ಭಾನುವಾರ, ಜೂನ್ 15, 2025
HometechnologyGionee 13 Pro Reverse Charging: ಜಿಯೋನಿ 13 ಪ್ರೊ; ರೂ 6,999ಕ್ಕೆ ರಿವರ್ಸ್ ಚಾರ್ಜಿಂಗ್...

Gionee 13 Pro Reverse Charging: ಜಿಯೋನಿ 13 ಪ್ರೊ; ರೂ 6,999ಕ್ಕೆ ರಿವರ್ಸ್ ಚಾರ್ಜಿಂಗ್ ಮಾಡಬಹುದಾದ ಸ್ಮಾರ್ಟ್‌ಫೋನ್ ಇದು!

- Advertisement -

ಚೀನಾದ ಫೋನ್ ತಯಾರಕ  ಬ್ರ್ಯಾಂಡ್ ಜಿಯೋನಿ, ಜಿಯೋನಿ 13 ಪ್ರೊ ಸ್ಮಾರ್ಟ್ ಫೋನ್ ತನ್ನ ತಾಯ್ನಾಡಿನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಿದೆ.  ಈ ಹ್ಯಾಂಡ್‌ಸೆಟ್‌ನ ವಿನ್ಯಾಸವು ಆಪಲ್ (Apple)  ಐಫೋನ್‌ನಿಂದ 13 (iPhone 13 ) ಪ್ರೇರಿತವಾಗಿದೆ. ಈ ಸ್ಮಾರ್ಟ್‌ಫೋನ್ ಐಫೋನ್ 13 ಮತ್ತು ಐಫೋನ್  13 ಪ್ರೊ ಹ್ಯಾಂಡ್‌ಸೆಟ್‌ಗಳು, ಫ್ಲಾಟ್ ಎಡ್ಜ್‌ಗಳು,  ವಾಲ್ಯೂಮ್ ರಾಕರ್ ಮತ್ತು ಕೆಂಪು ಛಾಯೆಯ ಪವರ್ ಬಟನ್‌ನಂತೆಯೇ ಬ್ಯಾಕ್ ಕ್ಯಾಮೆರಾ ವಿನ್ಯಾಸವನ್ನು ಹೊಂದಿದೆ. ರಿವರ್ಸ್ ಚಾರ್ಜಿಂಗ್ ಫೀಚರ್  (Gionee 13 Pro Reverse Charging) ಹೊಂದಿದೆ ಎಂಬುದು ಅತಿ ವಿಶೇಷ ಫೀಚರ್ ಆಗಿದೆ.

ಸ್ಪೆಸಿಫಿಕೇಶನ್ ವಿಷಯದಲ್ಲಿ, ಜಿಯೋನಿ 13 ಪ್ರೊ ( Gionee 13 Pro) 6.26-ಇಂಚಿನ ಎಲ್ ಸಿಡಿ ಡಿಸ್ಪ್ಲೇಯನ್ನು ದೊಡ್ಡ ನಾಚ್ ಮತ್ತು ಎಚ್ ಡಿ+ ರೆಸಲ್ಯೂಶನ್ ಅನ್ನು ಹೊಂದಿದೆ. ಮುಂಭಾಗದಲ್ಲಿ, 5 ಎಂಪಿ ಸೆಲ್ಫಿ ಕ್ಯಾಮೆರಾ ಇದೆ. ಇದು ಎಲ್ಇಡಿ ಫ್ಲ್ಯಾಷ್ ಜೊತೆಗೆ 13 ಎಂಪಿ ಪ್ರೈಮರಿ ಲೆನ್ಸ್ ಮತ್ತು ಸೆಕೆಂಡರಿ ಶೂಟರ್ ಅನ್ನು ಒಳಗೊಂಡಿರುವ ಡ್ಯುಯಲ್ ರಿಯರ್ ಕ್ಯಾಮೆರಾ ಮಾಡ್ಯೂಲ್ ಅನ್ನು ಹೊಂದಿದೆ.

ಕನೆಕ್ಟಿವಿಟಿಯಲ್ಲಿ ಇದು 4ಜಿ ಎಲ್‌ಟಿಇ, ಯುಎಸ್ ಬಿ ಟೈಪ್ ಸಿ, ಬ್ಲೂಟೂತ್, ವೈಫೈ 3.5 ಎಂಎಂ ಹೆಡ್ ಫೋನ್ ಜಾಕ್ ಹೊಂದಿದೆ. ಸೆಕ್ಯೂರಿಟಿಗಾಗಿ ಇದು ಫೇಸ್ ಅನ್ ಲಾಕ್ ಸೌಲಭ್ಯ ಹೊಂದಿದೆ. ಸ್ಪೀಟ್ ಸ್ಕ್ರೀನ್ ಫೀಚರ್ ಸಹ ಇದ್ದು, ಒಂದೇ ಸಮಯದಲ್ಲಿ ಗೇಮಿಂಗ್ ಹಾಗೂ ಚಾಟಿಂಗ್ ಸಾಧ್ಯವಿದೆ. ಈ ಹ್ಯಾಂಡ್‌ಸೆಟ್ 4ಜಿಬಿ ರಾಮ್ ಮತ್ತು 128 ಜಿಬಿ  ಇಂಟರ್ನಲ್ ಸ್ಟೋರೇಜ್ ಹೊಂದಿದೆ. ಇದರ ಜೊತೆಗೆ ಈ ಸ್ಮಾರ್ಟ್ ಫೋನ್ (Unisoc T310 )ಚಿಪ್‌ಸೆಟ್‌ನಿಂದ ಚಾಲಿತವಾಗಿದೆ.

ಇದು ಹುವಾಯಿ ಮೊಬೈಲ್ ಸೇವೆಗಳಿಗೆ ಅಕ್ಸೆಸ್ ಹೊಂದಿದೆ. ಹಾಗೆ  ಈ  ಹ್ಯಾಂಡ್‌ಸೆಟ್ ಹಾರ್ಮನಿ ಒಎಸ್( HarmonyOS ) ಸಾಫ್ಟ್ ವೆರ್ ನಲ್ಲಿ ರನ್ ಆಗುತ್ತದೆ. 3500 ಎಂ ಎಎಚ್ ಬ್ಯಾಟರಿ ಹಾಗೂ ರಿವರ್ಸ್ ಚಾರ್ಜಿಂಗ್ ಫೀಚರ್  ಹೊಂದಿದೆ. ಬೆಲೆ ಕುರಿತು ಹೇಳುವುದಾದರೆ, ಜಿಯೋನಿ 13 ಪ್ರೊ ಸಿಎನ್ ವೈ 529  ( ಅಂದಾಜು 6,999)ರಿಂದ ಬೆಲೆಯನ್ನು ಹೊಂದಿದೆ ಈ ಫೋನ್ ಗ್ಲೋ ಗೋಲ್ಡ್, ಡೀಪ್ ಸೀ ಬ್ಲೂ, ಬ್ರಿಲಿಯಂಟ್ ಪರ್ಪಲ್ ಮತ್ತು ಗ್ರ್ಯಾಫೈಟ್ ಬ್ಲಾಕ್ ಎಂಬ ನಾಲ್ಕು ವೇರಿಯಂಟ್ ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ: Indian Smartphone OS: ಆಂಡ್ರಾಯ್ಡ್ ಹಾಗೂ ಐಓಎಸ್ ಗೆ ಪ್ರತಿಸ್ಪರ್ಧಿಯಾಗಿ ಭಾರತೀಯ ಒಎಸ್! ಮೇಡ್ ಇನ್ ಇಂಡಿಯಾ ತಂತ್ರಾಂಶ ತಯಾರಿಗೆ ಕೇಂದ್ರದ ಒಲವು

(Gionee 13 Pro Reverse Charging feature available for just Rs 6999 via Flipkart Offer)

RELATED ARTICLES

Most Popular