ಸೋಮವಾರ, ಏಪ್ರಿಲ್ 28, 2025
HometechnologyGoogle Pixel 6a : ಗೂಗಲ್ ಪಿಕ್ಸೆಲ್ 6a, ಭಾರತದಲ್ಲಿ ಮಾರಾಟ ಪ್ರಾರಂಭ! ಭಾರಿ...

Google Pixel 6a : ಗೂಗಲ್ ಪಿಕ್ಸೆಲ್ 6a, ಭಾರತದಲ್ಲಿ ಮಾರಾಟ ಪ್ರಾರಂಭ! ಭಾರಿ ರಿಯಾಯಿತಿ ಮತ್ತು ಕೊಡುಗೆ ನೀಡಿದ ಗೂಗಲ್‌!!

- Advertisement -

ಟೆಕ್‌ ದಿಗ್ಗಜ ಗೂಗಲ್ (Google) ಸ್ಮಾರ್ಟ್‌ಫೋನ್‌ (Smartphone) ಗಳ ಲೋಕದಲ್ಲೂ ತನ್ನ ಅಧಿಪತ್ಯ ಸಾಧಿಸಿದೆ. ಗೂಗಲ್‌ ತನ್ನ ಹೊಸದಾದ ಪಿಕ್ಸೆಲ್‌ 6a ಎಂಬ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಬಹು ನಿರೀಕ್ಷಿತ ಗೂಗಲ್ ಪಿಕ್ಸೆಲ್‌ 6a (Google Pixel 6a) ಮುಂಗಡ-ಆರ್ಡರ್‌ಗೆ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿದೆ. 6GB RAM ಮತ್ತು 128GB ಇಂಟರ್ನಲ್‌ ಸ್ಟೋರೇಜ್‌ ನೀಡುವ ಏಕೈಕ ರೂಪಾಂತರಕ್ಕೆ 39,999 ರೂ. ಎಂದು ಹೇಳಲಾಗುತ್ತಿದೆ. Axis ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಸೀಮಿತ ಅವಧಿಯ ರಿಯಾಯಿತಿ ದರ ನೀಡಿದೆ. ಗೂಗಲ್ ಪಿಕ್ಸೆಲ್‌ 6a ಜುಲೈ 28 ರಿಂದ Flipkart.com ನಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಗೂಗಲ್ ಪಿಕ್ಸೆಲ್‌ 6a (Google Pixel 6a) ವೈಶಿಷ್ಟ್ಯಗಳು:

  • ಗೂಗಲ್ ಪಿಕ್ಸೆಲ್‌ 6a (Google Pixel 6a) ಸ್ಮಾರ್ಟ್‌ಫೋನ್ 6GB RAM ಮತ್ತು 128GB ಸ್ಟೋರೇಜ್‌ ಹೊಂದಿರುವ ಒಂದೇ ಸ್ಟೋರೇಜ್ ರೂಪಾಂತರದಲ್ಲಿ ಲಭ್ಯವಿರುತ್ತದೆ.
  • ಪಿಕ್ಸೆಲ್‌ 6a ಐದು ವರ್ಷಗಳ ಸೆಕ್ಯುರಿಟಿ ಅಪ್ಡೇಟ್‌ ಹೊಂದಿದೆ. ಮುಂದೆ ಬರಲಿರುವ Android 13 ಅಪ್ಡೇಟ್‌ ಅನ್ನು ಸ್ವೀಕರಿಸುವ ಮೊದಲ Android ಸಾಧನಗಳಲ್ಲಿ ಒಂದಾಗಿದೆ.
  • 39,990 ರೂ. ಗಳಲ್ಲಿ ದೊರಕುವ ಪಿಕ್ಸೆಲ್‌ 6a, OnePlus 10R, Realme GT Neo 3, Vivo V23 Pro ಮುಂತಾದ ದೇಶದಲ್ಲಿನ ಸಬ್‌–45k ಹ್ಯಾಂಡ್‌ಸೆಟ್‌ಗಳಿಗೆ ನೇರ ಪ್ರತಿಸ್ಪರ್ಧಿಯಾಗಬಹುದು.

Google Pixel 6a ನ ಪ್ರಮುಖ ಫೀಚರ್ಸ್‌ಗಳು ಹೀಗಿವೆ :

ಡಿಸ್‌ಪ್ಲೇ : 6.1ಇಂಚಿನ, 1080 x 2400 ಪಿಕ್ಸೆಲ್‌ಗಳು OLED ಡಿಸ್ಪೇ ಹೊಂದಿದೆ. 20:9 ರಚನೆಯ ಅನುಪಾತ ಹೊಂದಿದೆ. ಡಿಸ್ಲೇಯು ಗೊರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್‌ ಪಡೆದಿದೆ.

ಕ್ಯಾಮೆರಾ: ಇದರಲ್ಲಿ ಮುಖ್ಯ ಕ್ಯಾಮರಾವು 12.2 ಮೆಗಾಪಿಕ್ಸೆಲ್‌ ಅನ್ನು ಹೊಂದಿದೆ. ಅದೇ ರೀತಿ ಎರಡನೇ ಕ್ಯಾಮರಾವೂ ಸಹ 12 ಮೆಗಾಪಿಕ್ಸೆಲ್‌ ಅಲ್ಟ್ರಾ ವೈಡ್‌ ಒಳಗೊಂಡಿದೆ. ಮತ್ತೂ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ.

ಹಾರ್ಡ್‌ವೇರ್: Google ಟೆನ್ಸರ್ (5 nm), 6GB RAM + 128GB UFS 3.1 ಸ್ಟೋರೇಜ್‌ ಪಡೆದುಕೊಂಡಿದೆ. ಆದರೆ ಮೈಕ್ರೋ SD ಕಾರ್ಡ್ ಹೊಂದಿಲ್ಲ

ಸಾಫ್ಟ್‌ವೇರ್: Android 12 ಸಾಫ್ಟ್‌ವೇರ್‌ ನಿಂದ ಚಾಲಿತವಾಗುತ್ತದೆ.

ಬ್ಯಾಟರಿ ಮತ್ತು ಚಾರ್ಜಿಂಗ್ : ನಾನ್‌–ರಿಮುವೇಬಲ್‌ Li-Po 4410 mAh ಬ್ಯಾಟರಿ ಹೊಂದಿದೆ. 18W ವೈರ್‍ಡ ಫಾಸ್ಟ್-ಚಾರ್ಜಿಂಗ್ ಕ್ಷಮತೆ ಹೊಂದಿದೆ.

ಕನೆಕ್ಟಿವಿಟಿ : ಕೆನೆಕ್ಟಿವಿಟಿಗಾಗಿ ಬ್ಲೂಟೂತ್ 5.2, NFC, ಡ್ಯುಯಲ್-ಬ್ಯಾಂಡ್ ವೈ-ಫೈ ಅಳವಡಿಸಲಾಗಿದೆ.

ಬಣ್ಣ : ಭಾರತದಲ್ಲಿ, ಗೂಗಲ್ ಪಿಕ್ಸೆಲ್ 6a ಚಾರ್ಕೋಲ್ ಮತ್ತು ಚಾಕ್.ಎರಡು ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಗೂಗಲ್ ಪಿಕ್ಸೆಲ್ 6a ನ ರಿಯಾಯಿತಿ ಮತ್ತು ಕೊಡುಗೆಗಳು :
ಕೊಡುಗೆಯು ಸೀಮಿತ ಅವಧಿಯಾಗಿದ್ದು ಯಾವುದೇ Google Pixel ಸಾಧನ ಮತ್ತು ಇತರ ಆಯ್ದ ಸ್ಮಾರ್ಟ್‌ಫೋನ್ ಮಾದರಿಗಳ ವಿನಿಮಯಕ್ಕೆ 6,000 ರೂ.ಗಳ ವರೆಗೆ ರಿಯಾಯಿತಿ ಘೋಷಿಸಿದೆ. ಇದಲ್ಲದೆ ಯಾವುದೇ ಇತರ ಸ್ಮಾರ್ಟ್‌ಫೋನ್‌ಗಳ ವಿನಿಮಯಕ್ಕೆ 2,000 ರಿಯಾಯಿತಿ ನೀಡಿದೆ.

ಗೂಗಲ್ ಪಿಕ್ಸೆಲ್ 6a ಉತ್ತಮ ಗುಣಮಟ್ಟದ ಕ್ಯಾಮರಾ ಕಾರ್ಯಕ್ಷಮತೆಯೊಂದಿಗೆ ಪ್ರಮುಖ ಸ್ಮಾರ್ಟ್‌ಫೋನ್‌ ಹುಡುಕುತ್ತಿರುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ. Google Pixel ಸಾಧನಗಳ ಟ್ರ್ಯಾಕ್ ರೆಕಾರ್ಡ್ ಅನ್ನು ಆಧರಿಸಿ, OnePlus 10R, Realme GT Neo 3 ಗಿಂತ Pixel 6a ಉತ್ತಮ ಛಾಯಾಗ್ರಹಣ ಅನುಭವ ನೀಡಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ : SBI WhatsApp Banking:ಎಸ್‌ಬಿಐ ವಾಟ್ಸಾಪ್ ಬ್ಯಾಂಕಿಂಗ್ ಸೇವೆ ಪ್ರಾರಂಭ;ಖಾತೆಯ ಬ್ಯಾಲೆನ್ಸ್, ಇತರ ವಿವರಗಳನ್ನು ಪರಿಶೀಲಿಸುವುದು ಹೇಗೆ ಎಂದು ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ : Citroen C3 : 5.70 ಲಕ್ಷಕ್ಕೆ ಸಬ್‌–ಕಾಂಪ್ಯಾಕ್ಟ್‌ SUV ಬಿಡುಗಡೆ ಮಾಡಿದ ಸಿಟ್ರೊಯ್ನ್‌! ಸಿಟ್ರೊಯ್ನ್‌ C3 ಯ ಹಲವಾರು ವೈಶಿಷ್ಟ್ಯಗಳು ಹೀಗಿವೆ…

(Google pixel 6a pre-orders started in India check the offers and specifications)

RELATED ARTICLES

Most Popular