ಮೊಟೊರೋಲಾ (Motorola) 2019 ರಲ್ಲಿ ರೇಝರ್ ಮಡಚಬಹುದಾದ ಫ್ಲಿಪ್ ಫೋನ್‌ಗಳನ್ನು (Motorola Flip Phones) ಪ್ರಾರಂಭಿಸಿತು.ಆದರೆ ಅದರ ಕ್ವಾಲಿಟಿ ವೈಶಿಷ್ಟ್ಯಗಳ ಕೊರತೆಯು ಸ್ಯಾಮ್ ಸಂಗ್ (Samsung) ಮತ್ತು ಹುವಾಯಿನಂತಹ (Huawei) ಬ್ರಾಂಡ್ ಉತ್ತಮವಾಗಿ ಮಾಡಲು ಅವಕಾಶ ಮಾಡಿಕೊಟ್ಟಿತು. ಆದರೆ ಇದೀಗ 2 ವರ್ಷಗಳ ಬಳಿಕ ರೇಝರ್ (Moto Razr 5G) ನಂತರ, 2022 ರಲ್ಲಿ ಮುಂದಿನ ರೇಝರ್ ಫೋಲ್ಡಬಲ್ ಫೋನ್ ಲಾಂಚ್ ಮಾಡುವುದಾಗಿ ಮೊಟೊರೋಲ ಹೇಳಿದೆ. ಈಗಾಗಲೇ ಇದರ ಸ್ಪೆಸಿಫಿಕೇಶನ್ ಲೀಕ್ ಆಗಿದ್ದು, ಒಳ್ಳೆಯ ಪ್ರಶಂಸೆಗೆ ಪಾತ್ರವಾಗಿದೆ.ಆದರೆ ರಿಲೀಸ್ ಆಗುವ ದಿನಾಂಕದ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಮೊಟೊರೊಲಾ ಈಗಾಗಲೇ 2022 ಕ್ಕೆ ಹೊಸ ರೇಜರ್ ಫೋಲ್ಡಬಲ್ ಅನ್ನು ಸುಳಿವು ನೀಡಿರುವುದರಿಂದ, ಇದನ್ನು ಪರಿಶೀಲಿಸುವುದರಲ್ಲಿ ಯಾವುದೇ ಹಾನಿ ಇಲ್ಲ.
ಏನಿರಬಹುದು ಸ್ಪೆಸಿಫಿಕೇಶನ್?
ಮೊಟೊರೋಲ ರೇಝರ್ 3 (Motorola Razr 3) ಈ ಹಿಂದೆ ಹೊಂದಿದ್ದ ದೊಡ್ಡ ಸಮಸ್ಯೆಗಳನ್ನು ಪರಿಹರಿಸುತ್ತದೆ ಎಂದು ಹೇಳಲಾಗುತ್ತದೆ.ಹಿಂದಿನ ರೇಝರ್ ಮಾಡೆಲ್‌ಗಳು ಸ್ನಾಪ್‌ಡ್ರಾಗನ್ 700 ಸರಣಿಯ ಚಿಪ್‌ಗಳೊಂದಿಗೆ ಬಜೆಟ್ ಫ್ರೆಂಡ್ಲಿ ಆಗಿತ್ತು. ಈ ಬಾರಿ , ಸ್ನಾಪ್ ಡ್ರಾಗನ್ 8 ಜನರೇಶನ್ ಹೊಂದಿದೆ (Snapdragon 8 Gen1 ) ಇದರಿಂದಾಗಿ ಸ್ಯಾಮ್ ಸಂಗ್ ಗಾಲಕ್ಸಿ ಝೆಡ್ ಫ್ಲಿಪ್3 (Samsung Galaxy Z Flip 3) ಗಿಂತ ಹೆಚ್ಚಿನ ಪವರ್ ಹೊಂದಿದೆ.ಮತ್ತು ಅದೇ ಮಟ್ಟದ ಕಾರ್ಯಕ್ಷಮತೆಯನ್ನು ನೀಡುತ್ತದೆ.
ಇದು ಆಧುನಿಕ ಫೋನ್‌ಗಳಂತೆಯೇ ಯುವಿಬಿ ತಂತ್ರಜ್ಞಾನವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಮೊಟೊರೋಲ ಇದನ್ನು 6ಜಿಬಿ, 8ಜಿಬಿ, ಮತ್ತು 8ಜಿಬಿ ರಾಮ್ ಜೊತೆಗೆ 128ಜಿಬಿ, 256ಜಿಬಿ ಮತ್ತು 512ಜಿಬಿ ಸ್ಟೋರೇಜ್ ಆಯ್ಕೆ ಹೊಂದಿದೆ. ಸ್ಯಾಮ್‌ಸಂಗ್ ಫ್ಲಿಪ್ ಮಾದರಿಗಳಿಗೆ ಸವಾಲು ಹಾಕುವ ಸಲುವಾಗಿ ಮೊಟೊರೊಲಾ ಕಡಿಮೆ ಬೆಲೆಗಳಿಗೆ ಸೇಲ್ ಮಾಡಬಹುದು.
ಹೆಚ್ಚುವರಿಯಾಗಿ, ರೇಝರ್ 3 ನಲ್ಲಿ 120Hz ನ ರಿಫ್ರೆಶ್ ದರದೊಂದಿಗೆ ಫುಲ್ ಎಚ್ ಡಿ ಅಮೋಲ್ಡ್ ಡಿಸ್ಪ್ಲೇ ಇದೆ. ಬ್ಯಾಟರಿ ಸಾಮರ್ಥ್ಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಾಗತಿಕವಾಗಿ ಈ ಫೋನ್ ಲಾಂಚ್ ಆಗಲಿದೆ. ಚೀನಾದಲ್ಲಿ ಮೊದಲು ಫೋನ್ ಬಿಡುಗಡೆ ಆಗುವ ಸಾಧ್ಯತೆಯಿದೆ, ನಂತರ ಯುರೋಪ್ ಮತ್ತು ಉತ್ತರ ಅಮೆರಿಕಾದಲ್ಲಿ ಬಿಡುಗಡೆ ಆಗಬಹುದು.
ಇದನ್ನೂ ಓದಿ: Buy Gold in Google Pay: ಗೂಗಲ್ ಪೇ ಆ್ಯಪ್‌ನಲ್ಲೇ ಚಿನ್ನ ಖರೀದಿಸಬಹುದು, ಮಾರಬಹುದು! ಹೇಗೆ ಎಂಬ ವಿವರ ಇಲ್ಲಿದೆ
(Motorola Razr 5G flip smartphone will launch soon)