Jio Plans : ಜಿಯೋ ಪ್ರಿಪೇಯ್ಡ್ ಹೊಸ ಫ್ಲ್ಯಾನ್ : ಜಿಯೋ ಬಳಕೆದಾರರಿಗೆ ಇನ್ಮುಂದೆ ನೆಟ್‌ಫ್ಲಿಕ್ಸ್‌ ಫ್ರೀ

ನವದೆಹಲಿ : ಭಾರತದ ಪ್ರಮುಖ ಟೆಲಿಕಾಂ ಕಂಪೆನಿಯಾಗಿರುವ ಜಿಯೋ (Jio Plans) ತನ್ನ ಬಳಕೆದಾರರಿಗೆ ಇದೀಗ ಹೊಸ ಪ್ರೀಪೇಯ್ಡ್‌ ಫ್ಲ್ಯಾನ್‌ ಒಂದನ್ನು ಪರಿಚಯಿಸಿದೆ. ಈ ಯೋಜನೆಯಲ್ಲಿ ಬಳಕೆದಾರರು ಉಚಿತವಾಗಿ ನೆಟ್‌ಫ್ಲಿಕ್ಸ್‌ ಸೇವೆಯನ್ನು ಪಡೆಯಬಹುದಾಗಿದೆ. ಹೊಸ ಯೋಜನೆಯಿಂದ ಗ್ರಾಹಕರಿಗೆ ಏನೆಲ್ಲಾ ಪ್ರಯೋಜನವಿದೆ. ಯೋಜನೆಗೆ ಎಷ್ಟು ಹಣ ಪಾವತಿ ಮಾಡಬೇಕು ಅನ್ನೋ ಸಂಪೂರ್ಣ ಮಾಹಿತಿ ಇಲ್ಲಿದೆ.

ಜಿಯೋ ಪ್ರಿಪೇಯ್ಡ್ ಬಳಕೆದಾರರಿಗೆ ರಿಲಯನ್ಸ್ ಜಿಯೋ ಎರಡು ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಾರಂಭಿಸಿದೆ. ಈ ಯೋಜನೆಗಳೊಂದಿಗೆ ರೀಚಾರ್ಜ್ ಮಾಡುವವರಿಗೆ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಜಿಯೋ ಪೋಸ್ಟ್‌ಪೇಯ್ಡ್ ಮತ್ತು ಜಿಯೋ ಫೈಬರ್ ಯೋಜನೆಗಳಿಗೆ ಮಾತ್ರವೇ ಇಷ್ಟು ದಿನ ನೆಟ್‌ ಫ್ಲಿಕ್ಸ್‌ ಚಂದಾದಾರಿಕೆಯನ್ನು ನೀಡಲಾಗುತ್ತಿತ್ತು. ಆದರೆ ಪ್ರೀಪೇಯ್ಡ್‌ ಯೋಜನೆಗೆ ನೆಟ್‌ಫ್ಲಿಕ್ಸ್‌ ಸೇವೆ ಉಚಿತವಾಗಿ ನೀಡುತ್ತಿರುವುದು ಇದೇ ಮೊದಲು.

ಭಾರತದಲ್ಲಿ 40 ಕೋಟಿಗೂ ಅಧಿಕ ಜಿಯೋ ಬಳಕೆದಾರರಿದ್ದು, ಈ ಯೋಜನೆಯ ಮೂಲಕ ಎಲ್ಲಾ ನೆಟ್‌ಫ್ಲಿಕ್ಸ್‌ ಆಫರ್‌ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ನೆಟ್‌ಫ್ಲಿಕ್ಸ್, ಅಲ್ಲಿ ನೀವು ಪ್ರಾದೇಶಿಕ ಭಾಷೆಗಳಲ್ಲಿ ಮನರಂಜನಾ ಟಿವಿ ಕಾರ್ಯಕ್ರಮಗಳು, ಚಲನಚಿತ್ರಗಳು ಮತ್ತು ವೆಬ್ ಸರಣಿಗಳನ್ನು ಉಚಿತವಾಗಿ ವೀಕ್ಷಿಸಬಹುದು.

ಜಿಯೋ ಹೊಸದಾಗಿ ಪರಿಚಯಿಸಿದ ಎರಡು ಪ್ರಿಪೇಯ್ಡ್ ಯೋಜನೆಗಳಲ್ಲಿ ಒಂದು ಫ್ಲ್ಯಾನ್‌ ನ ಮೊತ್ತ 1,099 ರೂ. ಆಗಿದೆ. ಈ ರೀಚಾರ್ಜ್ ಯೋಜನೆಯಲ್ಲಿ ನೀವು ನಿತ್ಯವೂ 2GB ಡೇಟಾವನ್ನು ಪಡೆಯುತ್ತೀರಿ. ಎರಡನೇ ರೀಚಾರ್ಜ್ ಯೋಜನೆಯಲ್ಲಿ ನೀವು ಹೆಚ್ಚಿನ ಡೇಟಾವನ್ನು ಪಡೆಯಬಹುದು. 1,499 ರೂ. ನೊಂದಿಗೆ ನೀವು 3GB ಡೇಟಾವನ್ನು ಆನಂದಿಸಬಹುದಾಗಿದೆ. ಈ ಎರಡು ಯೋಜನೆಗಳು ವಿಭಿನ್ನವಾಗಿದ್ದು, ಗ್ರಾಹಕರಿಗೆ ಹೆಚ್ಚಿನ ಅನುಕೂಲವನ್ನು ಕಲ್ಪಿಸುತ್ತಿವೆ. ಆದರೆ ಎರಡು ಯೋಜನೆಗಳ ಕಾಲಮಿತಿ 84 ದಿನಗಳು ಮಾತ್ರ. Jio ವೆಲ್ಕಮ್ ಆಫರ್ ಅನಿಯಮಿತ 5G ಡೇಟಾವನ್ನು ನೀಡುತ್ತದೆ. ಇದಲ್ಲದೆ, ನೀವು ಅನಿಯಮಿತ ಕರೆಗಳನ್ನು ಮಾಡಬಹುದು. ಈ ಯೋಜನೆಯೊಂದಿಗೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ನೆಟ್‌ಫ್ಲಿಕ್ಸ್ ವಿಷಯವನ್ನು ಉಚಿತವಾಗಿ ವೀಕ್ಷಿಸಬಹುದು.

ಜಿಯೋ ಹೊಸ ಯೋಜನೆಯ ಕುರಿತು ಜಿಯೋ ಪ್ಲಾಟ್‌ಫಾರ್ಮ್ ಸಿಇಒ ಕಿರಣ್ ಥಾಮಸ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.ನಮ್ಮ ಬಳಕೆದಾರರಿಗೆ ವಿಶ್ವ ದರ್ಜೆಯ ಸೇವೆಗಳನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ. ಜಾಗತಿಕ ಸ್ಟ್ರೀಮಿಂಗ್ ಕಂಪನಿಯಾದ ನೆಟ್‌ಫ್ಲಿಕ್ಸ್ ನಮ್ಮೊಂದಿಗೆ ಪಾಲುದಾರಿಕೆ ಹೊಂದಲು ಸಂತೋಷವಾಗಿದೆ ಎಂದು ಕಿರಣ್ ಥಾಮಸ್ ಹೇಳಿದ್ದಾರೆ. ನೆಟ್‌ಫ್ಲಿಕ್ಸ್ ಕಾರ್ಯನಿರ್ವಾಹಕ ಟೋನಿ ಝೆಮೆಕೋಸ್ಕಿ, ಜಿಯೋ ಜೊತೆಗಿನ ಪಾಲುದಾರಿಕೆಯು ತಮ್ಮ ಪ್ಲಾಟ್‌ಫಾರ್ಮ್ ಭಾರತದಲ್ಲಿ ಹೆಚ್ಚಿನ ಜನರನ್ನು ತಲುಪಲು ಸಹಾಯ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದಿದ್ದಾರೆ. ಇದನ್ನೂ ಓದಿ : Airtel unlimited plan : ಏರ್‌ಟೆಲ್‌ ಗ್ರಾಹಕರಿಗೆ ಗುಡ್‌ನ್ಯೂಸ್‌ : ಕೇವಲ 155 ರೂ.ಗಳಿಗೆ ಸಿಗುತ್ತೆ ಬೊಂಬಾಟ್‌ ಫ್ಲ್ಯಾನ್‌

ಭಾರತದಲ್ಲಿ ಪ್ರಸ್ತುತ ನೆಟ್‌ಫ್ಲಿಕ್ಸ್ ಚಂದಾದಾರಿಕೆ ಶುಲ್ಕವನ್ನು ಗಮನಿಸಿದರೆ, ಮೊಬೈಲ್ ಯೋಜನೆಯು ತಿಂಗಳಿಗೆ ರೂ.149 ಆಗಿದೆ. ಅದೇ ನೆಟ್‌ಫ್ಲಿಕ್ಸ್ ಬೇಸಿಕ್ ಪ್ಲಾನ್ ಅಂದರೆ ಮೊಬೈಲ್ ಅಥವಾ ಟಿವಿಯಲ್ಲಿ ಲಾಗಿನ್ ಆಗಿದ್ದರೆ ತಿಂಗಳಿಗೆ 199 ರೂ. ಇಲ್ಲಿಯವರೆಗೆ ಜಿಯೋದ ಮೂರು ತಿಂಗಳ (84 ದಿನಗಳು) ರೀಚಾರ್ಜ್ ಯೋಜನೆ ರೂ.749, ರೂ.719. ಹೊಸದಾಗಿ ಪ್ರಾರಂಭಿಸಲಾದ ಪ್ರಿಪೇಯ್ಡ್ ಯೋಜನೆಗಳು ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ಒಳಗೊಂಡಿವೆ, ಆದ್ದರಿಂದ ಬೆಲೆಗಳು ಸ್ವಲ್ಪ ಹೆಚ್ಚಾಗಿದೆ. ಆದರೆ ನೆಟ್‌ಫ್ಲಿಕ್ಸ್ ಅನ್ನು ಉಚಿತವಾಗಿ ವೀಕ್ಷಿಸಲು ಬಯಸುವವರಿಗೆ ಇದು ಉತ್ತಮ ಆಫರ್ ಅನ್ನಬಹುದಾಗಿದೆ.

Jio Plans: Jio Prepaid New Plan: Now Netflix Free for Jio Users

Comments are closed.