Brahmastra Motion Poster: ತ್ರಿಶೂಲ ಹಿಡಿದ ರಣಬೀರ್ ಕಪೂರ್; ಕನ್ನಡದಲ್ಲಿಯೂ ತೆರೆಕಾಣಲಿದೆ ಬ್ರಹ್ಮಾಸ್ತ್ರ

ಬ್ರಹ್ಮಾಸ್ತ್ರ ಅತ್ಯಂತ ಕುತೂಹಲ ಹುಟ್ಟುಹಾಕಿರುವ ಬಾಲಿವುಡ್ ಚಿತ್ರ. ಹೀಗೆ ಭಯಂಕರ ಕುತೂಹಲ ಹುಟ್ಟುಹಾಕಲು ಕಾರಣ ನಟ ರಣಬೀರ್​ ಕಪೂರ್ (Ranbir Kapoor) ​ ಮತ್ತು ಆಲಿಯಾ ಭಟ್ (Alia Bhatt)​. ಬಾಲಿವುಡ್‌ನಲ್ಲಿ ನಿಜವಾಗಿಯೂ ಜೋಡಿಯಾಗಿರುವ ಇವರ ಜೋಡಿ ಒಂದೇ ಚಿತ್ರದಲ್ಲಿ ನಟಿಸಿರುವುದೇ ಬ್ರಹ್ಮಾಸ್ತ್ರದ ಕುರಿತು ಭಯಂಕರ ಕುತೂಹಲ ಚಿತ್ರ ರಸಿಕರಲ್ಲಿ ಮೂಡಲು ಕಾರಣವಾಗಿದೆ. ಅಂದಹಾಗೆ ಬ್ರಹ್ಮಾಸ್ತ್ರ ಇಂದು ಟ್ರೆಂಡಿಂಗ್ ಆಗಿದೆ. ಕಾರಣ ಚಿತ್ರದ ಮೋಷನ್ ಪೋಸ್ಟರ್ (Brahmastra Motion Poster) ಬಿಡುಗಡೆಯಾಗಿದ್ದು ಯೂಟ್ಯೂಬ್‌ನಲ್ಲಿ ಸಖತ್ ಹಿಟ್ ಆಗಿದೆ. ಮೂರು ಭಾಗಗಳಲ್ಲಿ ಬ್ರಹ್ಮಾಸ್ತ್ರ ತೆರೆಗೆ ಬರಲಿದೆ ಎಂಬುದು ಇನ್ನೂ ದೊಡ್ಡ ವಿಶೇಷವಾಗಿದೆ.

ಇಂದು ಬಿಡುಗಡೆಯಾಗಿರುವ ಬ್ರಹ್ಮಾಸ್ತ್ರ ಚಿತ್ರದ ಮೊದಲ ಭಾಗದ ಮೋಷನ್ ಪೋಸ್ಟರ್‌ನಲ್ಲಿ ರಣಬೀರ್ ಕಪೂರ್ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಅವರ ಕೈಯಲ್ಲಿ ಶಿವನ ತ್ರಿಶೂಲವೂ ಇರುವುದು ಇನ್ನಷ್ಟು ರೋಚಕತೆಯನ್ನು ಸೃಷ್ಟಿಸಿದೆ. ಹಾಗಾದರೆ ಇದು ಪೌರಾಣಿಕ ಕಥಾ ಹಿನ್ನೆಲೆಯನ್ನೂ ಹೊಂದಿದೆಯೇ ಎಂಬ ಕುತೂಹಲ ಹುಟ್ಟುಹಾಕಿದೆ. ಅಂದಹಾಗೆ ಬ್ರಹ್ಮಾಸ್ತ್ರ ಚಿತ್ರೀಕರಣ ಆರಂಭವಾಗಿ ಕೆಲವು ವರ್ಷಗಳೇ ಕಳೆದಿವೆ. ಚಿತ್ರ ಬಿಡುಗಡೆಗೆ ವಿಳಂಬವಾದ ಕುರಿತು ಈವರೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲವಾದರೂ ಉತ್ತಮ ಚಿತ್ರ ಹೆಚ್ಚು ಸಮಯವನ್ನು ಸಹಜವಾಗಿಯೇ ಬೇಡುತ್ತದೆ ಎಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮುಂತಾದವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು.  

ಕನ್ನಡದಲ್ಲಿಯೂ ಬ್ರಹ್ಮಾಸ್ತ್ರ
ಬ್ರಹ್ಮಾಸ್ತ್ರ ಸಿನಿಮಾಕ್ಕೆ ರಣಬೀರ್ ಕಪೂರ್‌ಗೆ ನಾಯಕಿಯಾಗಿ ಆಲಿಯಾ ಭಟ್​ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ನ ದಿಗ್ಗಜ ನಟರ ದಮಡೇ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಅಮಿತಾಭ್​ ಬಚ್ಚನ್​, ನಾಗಾರ್ಜುನ, ಡಿಂಪಲ್​ ಕಪಾಡಿಯ, ಮೌನಿ ರಾಯ್​ ಮುಂತಾದವರನ್ನು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನೋಡಬಹುದಾಗಿದೆ. ಕರಣ್ ಜೋಹರ್ ಸಾರಥ್ಯದ ಧರ್ಮ ಪ್ರೊಡಕ್ಷನ್ಸ್ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋಸ್ ನಿರ್ಮಾಣದ ಬ್ರಹ್ಮಾಸ್ತ್ರ ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿಯೂ ತೆರೆ ಕಾಣಲಿದೆ. ಆದರೆ ಬ್ರಹ್ಮಾಸ್ತ್ರದ ಬಿಡುಗಡೆಗೆ ಇನ್ನೂ ಬಹಳ ತಡವಿದ್ದು, 2022ರ ಸೆಪ್ಟೆಂಬರ್ 9ರಂದು ತೆರೆಯ ಮೇಲೆ ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ: Banking Frauds : ಭಾರತದಲ್ಲಿ 2020-2021ರಲ್ಲಿ ಪ್ರತಿದಿನ 229 ಬ್ಯಾಂಕಿಂಗ್ ವಂಚನೆ; ವಂಚನೆಗೊಳಗಾದ ಒಟ್ಟು ಮೊತ್ತ 1.38 ಲಕ್ಷ ಕೋಟಿ!

(Brahmastra Motion Poster Ranbir Kapoor as Shiva with Trishul)

Comments are closed.