ಕೇವಲ ರೂ.999ಕ್ಕೆ ಸಿಗುತ್ತೆ 4ಜಿ ಮೊಬೈಲ್‌ : ಸ್ಮಾರ್ಟ್‌ಪೋನ್‌ ಫೀಚರ್ಸ್‌ಗಳನ್ನೇ ಮೀರಿಸುತ್ತೆ Jio Bharat 4G

ಜಿಯೋ ಭಾರತ್‌ 4ಜಿ (Jio Bharat 4G) ಮೊಬೈಲ್‌ ಸದ್ಯ ಅಮೆಜಾನ್‌ ನಲ್ಲಿ ಅತ್ಯಂತ ಕಡಿಮೆ ಬೆಲೆಯಲ್ಲಿ ಲಭ್ಯವಿದೆ. ಒಂದು ತಿಂಗಳ ಹಿಂದೆ ಬಿಡುಗಡೆಯಾಗಿರುವ ಜಿಯೋ ಭಾರತ್ 4G ಸ್ಮಾರ್ಟ್‌ಪೋನ್‌ಗಳ ಫೀಚರ್ಸ್‌ಅನ್ನೇ ಮೀರಿಸುವಂತಿದೆ.

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿಯನ್ನೇ ಮಾಡಿರುವ ರಿಲಯಲ್ಸ್‌ ಜಿಯೋ ಇದೀಗ ಸ್ಮಾರ್ಟ್‌ ಪೋನ್‌ ಕ್ಷೇತ್ರದಲ್ಲಿ ಇತರ ಕಂಪೆನಿಗಳಿಗೆ ಶಾಕ್‌ ಕೊಟ್ಟಿದೆ. ಕಳೆದ ಒಂದು ತಿಂಗಳ ಹಿಂದೆ ಜಿಯೋ ಭಾರತ್ 4G ಫೀಚರ್ ಪೋನ್‌ ಬಿಡುಗಡೆ ಮಾಡಿದ್ದು, ಅಮೆಜಾನ್‌ ಇಂಡಿಯಾದಲ್ಲಿ ಈ ಮೊಬೈಲ್‌ ಖರೀದಿಗೆ ಲಭ್ಯವಿದೆ.

ಜಿಯೋ ಯಾವುದೇ ಉತ್ಪನ್ನ ಬಿಡುಗಡೆ ಮಾಡಿದ್ರೂ ಬಜೆಟ್ ಫ್ರೆಂಡ್ಲಿ ಆಗಿರುತ್ತೆ. ಇದೀಗ ಜಿಯೋ ಹೊಸ Jio Bharat 4G ಪೋನ್‌ ಬಿಡುಗಡೆ ಮಾಡಿದ್ದು, ಆನ್‌ಲೈನ್‌ನಲ್ಲಿ ಮಾರಾಟವಾಗುತ್ತಿದೆ. ಜಿಯೋ ಭಾರತ್‌ 4ಜಿ ಫೋನ್ ಖರೀದಿಸಲು ಆಸಕ್ತಿ ಹೊಂದಿದವರು ಅಮೆಜಾನ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್‌ ಮೂಲಕ ಖರೀದಿ ಮಾಡಬಹುದಾಗಿದೆ. ಅಲ್ಲದೇ ರಿಲಯನ್ಸ್‌ ಸ್ಟೋರ್‌ಗಳಲ್ಲಿಯೂ ಈ ಮೊಬೈಲ್‌ ಖರೀದಿಗೆ ಲಭ್ಯವಿದೆ.

Jio Bharat 4G Phone Now Available just rs 999 On Amazon Price And Feature 1
Image credit Original Source

ಜಿಯೋ ಭಾರತ್‌ 4ಜಿ (Jio Bharat 4G) ವೈಶಿಷ್ಟ್ಯಗಳೇನು ?

ಜಿಯೋ ಕಂಪೆನಿ ಬಿಡುಗಡೆ ಮಾಡಿರುವ ಫೀಚರ್ಸ್‌ ಪೋನ್‌ ಹಲವು ವೈಶಿಷ್ಟ್ಯತೆಗಳನ್ನು ಅಳವಡಿಸಿಕೊಂಡಿದೆ. 1.77-ಇಂಚಿನ TFT ಡಿಸ್ಪ್ಲೇ ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಸಜ್ಜುಗೊಂಡಿರುವ ಜಿಯೋ ಭಾರತ್ 4G ಫೋನ್ 0.3MP ಕ್ಯಾಮೆರಾ ಜೊತೆಗೆ LED ಫ್ಲ್ಯಾಷ್‌ಗಳನ್ನು ಒಳಗೊಂಡಿದೆ. ಅಲ್ಲದೇ 1000mAh ಬ್ಯಾಟರಿ ಒಳಗೊಂಡಿದೆ. ಇದನ್ನೂ ಓದಿ : Google G Mail Account : 2 ವರ್ಷದಿಂದ ನೀವು ಜೀ ಮೇಲ್‌ ಖಾತೆ ಬಳಕೆ ಮಾಡುತ್ತಿಲ್ಲವೇ ? ಹಾಗಾದ್ರೆ ಡಿ ಆಕ್ಟಿವ್‌ ಮಾಡಲಿದೆ ಗೂಗಲ್‌

ಸದ್ಯ ಕಪ್ಪು, ಬೂದಿ ಬಣ್ಣಗಳಲ್ಲಿ ಈ ಮೊಬೈಲ್‌ ಭಾರತದಾದ್ಯಂತ ಬಳಕೆದಾರರಿಗೆ ಲಭ್ಯವಾಗಲಿದೆ. ಈ ವಿಶಿಷ್ಟವಾಗಿರುವ ಪೋನ್‌ ಸುಮಾರು 23 ಭಾಷೆಗಳಿಗೆ ಬೆಂಬಲವನ್ನು ನೀಡುತ್ತಿದೆ. ಇನ್ನು ಪೋಟೋ, ವಿಡಿಯೋಗಳನ್ನು ಸೇವ್‌ ಮಾಡಿಕೊಳ್ಳಲು ಬಾಹ್ಯ ಮೈಕ್ರೊ SD ಕಾರ್ಡ್ ಅಳವಡಿಸಲು ಅವಕಾಶ ಕಲ್ಪಿಸಲಾಗಿದೆ. ಸದ್ಯ ಪೋನ್‌ ಸುಮಾರು 128GB ವರೆಗೆ ಸಂಗ್ರಹಣೆಯನ್ನು ವಿಸ್ತರಣೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿದೆ. ಕಾರ್ಬನ್‌ ಕಂಪೆನಿಯ ಸಹಭಾಗಿತ್ವದಲ್ಲಿ ಈ ಮೊಬೈಲ್‌ ಪೋನ್‌ ಅನ್ನೂ ಸಿದ್ದಪಡಿಸಲಾಗಿದೆ.

Jio Bharat 4G Phone Now Available just rs 999 On Amazon Price And Feature 1
Image credit Original Source

ಅಷ್ಟೇ ಅಲ್ಲಾ ಜಿಯೋ ಭಾರತ್‌ 4G ಪೋನ್‌ ಡ್ಯುಯಲ್ ಬ್ರ್ಯಾಂಡಿಂಗ್ ವೈಶಿಷ್ಟುತೆಯನ್ನು ಒಳಗೊಂಡಿದ್ದು, ಪೋನ್‌ನ ಮುಂಭಾಗದಲ್ಲಿ ಭಾರತ್‌ ಹಾಗೂ ಹಿಂದೆ ಕಾರ್ಬನ್‌ ಕಂಪೆನಿಯ ಲೋಗೋವನ್ನು ಒಳಗೊಂಡಿದೆ. ಈ ಪೋನ್‌ ಮುಖ್ಯವಾಗಿ 4G ಇಂಟರ್ನೆಟ್ ಸಂಪರ್ಕವನ್ನು ಬಳಸಲು ಗ್ರಾಹಕರಿಗೆ ಸಹಕಾರಿಯಾಗಿದೆ.

ಅತ್ಯಂತ ಕಡಿಮೆ ಬೆಲೆಯ 4G ಪೋನ್‌ 

ಇಷ್ಟೊಂದು ಫೀಚರ್ಸ್‌ ಒಳಗೊಂಡಿರುವ ಈ ಮೊಬೈಲ್‌ ಪೋನ್‌ ಅತ್ಯಂತ ಕಡಿಮೆ ಬೆಲೆಗೆ ಅಂದ್ರೆ ಕೇವಲ ರೂ. 999 ರೂಪಾಯಿಗೆ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇನ್ನು ಜಿಯೋ ತನ್ನ ಬಳಕೆದಾರರಿಗೆ ಹಲವು ಇಂಟರ್‌ನೆಟ್‌ ಯೋಜನೆಗಳನ್ನು ಜಾರಿಗೊಳಿಸಿದೆ. ಕೇವಲ 123 ರೂಪಾಯಿಗೆ 28 ದಿನಗಳ ಅವಧಿಗೆ ಇಂಟರ್‌ನೆಟ್‌ ಸೇವೆ ಲಭ್ಯವಿದ್ದು, ಈ ಯೋಜನೆಯಲ್ಲಿ 14 GB ಡೇಟಾದ ಜೊತೆಗೆ ಅನಿಯಮಿತ ಕರೆಗಳನ್ನು ನೀಡುತ್ತದೆ. ಇನ್ನು ಈ ಫೋನ್‌ನಲ್ಲಿ ತಡೆರಹಿತ ಚಲನಚಿತ್ರ ಮತ್ತು ವೀಡಿಯೊ ಸ್ಟ್ರೀಮಿಂಗ್‌ಗಾಗಿ Jio ಆಪ್‌ಗಳನ್ನು ಬಳೆಕ ಮಾಡಲು ಅವಕಾಶವಿದೆ. ಜೊತೆಗೆ ಬಳಕೆದಾರರು ಜಿಯೋದ ವಾರ್ಷಿಕ ಇಂಟರ್ನೆಟ್ ಯೋಜನೆಯನ್ನು ರೂ 1234 ಬೆಲೆಗೆ ಆಯ್ಕೆ ಮಾಡಬಹುದು. ಈ ಯೋಜನೆ ಅನಿಯಮಿತ ಕರೆಗಳು ಮತ್ತು 168 GB ಡೇಟಾವನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ : Jio Recharge Plan : ಜಿಯೋದ ಅಗ್ಗದ ರೀಚಾರ್ಜ್ ಯೋಜನೆ : 150 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುತ್ತೆ 1ಜಿಬಿ ಡೇಟಾ

Comments are closed.