Flipkart Big Saving Days 2023 : ಮೇ 5 ರಿಂದ ಪ್ರಾರಂಭವಾಗಲಿದೆ ಫ್ಲಿಪ್‌ಕಾರ್ಟ್‌ನ ಬಿಗ್‌ ಸೇವಿಂಗ್‌ ಡೇಸ್‌ ಮಾರಾಟ…

ಫ್ಲಿಪ್‌ಕಾರ್ಟ್‌ (Flipkart) ತನ್ನ ಮುಂದಿನ (Upcoming) ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಅನ್ನು ಘೋಷಿಸಿದೆ. ಇದು ಫೋನುಗಳ ಮೇಲೆ ವಿಶೇಷ ರಿಯಾಯಿತಿಗಳನ್ನು ನೀಡುತ್ತಿದೆ. ಫ್ಲಿಪ್‌ಕಾರ್ಟ್‌ ಮಾರಾಟವು (Flipkart Big Saving Days 2023) ಮೇ 5ರಿಂದ ಪ್ರಾರಂಭವಾಗಿ ಆರು ದಿನಗಳವರೆಗೆ ನಡೆಯಲಿದೆ. ಇದು ಮೇ 10 ರಂದು ಮುಕ್ತಾಯಗೊಳ್ಳಲಿದೆ. ಮಾರಾಟದ ಟೀಸರ್ನ ಪ್ರಕಾರ ಈ ಸೇಲ್‌ನಲ್ಲಿ ಐಫೋನ್‌ 13, ಸ್ಯಾಮ್‌ಸಂಗ್‌ ಗ್ಯಾಲೆಕ್ಸಿ F14 5G, ರಿಯಲ್‌ಮಿ C55, ಪಿಕ್ಸೆಲ್‌ 6a ಮತ್ತು ಇತರ ಫೋನ್‌ಗಳು ಸೇರಿವೆ ಎಂದು ಸೂಚಿಸುತ್ತದೆ.

ಕಂಪನಿ ಬಿಡುಗಡೆ ಮಾಡಿರುವ ಮಾರಾಟ ಪಟ್ಟಿಯ ಪ್ರಕಾರ ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಪಿಕ್ಸೆಲ್‌ 6a ಅನ್ನು 25,999 ರೂ. ಗಳ ಆಕರ್ಷಕ ಬೆಲೆಯಲ್ಲಿ ಮತ್ತು ರಿಯಲ್‌ಮಿ GT Neo 3T ಅನ್ನು 19,999 ರೂ.ಗಳ ರಿಯಾಯಿತಿ ಬೆಲೆಯಲ್ಲಿ ಖರೀದಿಸಬಹುದಾಗಿದೆ. ಕೆಲವು ಕೊಡುಗೆಗಳನ್ನು ಒಳಗೊಂಡಿರುವ ಪೊಕೊ X5 Pro ₹20,999 ಕ್ಕೆ ಖರೀದಿಗೆ ಲಭ್ಯವಿರುತ್ತದೆ. ಗ್ರಾಹಕರು 22,999 ರೂ.ಗಳಿಗೆ ರಿಯಲ್‌ಮಿ 10 Pro+ 5G ಅನ್ನು ಖರೀದಿಸಬಹುದಾಗಿದೆ. ಇದೇ ಮಾರಾಟದ ಸಮಯದಲ್ಲಿ ಬಜೆಟ್ ಸ್ನೇಹಿ ಸ್ಮಾರ್ಟ್‌ಫೋನ್‌ ರಿಯಲ್‌ಮಿ C55 ಅನ್ನು 7,999 ರೂ. ಗೆ ಖರೀದಿಸಬಹುದಾಗಿದೆ.

ಇನ್ನು ಐಫೋನ್ 13 ನಲ್ಲಿ ಯಾವುದೇ ರೀತಿಯ ನಿಖರವಾದ ರಿಯಾಯಿತಿಯನ್ನು ಕಂಪನಿ ಇನ್ನೂ ಬಹಿರಂಗಪಡಿಸಲ್ಲವಾದರೂ, ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಗಮನಾರ್ಹ ರಿಯಾಯಿತಿಯಲ್ಲಿ ಲಭ್ಯವಿರಲಿದೆ ಎಂದು ಫ್ಲಿಪ್‌ಕಾರ್ಟ್ ದೃಢಪಡಿಸಿದೆ. ಪ್ರಸ್ತುತ, 5G ಐಫೋನ್ ಫ್ಲಿಪ್‌ಕಾರ್ಟ್‌ನಲ್ಲಿ61,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಪಟ್ಟಿಮಾಡಲಾಗಿದೆ. ಮತ್ತೊಂದೆಡೆ, ಮೊಟೊ e13 ಅನ್ನು 7,499 ರೂ. ಕಡಿಮೆ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಫ್ಲಿಫ್‌ಕಾರ್ಟ್‌ನ ‘ಕರ್ಟನ್‌ ರೈಸರ್‌ ಡೀಲ್‌ಗಳು’ ಮೇ 1 ರಿಂದ ಬಹಿರಂಗೊಳ್ಳಲಿದೆ. ಹಿಂದಿನ ಮಾರಾಟ ಈವೆಂಟ್‌ಗಳಂತೆಯೇ, ಈ ಫ್ಲಾಟ್‌ಫಾರ್ಮ್‌ ಐಫೋನ್‌ 13 ರ ರಿಯಾಯಿತಿ ಬೆಲೆಯನ್ನು ಘೋಸಿಸುವ ಸಾಧ್ಯತೆಯಿದೆ. ಬಿಗ್ ಸೇವಿಂಗ್ ಡೇಸ್ ಸೇಲ್ ಕುರಿತು ಹೆಚ್ಚಿನ ಮಾಹಿತಿಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲವಾದರೂ, ಡೀಲ್‌ಗಳ ಬಗ್ಗೆ ಗ್ರಾಹಕರಿಗೆ ತಿಳಿಸಲು ಈವೆಂಟ್‌ಗೆ ಮುಂಚಿನ ದಿನಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಫ್ಲಿಪ್‌ಕಾರ್ಟ್ ಬಹಿರಂಗಪಡಿಸುವ ನಿರೀಕ್ಷೆಯಿದೆ. ಮಾರಾಟವು ಬ್ಯಾಂಕ್ ಕೊಡುಗೆಗಳು, ವಿನಿಮಯ ಕೊಡುಗೆಗಳು ಮತ್ತು ಉತ್ಪನ್ನಗಳ ಮೇಲೆ ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳನ್ನು ಒಳಗೊಂಡಿರುತ್ತದೆ. ಹೆಚ್ಚುವರಿಯಾಗಿ, ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯತ್ವ ಹೊಂದಿರುವ ಗ್ರಾಹಕರು ಹಿಂದಿನ ಮಾರಾಟಕ್ಕೆ ಮಾಡಿದಂತೆ ಒಂದು ದಿನ ಮುಂಚಿತವಾಗಿ ಮಾರಾಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ : PAN-Aadhaar link news : ನೀವು ಪ್ಯಾನ್ ಕಾರ್ಡ್ – ಆಧಾರ್‌ನೊಂದಿಗೆ ಲಿಂಕ್ ಆಗಿದ್ಯಾ ಅಥವಾ ಇಲ್ಲವೇ? ಈ ರೀತಿ ಪರಿಶೀಲಿಸಿ

ಇದನ್ನೂ ಓದಿ : ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗೆ ನಾಯಕತ್ವದ ಕಿತ್ತಾಟ : ಯಾರಾಗ್ತಾರೆ ಮುಂದಿನ ಸಿಎಂ ?

(Flipkart Big Saving Days 2023 sale begins on May 5. Deals on smartphones)

Comments are closed.