ಗೂಗಲ್ (Google) ನ ಪಿಕ್ಸೆಲ್ 3 ಸರಣಿಯ ನಂತರ ಭಾರತಕ್ಕೆ ಬಂದ ಪ್ರಮುಖ ಫೋನ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೋ (Google Pixel 7 And Pixel 7 Pro) ಆಗಿದೆ. ಗೂಗಲ್ ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೋ ಅನ್ನು ಅಧಿಕೃತವಾಗಿ ಭಾರತ (India) ದಲ್ಲಿ ಬಿಡುಗಡೆ ಮಾಡಿದೆ. ಇದು ಹೊಸ ಟೆನ್ಸರ್ ಜಿ2 ಚಿಪ್‌ಸೆಟ್ ಮತ್ತು ಮುಂಭಾಗದ ಕ್ಯಾಮೆರಾದಲ್ಲಿ ಕೆಲವು ಸುಧಾರಣೆಗಳನ್ನು ಮಾಡಿಕೊಂಡು ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಆದರೆ ಇದರ ವಿನ್ಯಾಸವು ಕಳೆದ ವರ್ಷ ಬಿಡುಗಡೆಯಾದ ಪಿಕ್ಸೆಲ್ 6 ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನೇ ಸ್ವಲ್ಪಮಟ್ಟಿಗೆ ಹೋಲುತ್ತದೆ.
ಗೂಗಲ್ ಪಿಕ್ಸೆಲ್ 7 ವಿಶೇಷತೆಗಳು :
ಗೂಗಲ್ ಪಿಕ್ಸೆಲ್ 7 6.3 ಇಂಚಿನ OLED ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ದರದೊಂದಿಗೆ FHD+ ರೆಸಲ್ಯೂಶನ್ ಪಡೆದುಕೊಂಡಿದೆ. ಇದು 8GB RAM ನೊಂದಿಗೆ ಜೋಡಿಸಲಾದ ಹೊಸದಾದ ಗೂಗಲ್ ಟೆನ್ಸರ್ G2 ಚಿಪ್‌ಸೆಟ್‌ನಿಂದ ಚಲಿಸುತ್ತದೆ. ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಅದರಲ್ಲಿನ ಪ್ರಾಥಮಿಕ ಲೆನ್ಸ್ 50 ಮೆಗಾಪಿಕ್ಸೆಲ್ ಶೂಟರ್ ಹೊಂದಿದ್ದು ಇನ್ನೊಂದು ಲೆನ್ಸ್ 12 ಮೆಗಾಪಿಕ್ಸೆಲ್ ಅಲ್ಟ್ರಾ–ವೈಡ್ ಆಂಗೆಲ್ ಲೆನ್ಸ್ ಹೊಂದಿದೆ ಎನ್ನಲಾಗುತ್ತಿದೆ. ಈ ಸ್ಮಾರ್ಟ್‌ಫೋನ್ ಸೆಲ್ಫಿಗಾಗಿ 11 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ನೊಂದಿಗೆ ಮುಂಭಾಗದಲ್ಲಿ ಜೋಡಿಸಲ್ಪಟ್ಟಿದೆ.
ಇದನ್ನೂ ಓದಿ : Moto E32 : ಎಂಟ್ರಿ–ಲೆವೆಲ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದ ಮೊಟೊರೊಲಾ; ಬೆಲೆ ಮತ್ತು ವಿಶೇಷತೆಗಳು ಹೀಗಿದೆ….
ಗೂಗಲ್ ಪಿಕ್ಸೆಲ್ 7 ಪ್ರೋ ವಿಶೇಷತೆಗಳು :
ಗೂಗಲ್ ಪಿಕ್ಸೆಲ್ 7 ಪ್ರೋ ಇದು ಪಿಕ್ಸೆಲ್ 7 ಗಿಂತ ಸ್ವಲ್ಪ ದೊಡ್ಡದಾದ 6.7 ಇಂಚಿನ LTPO ಡಿಸ್ಪ್ಲೇ ಪಡೆದುಕೊಂಡಿದೆ. ಇದು QHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್ ಸ್ಕ್ರೀನ್ ಅನ್ನು ನೀಡುತ್ತದೆ. ರಿಫ್ರೆಶ್ ದರವು ನಿಮ್ಮ ಫೋನ್ ಬಳಕೆಯನ್ನು ಆಧರಿಸಿ 10 Hz ನಿಂದ 120Hz ನಡುವೆ ಬದಲಾಗುತ್ತದೆ. ಪಿಕ್ಸೆಲ್ 7 ಪ್ರೋ ಸಹ ಚಾಲನೆಗಾಗಿ ಗೂಗಲ್ ಟೆನ್ಸರ್ G2 ಚಿಪ್‌ಸೆಟ್ ಅನ್ನು ಪಡದುಕೊಂಡಿದೆ. ಆದರೆ ಇದನ್ನು 12GB RAM ನೊಂದಿಗೆ ಅಳವಡಿಸಲಾಗಿದೆ. ಇದು ಹಿಂಭಾಗದಲ್ಲಿ ಹೆಚ್ಚುವರಿ ಕ್ಯಾಮೆರಾವನ್ನು ಹೊಂದಿದೆ.
ಬೆಲೆ ಮತ್ತು ಲಭ್ಯತೆ :
ಪಿಕ್ಸೆಲ್ 7 ಮತ್ತು ಪಿಕ್ಸೆಲ್ 7 ಪ್ರೋ ಈ ಎರಡೂ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಅಕ್ಟೋಬರ್ 13 ರಿಂದ ಫ್ಲಿಪ್‌ಕಾರ್ಟ್ ನಲ್ಲಿ ಖರೀದಿಸಬಹುದಾಗಿದೆ. ಭಾರತದಲ್ಲಿ 8GB + 128GB ಪಿಕ್ಸೆಲ್ 7 ಸ್ಮಾರ್ಟ್‌ಫೋನ್ ಅನ್ನು 59,999 ರೂಪಾಯಿಗಳಿಗೆ ಖರೀದಿಸಬಹುದಾಗಿದೆ. ಆದರೆ ಪಿಕ್ಸೆಲ್ 7 ಪ್ರೋ 12GB + 128GB ರೂಪಾಂತರವನ್ನು 84,999 ರೂಪಾಯಿಗೆ ಲಭ್ಯವಿರುತ್ತದೆ.
ಇದನ್ನೂ ಓದಿ : Nokia G11 Plus : ಭಾರತದಲ್ಲಿ ಲಾಂಚ್ ಆದ ನೋಕಿಯಾ G11 ಪ್ಲಸ್ : 50 MP ಕ್ಯಾಮೆರಾ ಇದರ ವಿಶೇಷತೆ
(Google Pixel 7 And Pixel 7 Pro launched in India. Know the specifications and price)