ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಜ್ಞಾನ

ಭಾರತದ ಕಾಲಮಾನಕ್ಕೆ ಡಿಜಿಟಲ್ ಮಾರ್ಕೆಟಿಂಗ್ (Digital Marketing)ಎನ್ನುವ ಶಬ್ದ ಸೇರ್ಪಡೆಯಾಗಿ ಬಹಳಷ್ಟು ವರ್ಷಗಳೇ ಸಂದಿದ್ದರೂ, ಹೆಚ್ಚಿನ ತಿಳುವಳಿಕೆ ಇಲ್ಲದಿರುವುದು ವೈಪರೀತ್ಯವೇ ಸರಿ. ಬಹುತೇಕ ಗೂಗಲ್ ಕೇಂದ್ರಿತವಾಗೇ ಡಿಜಿಟಲ್ ಜಗತ್ತು ಸುತ್ತುತ್ತಿರುವ ಹೊತ್ತಿನಲ್ಲಿ ಕನ್ನಡಕ್ಕಂತೂ ಇಂಥದ್ದೊಂದು ಜಗತ್ತಿನ ಪರಿಚಯವೇ ಇಲ್ಲ ಎನ್ನುವುದೂ ಅಷ್ಟೇ ಸತ್ಯ. ಅದಕ್ಕಾಗಿಯೇ ಸತತ ಆರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಕಲಾಹಂಸ ಇನ್ಫೋಟೆಕ್ ಸಂಸ್ಥೆ, ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್‍ನ್ನು ಪರಿಚಯಿಸಲು ಹೊರಟಿದೆ.

ಏನಿದು ಡಿಜಿಟಲ್ ಮಾರ್ಕೆಟಿಂಗ್ ( Digital Marketing ) ?

ಒಂದು ವ್ಯವಹಾರ ವೃದ್ಧಿಗೆ ಅಗತ್ಯವಾದ ಬಂಡವಾಳ, ಉತ್ಪಾದನಾ ಸಾಮರ್ಥ್ಯ, ಮಾನವ ಸಂಪನ್ಮೂಲ ಇವುಗಳಷ್ಟೇ ಮುಖ್ಯವಾದದ್ದು “ಮಾರ್ಕೆಟಿಂಗ್”. ಆದರೆ ಸಾಂಪ್ರದಾಯಿಕವಾದ ಎಲ್ಲ ಮಾರ್ಕೆಟಿಂಗ್ ವಿಧಾನಗಳಿಗಿಂತ ಭಿನ್ನವಾಗಿ ಇಂದಿನ ಮಾರುಕಟ್ಟೆ ಹೊಸ ಆಯಾಮವನ್ನೇ ತೆರೆದಿಟ್ಟಿದೆ. ಡಿಜಿಟಲ್ ಜಗತ್ತಿನಲ್ಲಿ ಸಾಮಾಜಿಕ ಜಾಲತಾಣಗಳು, ವೆಬ್‍ಸೈಟ್‍ಗಳ ಮೂಲಕ ಜಾಗೃತಿ ಮೂಡಿಸುವುದಲ್ಲದೇ, ಉತ್ಪನ್ನಗಳ ಕುರಿತು ಅನಿಯಮಿತ ಕಂಟೆಂಟ್‍ಗಳನ್ನು ಹಾಕಲು ಕೂಡ ಸಾಧ್ಯವಿರುವುದು ಸಾಂಪ್ರದಾಯಿಕ ಮಾರುಕಟ್ಟೆಯ ಹಿನ್ನಡೆಗಳನ್ನು ಮೀರುವ ಸಾಧ್ಯತೆಯನ್ನು ತೆರೆದಿಟ್ಟಿದೆ. ಹಾಗಾಗಿಯೇ ಡಿಜಿಟಲ್ ಮಾರ್ಕೆಟಿಂಗ್ (Digital Marketing) ಎನ್ನುವುದು ಒಂದು ವ್ಯವಹಾರದ ವೃದ್ಧಿಗಾಗಿ ಆನ್‍ಲೈನ್ ಮೂಲಕ ನಡೆಸುವ ಎಲ್ಲ ವಿಧಾನದ ಪ್ರಚಾರ ಕಾರ್ಯತಂತ್ರ. ಅದರಲ್ಲಿ ಬ್ರಾಂಡಿಂಗ್ , ಎಸ್‍ಸಿಒ, ಲಿಂಕ್ ಬಿಲ್ಡಿಂಗ್, ಈ-ಮೈಲ್, ವಾಟ್ಸಾಪ್ ಮಾರ್ಕೆಟಿಂಗ್, ಸರ್ಚ್ ಇಂಜಿನ್ ಮಾರ್ಕೆಟಿಂಗ್, ಫೇಸ್‍ಬುಕ್ ಆಡ್ಸ್, ಕಂಟೆಂಟ್ ಮಾರ್ಕೆಟಿಂಗ್, ಅನಾಲಿಟಿಕ್ಸ್, ಕಾಂಪಿಟೇಟರ್ ರಿಸರ್ಚ್ ತರಹದ ಅನೇಕ ಆಯಾಮಗಳು ಸೇರಿಕೊಂಡಿದ್ದು, ಅಗತ್ಯವಿರುವ ಜನರಿಗಷ್ಟೇ ನಮ್ಮ ಉದ್ಯಮದ ಮಾಹಿತಿ ಒದಗಿಸುವುದು ಡಿಜಿಟಲ್ ಮಾಧ್ಯಮದ ತಾಕತ್ತು. ಇದೇ ಕಾರಣಕ್ಕೆ ಗಲ್ಲಿಗೊಂದರಂತೆ ವೆಬ್‍ಸೈಟ್‍ಗಳು ಹುಟ್ಟಿ ಪ್ರಚಾರೋದ್ಯಮಕ್ಕೆ ಕೈಯಿಕ್ಕಿರುವುದು.

Digital Marketing : ವಿಶೇಷತೆಗಳು ಮತ್ತು ಭಿನ್ನತೆಗಳು

  • ಮೊದಲ ಭಿನ್ನತೆಯೆಂದರೆ ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ದಿನಪತ್ರಿಕೆ, ಭಿತ್ತಿಪತ್ರಗಳ ಮೂಲಕ ಪ್ರಚಾರ ನಡೆದರೆ, ಆನ್‍ಲೈನ್ ಪ್ರಚಾರದಲ್ಲಿ ವೆಬ್‍ಸೈಟ್ ಹಾಗೂ ಸೋಷಿಯಲ್ ಮೀಡಿಯಾ ಮೂಲಕ ಪ್ರಚಾರ ನಡೆಸಲಾಗುತ್ತದೆ.
  • ಸಾಂಪ್ರದಾಯಿಕ ಮಾರ್ಕೆಟಿಂಗ್ ಹೆಚ್ಚು ಬಂಡವಾಳ ನಿರೀಕ್ಷಿಸಿದರೆ, ಆಧುನಿಕ ಮಾರ್ಕೆಟಿಂಗ್ ಹೆಚ್ಚು ಬಂಡವಾಳ ನಿರೀಕ್ಷಿಸದೇ ಪರಿಣಾಮ ಹೆಚ್ಚು ಬೀರುತ್ತದೆ.
  • ಸಾಂಪ್ರದಾಯಿಕ ಮಾರ್ಕೆಟಿಂಗ್‍ನಲ್ಲಿ ನಮ್ಮ ಕಂಟೆಂಟ್ ನೋಡಿದವರೆಷ್ಟು ಎಂದು ಅಳೆಯುವುದು ಕಷ್ಟಸಾಧ್ಯ. ಆದರೆ ಆಧುನಿಕ ವಿಧಾನದಲ್ಲಿ ಮಾಪನ ಮಾಡುವುದು ಮತ್ತು ಬೇಕಿದ್ದವರಿಗೆ ಮಾತ್ರ ಉದ್ಯಮದ ಮಾಹಿತಿ ಒದಗಿಸುವುದು ಸುಲಭ ಸಾಧ್ಯ.
  • ಸಾಂಪ್ರದಾಯಿಕ ಮಾರುಕಟ್ಟೆಯಲ್ಲಿ ಕಂಟೆಂಟ್‍ಗೆ ಮಿತಿ ಅನಿವಾರ್ಯವಾಗುತ್ತದೆ. ಆದರೆ ಆಧುನಿಕ ಮಾರ್ಕೆಟಿಂಗ್‍ನಲ್ಲಿ ಕಂಟೆಂಟ್ ಲಿಮಿಟ್ ಇರುವುದಿಲ್ಲ.

ಇದಲ್ಲದೇ ಅನೇಕ ಲಾಭದಾಯಕ ಸ್ಟ್ರಾಟಿಜಿಗಳಿಂದಾಗಿ ಡಿಜಿಟಲ್ ಮಾರ್ಕೆಟಿಂಗ್ (Digital Marketing)ಇನ್ನಿಲ್ಲದ ಪ್ರಾಮುಖ್ಯತೆಯನ್ನು ಪಡೆಯುತ್ತಿದೆ. ಆದರೆ ಕನ್ನಡದಲ್ಲಿ ಅಗತ್ಯ ಸಲಕರಣೆ ಹಾಗೂ ಸಿದ್ಧತೆಯ ಕೊರತೆ ಇರುವುದರಿಂದ ಕನ್ನಡದಲ್ಲಿ ಎಸ್‍ಸಿಒ ಸ್ಪೆಷಲಿಷ್ಟ್ ಗಳು ಹಾಗೂ ಡಿಜಿಟಲ್ ಮಾರ್ಕೆಟಿಂಗ್ ತಜ್ಞರು ಅತ್ಯಂತ ವಿರಳವಾಗಿದ್ದಾರೆ. ಈ ಕೊರತೆಯನ್ನು ನೀಗಿಸಲು ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಕನ್ನಡದಲ್ಲಿ ಮಾಹಿತಿ ನೀಡಲು ಕಲಾಹಂಸ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಉದ್ಯುಕ್ತವಾಗಿದೆ. ಈ ತಿಳಿದು ತಿಳಿಸುವ ಉದ್ಯಮಕ್ಕೆ ಬೆಂಬಲ ನಿಮ್ಮದು, ಹಂಬಲ ನಮ್ಮದು. ಮುಂದೆ ಕನ್ನಡದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಗ್ಗೆ ಸರಣಿ ಲೇಖನಕ್ಕಾಗಿ ನಿತ್ಯ ನ್ಯೂಸ್ ನೆಕ್ಸ್ಟ್ ಬಳಸುತ್ತಿರಿ.

ಇದನ್ನೂ ಓದಿ : ಗೂಗಲ್‌ ಫೋಟೋಸ್‌ ನಿಂದ ಫೋಟೋಗಳನ್ನು ನಿಮ್ಮ ಗ್ಯಾಲರಿಗೆ ವರ್ಗಾಯಿಸುವುದು ಹೇಗೆ? ಇಲ್ಲಿದೆ ಸರಳ ಹಂತಗಳು

ಇದನ್ನೂ ಓದಿ : A Laptop Or A Tablet : ವಿದ್ಯಾರ್ಥಿಗಳಿಗೆ ಯಾವುದು ಉತ್ತಮ? ಲ್ಯಾಪ್‌ಟಾಪ್‌ ಅಥವಾ ಟಾಬ್ಲೆಟ್‌!!

Get Knowledge of Digital Marketing In Kannada.

Comments are closed.