World Egg Day 2022 : ಇಂದು ಏನು ವಿಶೇಷ ಗೊತ್ತಾ; ‘ವಿಶ್ವ ಮೊಟ್ಟೆ ದಿನ’

ಇಂದು ವಿಶ್ವ ಮೊಟ್ಟೆ ದಿನ (World Egg Day 2022). ಪ್ರತಿವರ್ಷ ಅಕ್ಟೋಬರ್‌ ತಿಂಗಳಿನ ಎರಡನೇ ಶುಕ್ರವಾರದಂದು ಇದನ್ನು ಆಚರಿಸಲಾಗುತ್ತದೆ. ಈ ವರ್ಷ ವಿಶ್ವ ಮೊಟ್ಟೆ ದಿನವನ್ನು ಅಕ್ಟೋಬರ್‌ 14 ರಂದು ಆಚರಿಸಲಾಗುತ್ತಿದೆ. ಇದನ್ನು ಮೊದಲ ಬಾರಿಗೆ ಅಕ್ಟೋಬರ್‌ 1996 ರಲ್ಲಿ ವಿಯೆನ್ನಾದಲ್ಲಿ ಮೊಟ್ಟೆಗಳಲ್ಲಿರುವ ಉತ್ತಮ ಪೌಷ್ಟಿಕಾಂಶದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಯಿತು. ಮೊಟ್ಟೆ ಜಗತ್ತಿನ ಅತ್ಯಂತ ಜನಪ್ರಿಯ ಅಷ್ಟೇ ಪೌಷ್ಟಿಕ ಆಹಾರ. ಇದನ್ನು ಪ್ರಪಂಚದಾದ್ಯಂತ ಜನರು ಸೇವಿಸುತ್ತಾರೆ. ಇದು ಉತ್ತಮ ಪೋಷಕಾಂಶಗಳ ಮೂಲ. ಅಪೌಷ್ಟಿಕತೆ ಒಂದು ಜಾಗತಿಕ ಸಮಸ್ಯೆ. ಅದನ್ನು ಕೇಂದ್ರವಾಗಿರಿಸಿಕೊಂಡೇ ಈ ದಿನವನ್ನು ಆಚರಿಸಲಾಗುತ್ತದೆ. ಮೊಟ್ಟೆಗಳ ಸೇವನೆಯಿಂದ ಅಪೌಷ್ಟಿಕತೆ ದೂರವಾಗುತ್ತದೆ ಎಂಬುದು ಸಂಶೋಧನೆಗಳಿಂದ ಸಾಬೀತಾಗಿದೆ.

ವಿಶ್ವ ಮೊಟ್ಟೆ ದಿನದ ಇತಿಹಾಸ :
ಇಂಟರ್ನ್ಯಾಷನಲ್ ಎಗ್ ಕಮಿಷನ್ (IEC) ಪ್ರಪಂಚದಾದ್ಯಂತ ಮೊಟ್ಟೆಯ ಪ್ರಯೋಜನಗಳು ಮತ್ತು ಮಹತ್ವವನ್ನು ಜನರಿಗೆ ತಿಳಿಯಪಡಿಸುವ ಸಲುವಾಗಿ ಈ ದಿನವನ್ನು ಮೀಸಲಿಡಲು ನಿರ್ಧರಿಸಿತು. 1996 ರಲ್ಲಿ ವಿಶ್ವ ಮೊಟ್ಟೆ ದಿನದ ಆಚರಣೆ ಪ್ರಾರಂಭವಾಯಿತು. ಆಸ್ಟ್ರಿಯಾದ ವಿಯೆನ್ನಾದಲ್ಲಿ ನಡೆದ ಸಭೆಯಲ್ಲಿ ಅಕ್ಟೋಬರ್‌ನ ಎರಡನೇ ಶುಕ್ರವಾರವನ್ನು ವಿಶ್ವ ಮೊಟ್ಟೆ ದಿನವನ್ನಾಗಿ ಆಚರಿಸುವ ಸಲುವಾಗಿ ಆಯ್ಕೆ ಮಾಡಲಾಯಿತು. ಅಂದಿನಿಂದ ಈ ದಿನವನ್ನು ವಿಶ್ವದಾದ್ಯಂತ ಸ್ಮರಿಸಲಾಗುತ್ತದೆ.

ವಿಶ್ವ ಮೊಟ್ಟೆ ದಿನದ ಥೀಮ್‌ :
ಅಂತರಾಷ್ಟ್ರೀಯ ಮೊಟ್ಟೆ ಆಯೋಗವು ಪ್ರತಿ ವರ್ಷ ವಿಶ್ವ ಮೊಟ್ಟೆ ದಿನದ ಥೀಮ್ ಅನ್ನು ಆಯ್ಕೆ ಮಾಡುತ್ತದೆ. ಅದೇ ರೀತಿ ಈ ವರ್ಷದ ಥೀಮ್‌ ‘ ಉತ್ತಮ ಜೀವನಕ್ಕಾಗಿ ಮೊಟ್ಟೆ’. ಹಲವಾರು ಸಂಘ ಸಂಸ್ಥೆಗಳು ಅನೇಕ ಕಾರ್ಯಕ್ರಮಗಳನ್ನು ನಡೆಸಿ ಈ ಸಂದೇಶವನ್ನು ಮತ್ತು ಮಹತ್ವನ್ನು ತಿಳಿಯಪಡಿಸುತ್ತಾರೆ.

ಇದನ್ನೂ ಓದಿ : Nutritious Food : ಸೊಂಟ ನೋವು ಹಾಗೂ ಮೂಳೆಗಳಿಗೆ ಉತ್ತಮ ಈ ಉಂಡೆ

ವಿಶ್ವ ಮೊಟ್ಟೆ ದಿನದ ಮಹತ್ವ :
ಮೊಟ್ಟೆಗಳಲ್ಲಿ ಪ್ರೋಟೀನ್‌ ಅಧಿಕವಾಗಿರುತ್ತದೆ. ಇದು ಮೆದುಳು ಮತ್ತು ಸ್ನಾಯುವಿನ ಬೆಳವಣಿಗೆಗೆ ಉತ್ತಮವಾಗಿದೆ. ಅಪೌಷ್ಟಿಕತೆಯನ್ನು ದೂರಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ವಿವಿಧ ಪೋಷಕಾಂಶಗಳನ್ನು ಹೊಂದಿರುವ ಮೊಟ್ಟೆಯನ್ನು ದಿನನಿತ್ಯದ ಆಹಾರದ ಭಾಗವಾಗಿಸಬಹುದಾಗಿದೆ. ವಿಶ್ವ ಮೊಟ್ಟೆ ದಿನವು, ಮೊಟ್ಟೆಗಳು ಮತ್ತು ಅವುಗಳಿಂದಾಗುವ ಆರೋಗ್ಯ ಪ್ರಯೋಜನಗಳ ಬಗ್ಗೆ ಜಾಗೃತಿಯನ್ನು ಹೆಚ್ಚಿಸಲು ಉತ್ತಮ ಅವಕಾಶವಾಗಿದೆ.

ಮೊಟ್ಟೆಯಿಂದ ಮಾಡಬಹುದಾದ ಅಡುಗೆಗಳು :
ಮೊಟ್ಟೆಯಿಂದ ಅನೇಕ ಅಡುಗೆಗಳನ್ನು ಮಾಡಬಹುದಾಗಿದೆ. ಕೆಲವರಿಗೆ ಮೊಟ್ಟೆ ಅತ್ಯಂತ ಪ್ರೀತಿಯ ಆಹಾರವೂ ಹೌದು. ಮೊಟ್ಟೆಯಿಂದ ಆಮ್ಲೆಟ್‌, ಎಗ್‌ ಕರಿ, ಎಗ್‌ ಬುರ್ಜಿ ಮುಂತಾದವುಗಳನ್ನು ತಯಾರಿಸುತ್ತಾರೆ. ಕೆಲವರು ಅದನ್ನು ಹಾಗೆ ಬೇಯಿಸಿಯೂ ತಿನ್ನುತ್ತಾರೆ. ಮೊಟ್ಟೆಯಿಂದ ಮಾಡಬಹುದಾದ ಕೆಲವು ಅಡುಗೆಗಳು ಮತ್ತು ಪ್ರಯೋಜನಗಳು :

ಇದನ್ನೂ ಓದಿ : Malabar Spinach:ಬಸಳೆ ಸೊಪ್ಪಿನಿಂದ ರಕ್ತಹೀನತೆ ಸಮಸ್ಯೆ ನಿವಾರಣೆ

(World Egg Day 2022 why do we celebrate world egg day every year)

Comments are closed.