COVID-19 cases : ದೇಶದಲ್ಲಿ ಒಂದೇ ದಿನದಲ್ಲಿ 2.09 ಲಕ್ಷ ದೈನಂದಿನ ಕೋವಿಡ್​ ಪ್ರಕರಣ ವರದಿ

COVID-19 cases : ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 2,09,918 ದೈನಂದಿನ ಕೋವಿಡ್​ ಪ್ರಕರಣಗಳು ವರದಿಯಾಗಿವೆ. ಈ ಮೂಲಕ ದೇಶದಲ್ಲಿ ಒಟ್ಟು ಕೋವಿಡ್​ ಪ್ರಕರಣಗಳ ಸಂಖ್ಯೆ 4.13 ಕೋಟಿಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಅಧಿಕೃತ ಮಾಹಿತಿಯನ್ನು ನೀಡಿದೆ. ಇನ್ನು ಇದರ ಜೊತೆಯಲ್ಲಿ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 959 ಮಂದಿ ಕೋವಿಡ್​ನಿಂದ ಸಾವನ್ನಪ್ಪಿದ್ದಾರೆ . ದೇಶದಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 4,95,050 ತಲುಪಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ 2020ರ ಮಾರ್ಚ್ ತಿಂಗಳಿನಲ್ಲಿ ಕೊರೊನಾ ಸಾವು ವರದಿಯಾಗಿತ್ತು.

ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ 53,669ರಷ್ಟು ಕಡಿಮೆಯಾಗಿದ್ದು ಈ ಮೂಲಕ ದೇಶದಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ 18,31,528ಕ್ಕೆ ತಲುಪಿದೆ. ದೇಶದಲ್ಲಿ ಕೊರೊನಾ ರಿಕವರಿ ಪ್ರಮಾಣ 94.37 ಪ್ರತಿಶತಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ದೈನಂದಿನ ಪಾಸಿಟಿವಿಟಿ ದರ 15.77 ಪ್ರತಿಶತವಾಗಿದೆ. ಹಾಗೂ ವಾರದ ಪಾಸಿಟಿವಿಟಿ ದರವು 15.75 ಪ್ರತಿಶತವಾಗಿದೆ. ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 3,89,76,122ಕ್ಕೆ ಏರಿಕೆ ಕಂಡಿದೆ. ಆದರೆ ಕೋವಿಡ್​ ಸಾವಿನ ಪ್ರಮಾಣವು ಶೇಕಡಾ 1.20 ಇದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆಯು 4,13,02,440, ಆಗಿದೆ. ದೇಶದಲ್ಲಿ ಈವರೆಗೆ 166.03 ಕೋಟಿ ಡೋಸ್​ ಕೋವಿಡ್​ ಲಸಿಕೆಗಳನ್ನು ನೀಡಲಾಗಿದೆ.

ಇದನ್ನು ಓದಿ : Gungun Upadhyay : ಹೋಟೆಲ್‌ನ 6ನೇ ಮಹಡಿಯಿಂದ ಜಿಗಿದು ಖ್ಯಾತ ಮಾಡೆಲ್‌ ಗುಂಗುನ್‌ ಉಪಾಧ್ಯಾಯ ಆತ್ಮಹತ್ಯೆ ಯತ್ನ

ಇದನ್ನೂ ಓದಿ : Badava Rascal : ಕನ್ನಡದ ಬಳಿಕ ತೆಲುಗಿಗೆ ಬಡವ ರಾಸ್ಕಲ್ : ಡಾಲಿ ಧನಂಜಯ್ ಸಿನಿಮಾ ಪೋಸ್ಟರ್ ರಿಲೀಸ್

India reports over 2.09 lakh COVID-19 cases, 959 deaths in 24 hours; daily positivity recorded at 15.77%

Comments are closed.