Karnataka Cabinet Expansion : ಮತ್ತೊಮ್ಮೆ ಸಂಪುಟ ಸರ್ಕಸ್ : ಯಾರು ಇನ್ ಯಾರು ಔಟ್ ಇಲ್ಲಿದೆ ಡಿಟೇಲ್ಸ್

ಬೆಂಗಳೂರು : ರಾಜ್ಯದಲ್ಲಿ ಮತ್ತೆ ಸಂಪುಟ ರಚನೆಯ ಸರ್ಕಸ್ ಜೋರಾಗಿದೆ.‌ಒಂದೆಡೆ ಬಾಕಿ ಇರುವ ಒಂದುವರ್ಷವಾದರೂ ಸಚಿವರಾಗೋಣ ಎಂದು ಶಾಸಕರು ಸರ್ಕಸ್ ನಡೆಸಿದ್ದರೇ, ಚುನಾವಣೆಯ ಮತಗಳಿಕೆ ಲೆಕ್ಕಾಚಾರದಲ್ಲಿ ಜಾತಿ ,ಪಂಗಡವನ್ನು ಟಾರ್ಗೆಟ್ ಮಾಡಿ ಸಚಿವ ಸ್ಥಾನ ಹಂಚಿಕೆಗೆ ಬಿಜೆಪಿ ಹೈಕಮಾಂಡ್ ನಿರ್ಧರಿಸಿದೆ. ಹೀಗಾಗಿ ರಾಜ್ಯ ಸಚಿವ ಸಂಪುಟಕ್ಕೆ (Karnataka Cabinet Expansion) ಯಾರು ಇನ್ ಯಾರು ಔಟ್ ಎಂಬ ಚರ್ಚೆ ಬಲಪಡೆದುಕೊಂಡಿದೆ.

ಸಿಎಂ ಬೊಮ್ಮಾಯಿ ನೀರಿನ ಹಂಚಿಕೆಗಳ ವಿವಾದ ಸೇರಿದಂತೆ ಹಲವು ವಿಚಾರಗಳ ಮಾತುಕತೆಗಾಗಿ ದೆಹಲಿಗೆ ದೌಡಾಯಿಸಿದ್ದಾರೆ.‌ಮುಖ್ಯ ಕೆಲಸ ಕೇಂದ್ರ ಜಲಸಚಿವರ ಭೇಟಿ ಯಾಗಿದ್ದರೂ ಸಂಪುಟ ವಿಸ್ತರಣೆಯೇ ಬೊಮ್ಮಾಯಿ ಆದ್ಯತೆ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೊಮ್ಮಾಯಿ ದೆಹಲಿಗೆ ದೌಡಾಯಿಸುತ್ತಿದ್ದಂತೆ ಸಚಿವ ಸಂಪುಟ ಆಕಾಂಕ್ಷಿಗಳಲ್ಲಿ ಸಂಭ್ರಮ‌ ಮನೆಮಾಡಿದ್ದರೇ, ಈಗಾಗಲೇ ಸಚಿವರಾಗಿರುವ ಹಲವರ ಎದೆಯಲ್ಲಿ ನಡುಕ ಆರಂಭವಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಸದ್ಯ ಸಚಿವ ಸಂಪುಟದಲ್ಲಿರೋ 12 ಕ್ಕೂ ಹೆಚ್ಚು ಸಚಿವರಿಗೆ ಹೈಕಮಾಂಡ್ ಖೋಕ್ ನೀಡಲಿದ್ದು, ಹಲವು ಹೊಸ ಸಚಿವರಿಗೆ ಅವಕಾಶ ನೀಡಲಿದೆ ಎನ್ನಲಾಗುತ್ತಿದೆ. ಹಲವು ವಿವಾದಗಳಿಂದ ಪಕ್ಷಕ್ಕೆ ಲಾಭಕ್ಕಿಂತ ಹೆಚ್ಚು ನಷ್ಟ ಉಂಟು ಮಾಡಿರುವ ಹಾಗೂ ಪಕ್ಷದ ವರ್ಚಸ್ಸಿಗೆ ಧಕ್ಕೆ ತಂದಿರೋ ಈಶ್ವರಪ್ಪ ಅವರಿಗೆ ಸಂಪುಟದಿಂದ ಹೊರಬೀಳೋ ಭಾಗ್ಯ ಬಹುತೇಕ ಖಚಿತವಾಗಿದೆ.

ಇದನ್ನು ಹೊರತು ಪಡಿಸಿದಂತೆ, ಕೆಲಸ ಕಾರ್ಯ ಹಾಗೂ ಪಕ್ಷದ ಬಲವರ್ಧನೆಗೆ ಕೊಡುಗೆ ನೀಡದ ಕಾರಣಕ್ಕೆ ಸಚಿವೆ ಶಶಿಕಲಾ ಜೊಲ್ಲೆ, ಆನಂದ ಸಿಂಗ್, ಬಾಬುರಾವ್ ಚವ್ಹಾಣ್, ಬಿ.ಸಿ.ಪಾಟೀಲ್‌ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಸಾಧ್ಯತೆ ಇದೆ. ಅಲ್ಲದೇ ಸಚಿವ ಸಂಪುಟದ ಏಕೈಕ‌ ಮಹಿಳಾ ಸಚಿವೆ ಖ್ಯಾತಿಯ ಶಶಿಕಲಾ ಜೊಲ್ಲೆ ಕೂಡ ಸಂಪುಟದಿಂದ ಹೊರಬೀಳಲಿದ್ದಾರಂತೆ. ಈ‌ ಮಧ್ಯೆ ಸಚಿವ ಸ್ಥಾನ ಆಕಾಂಕ್ಷಿತರ ದೊಡ್ಡ ಪಟ್ಟಿಯೇ ಇದ್ದು, ಈ ಪೈಕಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಮೊದಲ ಸ್ಥಾನದಲ್ಲಿದ್ದಾರೆ.

ಈಗಾಗಲೇ ದೆಹಲಿಗೆ ತೆರಳಿರುವ ರೇಣುಕಾಚಾರ್ಯ ಸಚಿವ ಸ್ಥಾನ ಕ್ಕೆ ಭರ್ಜರಿ ಲಾಭಿ ನಡೆಸಿದ್ದಾರೆ. ಕೇವಲ ರೇಣುಕಾಚಾರ್ಯ ಮಾತ್ರವಲ್ಲ ಶಾಸಕರುಗಳಾದ ಆನಂದ‌ ಮಾಮನಿ, ಹಾಲಪ್ಪ, ರಾಮದಾಸ್ ಸೇರಿದಂತೆ ಹಲವರು ಸಚಿವ ಸ್ಥಾನದ ನೀರಿಕ್ಷೆಯಲ್ಲಿದ್ದಾರೆ. ಇನ್ನೊಂದೆಡೆ ಶಾಸಕಿಯರಾದ ಪೂರ್ಣಿಮಾ ಹಾಗೂ ರೂಪಾಲಿ ನಾಯ್ಕ ಕೂಡ ಸಚಿವ ಸಂಪುಟಕ್ಕೆ ಸೇರಲು ತುದಿಗಾಲಿನಲ್ಲಿ ನಿಂತಿದ್ದು, ತಮ್ಮ ಪರ ಲಾಭಿ ಮುಂದುವರೆಸಿದ್ದಾರೆ. ಒಟ್ಟಿನಲ್ಲಿ ಮತ್ತೊಮ್ಮೆ ಬಿಜೆಪಿಯಲ್ಲಿ ಸಂಪುಟ‌ ವಿಸ್ತರಣೆ ಸರ್ಕಸ್ ಜೋರಾಗಿದೆ.

ಇದನ್ನೂ ಓದಿ : Basavaraj Horatti : ಜೆಡಿಎಸ್‌ ಬಿಟ್ಟು ಬಿಜೆಪಿ ಸೇರ್ತಾರೆ ಬಸವರಾಜ್ ಹೊರಟ್ಟಿ

ಇದನ್ನೂ ಓದಿ : ರಾಹುಲ್ ಗಾಂಧಿಗೆ 50 ಲಕ್ಷ ಆಸ್ತಿ ಹಾಗೂ 10 ತೊಲ ಚಿನ್ನ ಕೊಟ್ಟ ವೃದ್ಧೆ

Karnataka Cabinet Expansion CM Bommai Meet Modi And Amith Sha

Comments are closed.