ಸೋಮವಾರ, ಏಪ್ರಿಲ್ 28, 2025
HometechnologyInternet Speed Test : ಇಂಟರ್ನೆಟ್‌ ಸ್ಪೀಡ್‌ ಟೆಸ್ಟ್‌ ಮಾಡಬೇಕೆ? ಹಾಗಾದರೆ ಈ 5 ಸರಳ...

Internet Speed Test : ಇಂಟರ್ನೆಟ್‌ ಸ್ಪೀಡ್‌ ಟೆಸ್ಟ್‌ ಮಾಡಬೇಕೆ? ಹಾಗಾದರೆ ಈ 5 ಸರಳ ಸ್ಟೆಪ್ಸ್‌ ಉಪಯೋಗಿಸಿ ಚೆಕ್‌ ಮಾಡಿ

- Advertisement -

ನಿಮ್ಮ ಇಂಟರ್ನೆಟ್‌ ಸರ್ವೀಸ್‌ ಪ್ರವೈಡರ್‌(ISP) ಒಂದೇ ತೆರನಾದ ಡೇಟಾ ಸ್ಪೀಡ್‌(Speed) ಅನ್ನು ನಿಮಗೆ ಒದಗಿಸುತ್ತಿದ್ದಾರೆಯೇ? ನಿಮ್ಮ ಇಂಟರ್ನೆಟ್‌ ಕನೆಕ್ಷನ್‌ ಕೆಲವೊಮ್ಮೆ ನಿಧಾನವಾಗುತ್ತದೆಯೇ? ಇದಕ್ಕೆ ನಿಮ್ಮ ಉತ್ತರ ಹೌದೆಂದಾರೆ, ಇದಕ್ಕೆ ಪರಿಹಾರ ಒಂದೇ ನಿಮ್ಮ ಇಂಟರ್ನೆಟ್‌ನ ಸ್ಪೀಡ್‌ ಟೆಸ್ಟ್‌ (Internet Speed Test) ಮಾಡುವುದು. ಗೂಗಲ್‌ ಹೋಮ್‌ ಪೇಜ್‌ನಲ್ಲಿಯೇ ನೀವು ಸುಲಭವಾಗಿ ಮತ್ತು ಅಷ್ಟೇ ವೇಗವಾಗಿ ಇಂಟರ್ನೆಟ್‌ ಸ್ಪೀಡ್‌ ಟೆಸ್ಟ್‌ ಮಾಡಬಹುದಾಗಿದೆ.

ಅದಲ್ಲದೇ ಹಲವಾರು ವೆಬ್‌ಸೈಟ್ಸ್‌ ಮತ್ತು ಅಪ್ಲಿಕೇಷನ್‌ಗಳನ್ನು ಉಪಯೋಗಿಸಿ ನಿಮ್ಮ ಇಂಟರ್ನೆಟ್‌ ಸ್ಪೀಡ್‌ ಚೆಕ್‌ ಮಾಡಬಹುದು. ಆದರೆ ಗೂಗಲ್‌ ನ ಹೋಮ್‌ ಪೇಜ್‌ಗೆ ಹೋಗುವುದು ಸರಳ ವಿಧಾನಗಳಲ್ಲಿ ಒಂದಾಗಿದೆ. ನಿಮ್ಮ ಇಂಟರ್ನೆಟ್‌ ಸಂಪರ್ಕದ ವೇಗವನ್ನು ಪರೀಕ್ಷಿಸಲು ಗೂಗಲ್‌ ಮೆಜರ್‌ಮೆಂಟ್‌ ಲ್ಯಾಬ್‌ನೊಂದಿಗೆ ಸೇರಿಕೊಂಡು 5 ಸ್ಟೆಪ್ಸ್‌ಗಳ ರಚನೆ ಮಾಡಿದೆ.

ಈ ಟೆಸ್ಟ್‌ಅನ್ನು ಪೂರ್ಣಗೊಳಿಸಲು ಮೆಜರ್‌ಮೆಂಟ್‌ ಲ್ಯಾಬ್‌ ಗೆ ನೀವು ಲಿಂಕ್‌ ಆಗಬೇಕು. ಮತ್ತು ನಿಮ್ಮ IP ಅಡ್ರೆಸ್‌ಅನ್ನು ಶೇರ್‌ ಮಾಡಲಾಗುವುದು ಮತ್ತು ಎಲ್ಲಾ ಪ್ರೈವೆಸೀ ಪಾಲಿಸಿಗಳನ್ನು ಅನುಸರಿಸಲಾಗುವುದು. ಎಮ್‌– ಲ್ಯಾಬ್‌ ಟೆಸ್ಟ್‌ ಅನ್ನು ನಡೆಸುತ್ತದೆ. ಇಂಟರ್ನೆಟ್‌ ಸಂಶೋಧನೆ ಹೆಚ್ಚಿಸಲು ಫಲಿತಾಂಶಗಳನ್ನು ಜನಸಾಮಾನ್ಯರಿಗೆ ಲಭ್ಯವಾಗುವಂತೆ ಮಾಡುತ್ತದೆ. ನಿಮ್ಮ IP ಅಡ್ರೆಸ್‌ ಮತ್ತು ಟೆಸ್ಟ್‌ನ ಫಲಿತಾಂಶಗಳನ್ನು ಪಬ್ಲಿಷ್ಡ್‌ ಮಟೀರಿಯಲ್‌ ನಲ್ಲಿ ಸೇರಿಸಲಾಗಿದೆ. ಆದರೆ ಇಂಟರ್ನೆಟ್‌ ಬಳಕೆದಾರರಿಗೆ ನಿಮ್ಮ ಬಗ್ಗೆ ಯಾವುದೇ ಇತರ ಮಾಹಿತಿಗಳನ್ನು ಸೇರಿಸಿಲ್ಲ ಎಂದು ಗೂಗಲ್‌ ಹೇಳಿದೆ.

ಇದನ್ನೂ ಓದಿ: FD on Google Pay: ಗೂಗಲ್‌ ಪೇಯಲ್ಲೇ ಎಫ್‌ಡಿ ಅಕೌಂಟ್ ತೆರೆಯಬಹುದು!

ಗೂಗಲ್‌ ಹೋಮ್‌ ಪೇಜ್‌ನಲ್ಲಿ ಇಂಟರ್ನೆಟ್‌ ಸ್ಪಿಡ್‌ ಟೆಸ್ಟ್‌ ಮಾಡುವುದು ಹೇಗೆ?

  1. ನಿಮ್ಮ ಕಂಪ್ಯೂಟರ್‌, ಸ್ಮಾರ್ಟ್‌ಫೋನ್‌ ಅಥವಾ ಟ್ಯಾಬಲೆಟ್‌ ಯಾವುದರಲ್ಲಾದರೂ ಇಂಟರ್ನೆಟ್‌ ಬ್ರೌಸರ್‌ ತೆರೆಯಿರಿ ಮತ್ತು ಸರ್ಚ್‌ನಲ್ಲಿ Google.com ಎಂದು ಬರೆಯಿರಿ.
  2. ಅದರಲ್ಲಿಯ ಸರ್ಚ್‌ ಬಾರ್‌ನಲ್ಲಿ ‘Run Speed Test’ ಎಂದು ಬರೆಯಿರಿ.
  3. Run Speed Test ಬಟನ್‌ ಇರುವ ಒಂದು ಹೊಸ ಡೈಲಾಗ್‌ ಬಾಕ್ಸ್‌ ತೆರೆಯುವುದು. ಅದರಲ್ಲಿ ನಿಮ್ಮ ಇಂಟರ್ನೆಟ್‌ ಸ್ಪೀಡ್‌ಅನ್ನು 30 ಸೆಕೆಂಡ್‌ಗಳ ಒಳಗೆ ಪರೀಕ್ಷಿಸಿ ಎಂಬ ವ್ಯಾಖ್ಯಾನವಿರುತ್ತದೆ. ಡೈಲಾಗ್‌ ಬಾಕ್ಸ್‌ ಹೇಳುವುದೇನೆಂದರೆ ಸ್ಪೀಡ್‌ ಟೆಸ್ಟ್‌ ಮಾಡಲು 40 MB ಗಳಿಗಿಂತಲೂ ಕಡಿಮೆ ಡೇಟಾ ಸಾಕು, ಆದರೆ, ವೇಗದ ಸಂಪರ್ಕಗಳಲ್ಲಿ ಹೆಚ್ಚಿನ ಡಾಟಾವನ್ನು ವರ್ಗಾಯಿಸಬಹುದು ಎಂದು ನಮೂದಿಸಿರುತ್ತದೆ.
  4. ಆ ವಿಂಡೋದಲ್ಲಿಯ Run Speed Test ಬಟನ್‌ ಕ್ಲಿಕ್ಕಿಸಿ.
  5. ಆಗ ಒಂದು ಹೊಸದಾದ ವಿಂಡೋ ತೆರೆದುಕೊಳ್ಳುವುದು. ಅದು ನಿಮ್ಮ ಇಂಟರ್ನೆಟ್‌ನ ಸ್ಪೀಡ್‌ ಬಗ್ಗೆ ಮಾಹಿತಿ ಕೊಡುವುದು. ಅದರಲ್ಲಿ ಡೌನ್‌ಲೋಡ್‌ ಸ್ಪೀಡ್‌ ಮತ್ತು ಅಪ್‌ಲೋಡ್‌ ಸ್ಪೀಡ್‌ ಎಷ್ಟಿದೆ ಎಂದು ನಮೂದಿಸಿರುವುದು. ಒಂದು ವೇಳೆ ನೀವು ಖಾತ್ರಿ ಪಡಿಸಿಕೊಳ್ಳಲು ಮತ್ತೊಮ್ಮೆ ಟೆಸ್ಟ್‌ ಮಾಡಲು ಬಯಸಿದರೆ Test Again ಎಂಬ ಬಟನ್‌ ಕ್ಲಿಕ್ಕಿಸಿ.

ಇದನ್ನೂ ಓದಿ: WhatsApp ನಲ್ಲಿ ಬರುವ ಸುಳ್ಳು ಸುದ್ದಿಗಳು ಯಾವುದು ಎಂದು ನೀವು ತಿಳಿಯಬೇಕೆ? ಈ ಟ್ರಿಕ್ಸ್‌ ಉಪಯೋಗಿಸಿ ನೋಡಿ!

Internet Speed Test check the internet speed from the google home page

RELATED ARTICLES

Most Popular