ಸೋಮವಾರ, ಏಪ್ರಿಲ್ 28, 2025
HometechnologyBuy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ...

Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ

- Advertisement -

ಗೂಗಲ್ ಪೇ (Google Pay) ಅನ್ನುವುದು ದೈನಂದಿನ ಜೀವನದ ಒಂದು ಬಹು ದೊಡ್ಡ ಅಂಗವಾಗಿ ಹೋಗಿದೆ. ಎಲೆಕ್ಟ್ರಿಸಿಟಿ ಬಿಲ್, ನೀರಿನ ಬಿಲ್, ರೀಚಾರ್ಜ್ ಹೀಗೆ ಯಾವುದೇ ರೀತಿಯ ಪೇಮೆಂಟ್ ಆದ್ರೂ ಗೂಗಲ್ ಪೇ ಮೂಲಕ ಪೇಮೆಂಟ್ (Payment) ಸಾಧ್ಯ. ನೀವೂ ಗೂಗಲ್ ಪೇ ಬಳಸುತ್ತಿದ್ದರೆ, ಈ ಒಂದು ಸೌಲಭ್ಯದ ಬಗ್ಗೆ ತಿಳಿಯಲೇಬೇಕು.ಅದೇನೆಂದರೆ ಇನ್ಮುಂದೆ ಗೂಗಲ್ ಮೂಲಕ ಚಿನ್ನವನ್ನು ಖರೀದಿ ಹಾಗೂ ಮಾರಾಟವನ್ನು (Buy and sell Gold in Google Pay) ಎಂಎಂಟಿಸಿ-ಪಿಎಎಂಪಿ (MMTC-PAMP) ಪ್ರೈವೇಟ್ ಲಿಮಿಟೆಡ್ ಮೂಲಕ ಗೂಗಲ್ ಪೇ ಮುಖಾಂತರ ಮಾಡಬಹುದು.

ಗೂಗಲ್ ಪೇ ವರದಿಯ ಪ್ರಕಾರ, ಇದರಲ್ಲಿ ಖರೀದಿಸುವ ಚಿನ್ನವು 99.9% ಪರಿಶುದ್ಧ 24 ಕಾರಟ್ ಚಿನ್ನ ಆಗಿರುತ್ತದೆ. ಇಲ್ಲಿ ನೀವು ಖರೀದಿಸಿದ ಚಿನ್ನ “ಗೋಲ್ಡ್ ಅಕ್ಯುಮ್ಯುಲೇಶನ್ ಪ್ಲಾನ್” (ಜಿಎಪಿ) ನಲ್ಲಿ ಸಂಗ್ರಹವಾಗಿರುತ್ತದೆ. ಖರೀದಿಸಿದ ಅಥವಾ ಮಾರಿದ ಚಿನ್ನವು ಗೂಗಲ್ ಪೇಯ ಗೋಲ್ಡ್ ಲಾಕರ್ ಸೆಕ್ಷನ್‌ನಲ್ಲಿ ಕಾಣಿಸುತ್ತದೆ. ಈ ಲಾಕರ್ ನಿಮ್ಮ ಫೋನ್ ನಂಬರ್ ಹಾಗೂ ಸಿಮ್ ಜೊತೆ ಲಿಂಕ್ ಆಗಿರುತ್ತದೆ. ಒಂದು ವೇಳೆ, ನಿಮ್ಮ ಸಿಮ್ ಕಳೆದು ಹೋದಲ್ಲಿ ಅಕೌಂಟ್ ಪುನಃ ರೀಸ್ಟೋರ್ ಮಾಡಬೇಕಾಗುತ್ತದೆ.

ಹಾಗಿದ್ರೆ ಗೂಗಲ್ ಪೇ ಮೂಲಕ ಗೋಲ್ಡ್ ಖರೀದಿ ಅಥವಾ ಮಾರಾಟ ಮಾಡುವುದು ಹೇಗೆಂದು ತಿಳಿಯಲು ಇಡೀ ಸ್ಟೋರಿ ಓದಿ

  1. ಮೊದಲಿಗೆ ಗೂಗಲ್ ಪೇ ಓಪನ್ ಮಾಡಿ.
  2. ನ್ಯೂ ಆಪ್ಶನ್ ಕ್ಲಿಕ್ ಮಾಡಿ.
  3. ಸರ್ಚ್ ಬಾರ್‌ನಲ್ಲಿ “ಗೋಲ್ಡ್ ಲಾಕರ್” ಹುಡುಕಿ ಓಕೆ ಕೊಡಿ.
  4. ಇನ್ನು ಬಯ್ ಆಪ್ಶನ್ ಕ್ಲಿಕ್ ಮಾಡಿ. ಆಗ ಕರೆಂಟ್ ಗೋಲ್ಡ್ ಪ್ರೈಸ್ ಕಾಣುತ್ತದೆ. ನೀವು ಖರೀದಿ ಮಾಡುವ ದರ ಸುಮಾರು 5 ನಿಮಿಷಗಳ ಕಾಲ ಲಾಕ್ ಆಗಿರುತ್ತದೆ.
  5. ಇನ್ನು ನೀವು ಖರೀದಿಸ ಬಯಸುವ ಚಿನ್ನದ ಅಮೌಂಟ್ ಟೈಪ್ ಮಾಡಿ. ದಿನಕ್ಕೆ50000 ವರೆಗಿನ ಚಿನ್ನ ಖರೀದಿಗೆ ಇಲ್ಲಿ ಅವಕಾಶ ಇದೆ. ಅದೇ ರೀತಿ ಕಡಿಮೆ ಅಂದರೆ 1 ರೂಪಾಯಿಯ ಚಿನ್ನವನ್ನೂ ನೀವು ಖರೀದಿ ಮಾಡಬಹುದು.
  6. ಇನ್ನು ಚೆಕ್ ಮಾರ್ಕ್ ಟಿಕ್ ಮಾಡಿ.
  7. ಇನ್ನು ಬೇಕಾದ ಪೇಮೆಂಟ್ ಆಪ್ಷನ್ ಸೆಲೆಕ್ಟ್ ಮಾಡಿ. ಪೇಮೆಂಟ್ ಆದ ನಂತರ ಚಿನ್ನ ನಿಮ್ಮ ಲಾಕರ್ ನಲ್ಲಿ ಸೇವ್ ಆಗಿರುತ್ತದೆ.
  8. ಇನ್ನು ಅಗತ್ಯವಿದ್ದರೆ ಕಾನ್ಸಲ್ ಕೂಡ ಮಾಡಬಹುದು.

    ಚಿನ್ನ ಮಾರುವುದು ಹೇಗೆ?
    1. ಗೂಗಲ್ ಪೇ ಓಪನ್ ಮಾಡಿ.
    2. ನ್ಯೂ ಆಪ್ಶನ್ ಕ್ಲಿಕ್ ಮಾಡಿ.
    3. ಸರ್ಚ್ ಬಾರ್‌ನಲ್ಲಿ “ಗೋಲ್ಡ್ ಲಾಕರ್” ಹುಡುಕಿ ಓಕೆ ಕೊಡಿ.
    4. ಸೆಲ್ ಆಪ್ಶನ್ ಕ್ಲಿಕ್ ಮಾಡಿ.
    5. ಮಾರಾಟ ಮಾಡಲು ಬಯಸುವ ಅಮೌಂಟ್ ಕ್ಲಿಕ್ ಮಾಡಿ. ಚೆಕ್ ಮಾರ್ಕ್ ಕ್ಲಿಕ್ ಮಾಡಿ


    ಇದನ್ನೂ ಓದಿ: Real Estate Explainer: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

    ಇದನ್ನೂ ಓದಿ: e-KYC ಎಂದರೇನು? ಸರಳವಾಗಿ ಇದನ್ನು ಪಡೆಯುವುದು ಹೇಗೆ?

    ಇದನ್ನೂ ಓದಿ: 2022 Horoscope: ನಿಮ್ಮ 2022ರ ಭವಿಷ್ಯ ತಿಳಿದುಕೊಳ್ಳಿ, ಹೊಸವರ್ಷಕ್ಕೆ ಹೊಸ ಹುಮ್ಮಸ್ಸಿನಿಂದ ಪದಾರ್ಪಣೆ ಮಾಡಿ

    (How to Buy and sell Gold in Google pay tips and steps in Kannada)
RELATED ARTICLES

Most Popular