A six-year-old boy died: ಕಾರು ಢಿಕ್ಕಿ : ಆರು ವರ್ಷದ ಬಾಲಕ ಸಾವು

ಕೋಲ್ಕತ್ತಾ: ( A six-year-old boy died)ಟಿಎಂಸಿ ಸಂಸದರೊಬ್ಬರ ಕಾರು ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬುಧವಾರ ನಡೆದಿದೆ. ಮೃತಪಟ್ಟ ಬಾಲಕನನ್ನು ಹಾಸಿಂ ಸರ್ಕಾರ್ ಎಂದು ಗುರುತಿಸಲಾಗಿದೆ.

ಟಿ.ಎಂ.ಸಿ ಸಂಸದರೊಬ್ಬರು ನವೋಡಾ ರಸ್ತೆಯಲ್ಲಿ ಪ್ರಯಾಣಿಸುತ್ತಿರುವ ವೇಳೆಯಲ್ಲಿ ಮಗು(A six-year-old boy died) ಇದ್ದಕ್ಕಿದ್ದಂತೆ ಕಾರಿನ ಮುಂದೆ ಬಂದಿದ್ದು, ಕಾರು ಮಗುವಿಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಮಗುವು ಗಂಭೀರವಾಗಿ ಗಾಯಗೊಂಡಿದ್ದು, ಬಾಲಕನನ್ನು ಸಂಸದ ಅಬು ತಾಹೆರ್ ಖಾನ್ ಅವರು ಬೆಹ್ರಾಂಪುರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಕರೆದೊಯ್ದರು. ಆದರೆ ಬಾಲಕ ದಾರಿ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ.

“ಮಗು ಇದ್ದಕ್ಕಿದ್ದಂತೆ ನನ್ನ ಕಾರಿನ ಮುಂದೆ ಬಂದಿತು. ನನ್ನ ಮುಂದೆ ಈ ದುರ್ಘಟನೆ ಸಂಭವಿಸಿದೆ. ನಾನು ಅತನನ್ನು ಆಸ್ಪತ್ರೆಗೆ ಸೇರಿಸಿದೆ. ಬಾಲಕನ ಮೆದುಳಿಗೆ ಗಂಭೀರ ಗಾಯವಾಗಿರಬಹುದು” ಎಂದು ಮುರ್ಷಿದಾಬಾದ್ ಲೋಕಸಭಾ ಕ್ಷೇತ್ರದ ಸಂಸದ ಖಾನ್ ಅಪಘಾತದ ಕುರಿತಾಗಿ ಮಾಹಿತಿ ನೀಡಿದ್ದಾರೆ. ಈ ಘಟನೆಯು ನವೋಡಾ ಪೊಲೀಸ್ ಠಾಣಾ ವ್ಯಾಪ್ತಿಯ ಪಿಪ್ರೇಖಾಲಿಯಲ್ಲಿ ನಡೆದಿದೆ.

ಇದನ್ನೂ ಓದಿ : Suicide Case Baby died: ಮಗುವನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ತಂದೆ

ಇದನ್ನೂ ಓದಿ : Black magic: ಇನ್ ಸ್ಟಾಗ್ರಾಂನಲ್ಲಿ ಪರಿಚಯವಾದ ಜ್ಯೋತಿಷಿ ಉದ್ಯಮಿ ಮನೆಗೆ ಬಂದು ಮಾಡಿದ್ದು ಎಂಥಾ ಕೆಲಸ ನೋಡಿ..

ಇದನ್ನೂ ಓದಿ : Pet Dog Attack : ಅಪಾರ್ಟ್‌ಮೆಂಟ್‌ ಲಿಫ್ಟ್‌ನಲ್ಲಿ ಶಾಲಾ ಬಾಲಕನ ಮೇಲೆ ದಾಳಿ ಮಾಡಿದ ಸಾಕು ನಾಯಿ

“ಮಗುವಿನ ತಾಯಿ ಸ್ವಸಹಾಯ ಸಂಘದ ಕಾರ್ಯಕರ್ತೆ, ಸ್ಥಳೀಯ ಬ್ಯಾಂಕ್‌ಗೆ ಹಣ ಠೇವಣಿ ಮಾಡಲು ಹೋಗಿದ್ದರು. ಮಗು ತನ್ನ ತಾಯಿಯೊಂದಿಗೆ ಹೋಗಿತ್ತು. ತಾಯಿ ಹಣ ಜಮೆ ಮಾಡುವಲ್ಲಿ ನಿರತರಾಗಿದ್ದಾಗ ಬಾಲಕ ಹೊರಗೆ ಬಂದನು. ಮಗು ರಸ್ತೆ ಮಧ್ಯಕ್ಕೆ ಬಂದಿತು. ಈ ವೇಳೆ ವೇಗವಾಗಿ ಬಂದ ಸಂಸದರ ಕಾರು ಡಿಕ್ಕಿ ಹೊಡೆದಿದೆ ” ಎಂದು ನವೋಡಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಘಟನೆಯ ಕುರಿತು ನವೋಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(A six-year-old boy died) A six-year-old boy died in a collision with a TMC MP’s car in Murshidabad district on Wednesday. The deceased boy has been identified as Hasim Sarkar.

Comments are closed.