Infinix Hot 30i : ಸಿಂಗಲ್‌ ಚಾರ್ಜ್‌ನಲ್ಲಿ ದಿನಪೂರ್ತಿ ಓಡುವ ಇನ್‌ಫಿನಿಕ್ಸ್‌ ಹಾಟ್‌ 30i ಬಿಡುಗಡೆ. ಬೆಲೆ ಕೇಳಿದರೆ ಇಷ್ಟೇನಾ ಅಂತೀರಾ…

ಇನ್ಫಿನಿಕ್ಸ್‌ (Infinix) ಪ್ರವೇಶ ಮಟ್ಟದ (Entry-Level) ಸ್ಮಾರ್ಟ್‌ಫೋನ್‌ (Smartphone) ಅನ್ನು ಬಿಡುಗಡೆ ಮಾಡಿದೆ. ಇನ್‌ಫಿನಿಕ್ಸ್‌ ಹಾಟ್‌ 30i (Infinix Hot 30i) ಅನ್ನು ಕಡಿಮೆ ಬೆಲೆಗೆ ಪರಿಚಯಿಸಿದೆ. ಇದು ಕಡಿಮೆ ಬೆಲೆಯ ಫೋನ್‌ ಆದರೂ ಸಹ ಇದರಲ್ಲಿ ಮೀಡಿಯಾ ಟೆಕ್ ಹೆಲಿಯೊ ಜಿ 37 ಪ್ರೊಸೆಸರ್‌ನೊಂದಿಗೆ 16 ಜಿಬಿ RAM ಮತ್ತು 128 ಜಿಬಿ ಸಂಗ್ರಹವನ್ನು ನೀಡಲಾಗಿದೆ. ಆದರೆ ಇದರ ರಿಫ್ರೆಶ್‌ ದರವು 90Hz ಆಗಿದೆ. ಈ ಫೋನ್‌ ನೋಡಲು ಆಕರ್ಷಕವಾಗಿದ್ದು, ಬ್ಲಾಕ್‌, ಬ್ಲ್ಯೂ, ಮತ್ತು ಆರೆಂಜ್‌ ಬಣ್ಣಗಳ ಆಯ್ಕೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಮಾರಾಟವು ಏಪ್ರಿಲ್ 3 ರಿಂದ ಇ–ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ.

ಇನ್‌ಫಿನಿಕ್ಸ್‌ ಹಾಟ್‌ 30i ಫೋನ್‌ನ ವೈಶಿಷ್ಟ್ಯಗಳು :
6.6-ಇಂಚಿನ HD + IPS LCD ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ನ ರಿಫ್ರೆಶ್ ದರ ಮತ್ತು 500 nits ನ ಗರಿಷ್ಠ ಹೊಳಪನ್ನು ಹೊಂದಿದೆ. ಈ ಫೋನ್ ಮೀಡಿಯಾ ಟೆಕ್ ಹೆಲಿಯೊ ಜಿ 37 ಪ್ರೊಸೆಸರ್ ನಿಂದ ಚಲಿಸುತ್ತದೆ. ಇನ್‌ಫಿನಿಕ್ಸ್‌ ಹಾಟ್‌ 30i ಸ್ಮಾರ್ಟ್‌ಫೋನ್‌ನ RAM ಅನ್ನು 16GB ವರೆಗೆ ಹೆಚ್ಚಿಸಬಹುದಾಗಿದೆ ಮತ್ತು ಮೈಕ್ರೋ SD ಕಾರ್ಡ್ ಮೂಲಕ 1TB ವರೆಗೆ ಸಂಗ್ರಹಣೆಯನ್ನು ಹೆಚ್ಚಿಸಬಹುದಾಗಿದೆ. ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP ಯ ಪ್ರಾಥಮಿಕ + AI ಲೆನ್ಸ್ ಅನ್ನು ಹೊಂದಿದೆ. ಫೋನ್‌ನಲ್ಲಿ ಸೆಲ್ಫಿಗಾಗಿ 5MP ಕ್ಯಾಮೆರಾವನ್ನು ಅಳವಡಿಸಿಲಾಗಿದೆ. ಸ್ಮಾರ್ಟ್ಫೋನ್ 5000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲಿಸುತ್ತದೆ. ಒಂದೇ ಚಾರ್ಜ್‌ನಲ್ಲಿ ಫೋನ್ ಒಂದು ದಿನ ಬಾಳಿಕೆ ಬರಲಿದೆ ಎಂದು ಕಂಪನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ :
ಇನ್‌ಫಿನಿಕ್ಸ್‌ ಎಂಟ್ರಿ ಲೆವಲ್‌ ಸ್ಮಾರ್ಟ್‌ಫೋನ್‌ ಅನ್ನು 8,999 ರೂ. ಗಳಿಗೆ ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಈ ಫೋನ್‌ನ ಖರೀದಿಯು ಏಪ್ರಿಲ್ 3 ರಿಂದ ಇ–ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ನಲ್ಲಿ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗಲಿದೆ.

ಇದನ್ನೂ ಓದಿ: BMW Motorrad: ಎರಡು ಮಹೀಂದ್ರ ಥಾರ್‌ ಖರೀದಿಸಬಹುದಾದ ಬೆಲೆಗೆ ಬೈಕ್‌ ಬಿಡುಗಡೆ; BMW ಮೊಟಾರ್ಡ್‌ ಆರ್‌ 18 ಟ್ರಾನ್ಸ್‌ಕಾಂಟಿನೆಂಟಲ್‌ ಕ್ರೂಸರ್‌ ಬೈಕ್‌ನ ವೈಶಿಷ್ಟ್ಯಗಳೇನು…

ಇದನ್ನೂ ಓದಿ: Instagram Blue Tick: ಇನ್‌ಸ್ಟಾಗ್ರಾಮ್‌ನಲ್ಲೂ ಬ್ಲೂ ಟಿಕ್‌ ಸೇವೆ ಪ್ರಾರಂಭ; ಅದಕ್ಕೆ ಎಷ್ಟು ಪಾವತಿಸಬೇಕು ಗೊತ್ತಾ…

(Infinix Hot 30i introduced an entry-level smartphone in the Indian market. Know the price and specifications)

Comments are closed.