ವಾಟ್ಸಾಪ್ ಬಳಕೆ ಮಾಡದೇ ಇರುವವರ ಸಂಖ್ಯೆಯೇ ಕಡಿಮೆ ಇರುವ ಈಗಿನ ಜಮಾನದಲ್ಲಿ ಜಿಯೋ ಮಾರ್ಟ್ ಸೇವೆ ಕೂಡ ವಾಟ್ಸಾಪ್ ( WhatsApp to deliver groceries ) ಮೂಲಕವೇ ಪಡೆಯ ಬಹುದಾಗಿದೆ. ಇಲ್ಲಿ ನೀವು ಹೆಚ್ಚಾಗಿ ಕಷ್ಟ ಪಡಬೇಕೆಂದೇನಿಲ್ಲ. ವಾಟ್ಸಾಪ್ನಿಂದ ಜಿಯೋಮಾರ್ಟ್ಗೆ ಮೆಸೇಜ್ ಮಾಡುವ ಮೂಲಕ ದಿನಸಿ ವಸ್ತುಗಳನ್ನು ( JioMart taps WhatsApp) ಖರೀದಿಸಬಹುದಾಗಿದೆ.
ಬ್ರೆಡ್, ಬೆಣ್ಣೆ, ತರಕಾರಿ, ಪಾನೀಯ, ಧಾನ್ಯಗಳು ಹೀಗೆ ದಿನ ಬಳಕೆಯ ವಸ್ತು ಯಾವುದೇ ಇರಲಿ. ನೀವು ವಾಟ್ಸಾಪ್ನ ಸಹಾಯದಿಂದ ಜಿಯೋ ಮಾರ್ಟ್ನಲ್ಲಿ ಆರ್ಡರ್ ಮಾಡಬಹು ದಾಗಿದೆ. ಶಾಪಿಂಗ್ ಬಾಸ್ಕಟ್ನಲ್ಲಿ ನಿಮಗೆ ಬೇಕಾದ ವಸ್ತುಗಳನ್ನು ಹಾಕಿ ಬಳಿ ಜಿಯೋ ಮಾರ್ಟ್ನಲ್ಲಿ ಅಥವಾ ನಗದು ರೂಪದಲ್ಲಿ ನೀವು ಹಣ ಪಾವತಿ ಮಾಡಬಹುದಾಗಿದೆ. ಮೆಟಾ ಕಂಪನಿಯು ಕಳೆದ ವರ್ಷ ಏಪ್ರಿಲ್ನಲ್ಲಿ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ನ ಡಿಜಿಟಲ್ ಹಾಗೂ ಟೆಲಿಕಾಂ ವಿಭಾಗವಾದ ಜಿಯೋ ಫ್ಲಾಟ್ಫಾರಂಗಳಲ್ಲಿ ಶೇಕಡಾ 9.99 ಪ್ರತಿಶತದಷ್ಟು ಹೂಡಿಕೆ ಮಾಡಿದೆ.
ರಿಲಯನ್ಸ್ ತನ್ನ ನೆಟ್ವರ್ಕ್ನಲ್ಲಿ 400 ಮಿಲಿಯನ್ ವಾಟ್ಸಾಪ್ ಬಳಕೆದಾರರು ಹಾಗೂ ಅರ್ಧ ಮಿಲಿಯನ್ ಚಿಲ್ಲರೆ ವ್ಯಾಪಾರಿಗಳನ್ನು ಸಂಪರ್ಕಿಸುವ ಗುರಿ ಹೊಂದಿದೆ. ಜಿಯೋ ಹಾಗೂ ಮೆಟಾ ತಂಡಗಳು ಒಟ್ಟಾಗಿ ಕೆಲಸ ಮಾಡೋದ್ರಿಂದ ನಾವು ಅನೇಕ ಲಾಭಗಳನ್ನು ಪಡೆಯಲಿದ್ದೇವೆ. ಇದರಲ್ಲಿ ಮುಖ್ಯವಾಗಿ ವಾಟ್ಸಾಪ್ನಲ್ಲಿ ಜಿಯೋ ಇದು ಸಂಪೂರ್ಣ ಪ್ರಿಪೇಯ್ಡ್ ರಿಚಾರ್ಜ್ನ್ನು ಸರಳೀಕೃತಗೊಳಿಸುತ್ತದೆ ಎಂದು ಆಕಾಶ್ ಹೇಳಿದ್ದಾರೆ.
ಜಿಯೋ ಮಾರ್ಟ್ನ ಮೂಲಕ ಆರ್ಡರ್ ಮಾಡುವುದು ತುಂಬಾನೇ ಸುಲಭ . ನೀವು ವಾಟ್ಸಾಪ್ ಟ್ಯಾಪ್ & ಚಾಟ್ ಆಯ್ಕೆ ಕ್ಲಿಕ್ ಮಾಡಿ. ಇಲ್ಲಿ ನೀವು ದಿನಸಿ ಪಟ್ಟಿಯನ್ನು ಕಾಣಲಿದ್ದೀರಿ. ವಾಟ್ಸಾಪ್ನಲ್ಲಿ ಆರ್ಡರ್ಗಳನ್ನು ಪಟ್ಟಿ ಮಾಡಿ ಬಳಿಕ ಆನ್ಲೈನ್ ಪಾವತಿ ಮಾಡಿ. ನೀವು ನಗದು ನೀಡುವ ಮೂಲಕವೂ ಪೇಮೆಂಟ್ ಮಾಡಬಹುದಾಗಿದೆ.
ಇದನ್ನು ಓದಿ: Fish Lorry Accident : ಉಡುಪಿಯಲ್ಲಿ ವೃದ್ದನ ಜೀವ ಉಳಿಸಲು ತನ್ನ ಪ್ರಾಣವನ್ನೇ ಕಳೆದುಕೊಂಡ ಮೀನಿನ ಲಾರಿಯ ಚಾಲಕ !
ಇದನ್ನೂ ಓದಿ : Asus Chromebook CX1101 : ವರ್ಕ್ ಫ್ರಂ ಹೋಂ ಮಾಡುವವರಿಗೆ ಕೇವಲ 19,999 ರೂ. ಬೆಲೆಯ ಉತ್ತಮ ಲ್ಯಾಪ್‌ಟಾಪ್ ಇಲ್ಲಿದೆ
JioMart taps WhatsApp to deliver groceries, vegetables