳನ್ನು ಹೈಡ್‌ ಮಾಡಬಹುದು ಅಥವಾ ನಿಮಗೆ ಪ್ರಯೋಜನವಿರುವ ವಿಷಯಗಳನ್ನು ನೋಡಬಹುದು.
  • ಫೇಸ್‌ಬುಕ್‌ನ ಡಾಟಾವನ್ನು ಸಹ ನೀವು ನೋಡಬಹುದಾಗಿದೆ.
  • ಮೆನೇಜಿಂಗ್‌ ಆಕ್ಟಿವಿಟಿ ಲಾಗ್‌ ನಲ್ಲಿ ನೀವು ಫೇಸ್‌ಬುಕ್‌ನಲ್ಲಿ ಶೇರ್‌ ಮಾಡಿದ ಪೋಸ್ಟ್‌, ಫೋಟೋ ಮತ್ತು ವಿಡಿಯೋಗಳನ್ನು ನಿಭಾಯಿಸಬಹುದಾಗಿದೆ.

ಇದನ್ನೂ ಓದಿ : WhatsApp Chat Lock : ನಿಮ್ಮ ಮುಖ್ಯವಾದ ವಾಟ್ಸ್‌ಅಪ್‌ನ ಚಾಟ್‌ಗಳನ್ನು ಬೇರೆಯವರು ಓದದಂತೆ ಲಾಕ್‌ ಮಾಡುವುದು ಹೇಗೆ ಗೊತ್ತೇ?

(Facebook Settings how to manage privacy settings on Facebook)

Comments are closed.