ಗೂಗಲ್ (Google) ಆಂಡ್ರಾಯ್ಡ್ (Android) ಬಳಕೆದಾರರಿಗಾಗಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಲೇ ಬಂದಿದೆ. ಮೇ ತಿಂಗಳಿನಲ್ಲಿ ನಡೆದ I/O 2022 ನ ಈವೆಂಟ್‌ನಲ್ಲಿ ಗೂಗಲ್ ಹೆಲ್ತ್ ಕನೆಕ್ಟ್ ಎಂಬ ಆಪ್ (Google Health Connect App) ಅನ್ನು ಹೊರ ತರುವುದಾಗಿ ಘೋಷಿಸಿತ್ತು.ಬಳಕೆದಾರರು ತಮ್ಮ ಫಿಟ್‌ನೆಸ್ ಡಾಟಾವನ್ನು ಆಂಡ್ರಾಯ್ಡ್ ಸಾಧನಗಳಲ್ಲಿ ಹಂಚಿಕೊಳ್ಳಬಹುದು ಎಂದು ಹೇಳಿತ್ತು. ಅದರಂತೆಯೇ ಈಗ ಗೂಗಲ್ ಹೊಸ ಆರೋಗ್ಯ ಕೇಂದ್ರಿತ ಅಪ್ಲಿಕೇಶನ್‌ನ ಬೀಟಾ ಆವೃತ್ತಿಯನ್ನು ಹೊರತಂದಿದೆ. ಇದು Fitbit, Flo, Samsung ಮತ್ತು ಇತರ ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನೂ ಹೊಂದಿದೆ.
ಏನಿದು ಗೂಗಲ್ ಹೆಲ್ತ್ ಕನೆಕ್ಟ್ ಆಪ್?
ಆಂಡ್ರಾಯ್ಡ್ ಬಳಕೆದಾರರಿಗಾಗಿ ಗೂಗಲ್ ಹೊರತಂದಿರುವ ಗೂಗಲ್ ಹೆಲ್ತ್ ಕನೆಕ್ಟ್ ಆಪ್ ಆರೋಗ್ಯ ಮತ್ತು ಫಿಟ್‌ನೆಸ್ ಡಾಟಾಗಳನ್ನು ನಿರ್ವಹಿಸುತ್ತದೆ. ಫಿಟ್‌ನೆಸ್ ಚಟುವಟಿಕೆ, ನಿದ್ರೆ, ಬಾಡಿ ಮೆಸರ್‌ಮೆಂಟ್, ಪೋಷಣೆ, ಜೀವನಾಂಶಗಳು ಮುಂತಾದ ಕ್ಯಾಟಗರಿಯನ್ನು ಹೊಂದಿದೆ. ಗೂಗಲ್ ಹೆಲ್ತ್ ಕನೆಕ್ಟ್ ನ ಪ್ರಮುಖ ವೈಶಿಷ್ಟ್ಯವೆಂದರೆ ಇದು ಫಿಟ್‌ನೆಸ್ ಮತ್ತು ಆರೋಗ್ಯದ ಆಪ್‌ಗಳ ನಡುವೆ ಸಂಪರ್ಕ ಸಾಧಿಸಲು ಅವಕಾಶಮಾಡಿಕೊಡುತ್ತದೆ. ಬಳಕೆದಾರರು ತಮ್ಮ ಆರೋಗ್ಯದ ಬಗ್ಗೆ ಸಮಗ್ರ ಮಾಹಿತಿ ಪಡೆಯಲು ಸಹಾಯ ಮಾಡುತ್ತದೆ. ಬಳಕೆದಾರರು ಪೆಲೋಟನ್ ವರ್ಕೌಟ್ ಅಪ್ಲಿಕೇಶನ್‌ಗಳಾದ MyFitnessPal, Lifesum, Oura, WeightWatchers ಮುಂತಾದವುಗಳೊಂದಿಗೆ ಜೋಡಿಸಿಕೊಳ್ಳಲು ಅವಕಾಶ ನೀಡುತ್ತದೆ. ಗೂಗಲ್ ಹೇಳುವ ಪ್ರಕಾರ ಈಗ ಹೊಸದಾಗಿ ಬಂದಿರುವ ಹೆಲ್ತ್ ಕನೆಕ್ಟ್ ಆಪ್ ಒಂದೇ ಏಕಿಕರಣದ ಮೂಲಕ, ಪೆಲೋಟನ್ ಸದಸ್ಯರು ತಮ್ಮ ಒಟ್ಟಾರೆ ಯೋಗಕ್ಷೇಮವನ್ನು ಬೆಂಬಲಿಸಲು ಬಳಸುವ ಆಪ್‌ಗಳ ಮೂಲಕ ತಮ್ಮ ವ್ಯಾಯಾಮದ ಅಂಕಿಅಂಶಗಳನ್ನು ಹಂಚಿಕೊಳ್ಳುವ ಆಯ್ಕೆಯನ್ನು ಹೊಂದಿರುತ್ತಾರೆ.
ಸದ್ಯ ಬೀಟಾ ಆವೃತ್ತಿಯಲ್ಲಿ ಲಭ್ಯವಿರುವ ಗೂಗಲ್ ಹೆಲ್ತ್ ಕನೆಕ್ಟ್ ಆಪ್, ಮುಂದಿನ ದಿನಗಳಲ್ಲಿ ವ್ಯಾಪಕವಾಗಿ ರೋಲ್‌ಔಟ್ ಅನ್ನು ಪ್ರಾರಂಭಿಸಬಹುದು. ಹೊಸದಾದ ಗೂಗಲ್ ಕನೆಕ್ಟ್ ಆಪ್‌ನಲ್ಲಿ ಆಸಕ್ತಿ ಹೊಂದಿದ್ದರೆ, ಬೀಟಾ ಆವೃತ್ತಿಗೆ ಸೈನ್‌ಅಪ್ ಆಗುವುದರ ಮೂಲಕ ಇದರ ವೈಶಿಷ್ಟ್ಯಗಳನ್ನು ನೋಡಬಹುದು. ಆದರೆ ನಿಮ್ಮ ಆರೋಗ್ಯದ ಡಾಟಾಗಳನ್ನು ಹಂಚಿಕೊಳ್ಳುವ ಮೊದಲು ಸಾಕಷ್ಟು ಎಚ್ಚರಿಕೆಯಿಂದಿರುವುದು ಅಗತ್ಯ. ಇದು ಸುರಕ್ಷತೆ ಮತ್ತು ಗೌಪ್ಯತೆಯನ್ನು ಒಳಗೊಂಡಿದೆ. ಬಳಕೆದಾರರು ತಮ್ಮ ಗೌಪ್ಯತೆಗೆ ಧಕ್ಕೆಯಾಗದಂತೆ ತಮ್ಮ ಆರೋಗ್ಯ ಸಂಬಂಧಿ ಡೇಟಾವನ್ನು ಹಂಚಿಕೊಳ್ಳಲು ಹೆಲ್ತ್ ಕನೆಕ್ಟ್ ಅಪ್ಲಿಕೇಶನ್ ಅನುಮತಿಸುತ್ತದೆ ಎಂದು Google ಹೇಳಿಕೊಂಡಿದೆ. ಆದರೆ ಇತ್ತೀಚೆಗೆ ಹೆಚ್ಚುತ್ತಿರುವ ದುರುಪಯೋಗ ಮತ್ತು ಹ್ಯಾಕ್‌ಗಳಿಂದಾಗಿ ಸೂಕ್ಷ್ಮ ಬಳಕೆದಾರರು ಎಚ್ಚರಿಕೆಯಿಂದಿರುವುದು ಅಗತ್ಯವಾಗಿದೆ.
ಇದನ್ನೂ ಓದಿ : Vespa : ಸೂಪರ್ ರೆಟ್ರೊ ಲುಕ್‌ನಲ್ಲಿ ಹೊಸದಾಗಿ ಅಪ್ಡೇಟ್ ಆದ ವೆಸ್ಪಾ GTV ಸ್ಕೂಟರ್
ಇದನ್ನೂ ಓದಿ : WhatsApp: ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯ : ಇದು ಡೆಸ್ಕ್‌ಟಾಪ್ ಬೀಟಾ ಬಳಕೆದಾರರಿಗೆ ಮಾತ್ರ
(Google Health Connect App Beta version. Do you know about this new application and how safe is it?)