Nokia C21 Plus : ನೋಕಿಯಾ C21 ಪ್ಲಸ್‌! ಆಕರ್ಷಕ ಆಫರ್‌ನೊಂದಿಗೆ ನಿಮ್ಮ ಬಜೆಟ್‌ನಲ್ಲೇ ಖರೀದಿಸಬಹುದಾದ ಸ್ಮಾರ್ಟ್‌ಫೋನ್‌!

ನೋಕಿಯಾ ಬ್ರಾಂಡ್‌ (Nokia Brand) ನ ಸ್ಮಾರ್ಟ್‌ಫೋನ್‌(Smartphone)ಗಳನ್ನು ತಯಾರಿಸಲು ಪರವಾನಿಗೆ ಹೊಂದಿರುವ HMD ಗ್ಲೋಬಲ್‌ C- ಸೀರಿಸ್‌ನ ಸ್ಮಾರ್ಟ್‌ಫೋನ್‌(Nokia C21 Plus) ಅನ್ನು ಲಾಂಚ್‌ ಮಾಡಿದೆ. ನೋಕಿಯಾ C21 ಪ್ಲಸ್‌ ಬಜೆಟ್‌ ಫೋನ್‌ ಆಗಿದ್ದು , ಅದರ ಪ್ರಾರಂಭಿಕ ಬೆಲೆಯು 10,299 ರೂ.ಗಳಾಗಿದೆ. ಇದು ಸುಧಾರಿತ ಕ್ಯಾಮರಾ, ದೊಡ್ಡದಾದ ಬ್ಯಾಟರಿ ಮತ್ತು ತೆಳುವಾದ ಹ್ಯಾಂಡ್‌ ಸೆಟ್‌ನಿಂದ ಉಪ್‌ಗ್ರೇಡ್‌ ಆಗಿದೆ. ಇದು ನೋಕಿಯಾ C20 ಯ ಪುರ್ವಾವೃತ್ತಿಯಾಗಿದೆ. ಆಂಡ್ರಾಯ್ಡ್‌ 11Go ಎಡಿಷನ್‌ನ ನೋಕಿಯಾ C21 ಪ್ಲಸ್‌ ಸಧ್ಯದಲ್ಲೇ ಎಲ್ಲಾ ರಿಟೇಲ್‌ ಮತ್ತು ಇ–ಕಾಮರ್ಸ್‌ ಸೈಟ್‌ಗಳಲ್ಲಿ ದೊರೆಯಲಿದೆ.

ನೋಕಿಯಾ C21 ಪ್ಲಸ್‌ ನ ವಿಶೇಷತೆಗಳು:

ಗಟ್ಟಿಮುಟ್ಟಾದ ಫೋನ್‌ಗಳಲ್ಲಿ ನೋಕಿಯಾ ನೂ ಒಂದು. ಅದೇ ಟ್ರೆಂಡ್‌ ನೋಕಿಯಾ C21 ಪ್ಲಸ್‌ನಲ್ಲಿಯೂ ಮುಂದುವರಿದಿದೆ. ಒಳಗಡೆ ಮೆಟಲ್‌ ಕೆಸ್‌ ಮತ್ತು ಗೊರಿಲ್ಲಾ ಗ್ಲಾಸ್‌ ಸ್ಕ್ರೀನ್‌ ಒಳಗೊಂಡಿದೆ. ಡಸ್ಟ್‌ ಮತ್ತು ವಾಟರ್‌ ಪ್ರೂಫ್‌ ರಕ್ಷಣೆ ನೀಡುವ IP52 ರೇಟಿನ ಬಾಡಿಯಿಂದ ನೋಕಿಯಾ C21 ಪ್ಲಸ್‌ ನಿರ್ಮಿತವಾಗಿದೆ.

ಡಿಸ್ಪ್ಲೇ ಯ ವಿಷಯದಲ್ಲಿ ಹೆಚ್ಚಿನ ಯಾವುದೇ ನವೀಕರಣಗಳನ್ನು ಹೊಂದಿಲ್ಲವಾದರೂ ಸ್ಟ್ಯಾಂಡರ್ಡ್ 60Hz ರಿಫ್ರೆಶ್ ದರ ಮತ್ತು 2.5D ಕವರ್ ಗ್ಲಾಸ್‌ನೊಂದಿಗೆ 720p IPS LCD ಪ್ಯಾನೆಲ್‌ ನಲ್ಲಿಯೇ ಈ ಸ್ಮಾರ್ಟ್‌ಫೋನ್ ಹೊರಬಂದಿದೆ. ಇದರ ಸಾಫ್ಟ್‌ವೆರ್‌ ಆಂಡ್ರಾಯ್ಡ್‌ 11 Go ಎಡಿಷನ್‌ನಿಂದ ಅಪ್‌ಗ್ರೇಡ್‌ ಆಗಿದೆ. ಬಜೆಟ್‌ ನಲ್ಲಿ ದೊರುಯುವ ಹ್ಯಾಂಡ್‌ಸೆಟ್‌ 13 MP ಪ್ರೈಮರಿ ಸೆನ್ಸಾರ್‌ ಮತ್ತು 2MP ಡೆಪ್ತ್‌ ಸೆನ್ಸಾರ್‌ ಡ್ಯುಯಲ್‌–ಲೆನ್ಸ್‌ ಕ್ಯಾಮರಾ ಹೊಂದಿದೆ. ಸೆಲ್ಫೀ ಮತ್ತು ವಿಡಿಯೋ ಕಾಲ್‌ಗಳನ್ನು ಬೆಂಬಲಿಸಲು 5MPಯ ಫ್ರಂಟ್‌ ಕ್ಯಾಮರಾ ಒಳಗೊಂಡಿದೆ. ರಿಯರ್‌ ಕ್ಯಾಮರಾವು HDR, ಪೋರ್ಟ್ರೈಟ್‌ ಮೋಡ್‌ , ಪನೋರಮಾ ಮೋಡ್‌ ಮತ್ತು ಬ್ಯೂಟಿಫಿಕೇಷನ್‌ ಅಸಿಸ್ಟ್‌ನಂತಹ ಬೇಸಿಕ್‌ ವೈಶಿಷ್ಟ್ಯಗಳನ್ನು ನೀಡಿದೆ.

ಪ್ರೊಸೆಸ್ಸರ್‌ನ ವಿಷಯದಲ್ಲಿ ನೋಕಿಯಾ C21 ಪ್ಲಸ್‌ Unisoc SC9863A ಎಂಟ್ರಿ ಲೆವಲ್‌ ಆಕ್ಟಾ ಕೋರ್‌ ಪ್ರೊಸಿಸ್ಸರ್‌ನಿಂದ ಚಾಲಿತವಾಗುತ್ತದೆ. 4 ಜಿಬಿ RAM ಮತ್ತು 64 ಜಿಬಿ ಸ್ಟೋರೇಜ್‌ ಕ್ಯಾಪಾಸಿಟಿ ಹೊಂದಿದೆ. ಇಂಟರ್ನಲ್‌ ಸ್ಟೋರೇಜ್‌ ಅನ್ನು ಮೈಕ್ರೋ SD ಕಾರ್ಡ್‌ ಮೂಲಕ 256 ಜಿಬಿಗಳ ವರಗೆ ವಿಸ್ತರಿಸಬಹುದಾಗಿದೆ. ಬ್ಯಾಟರಿಯ ಕ್ಯಾಪಾಸಿಟಿಯು 5050mAh ಇದ್ದು, ಸಿಂಗಲ್‌ ಚಾರ್ಜ್‌ ಮಾಡಿ ಮೂರು ದಿನಗಳವರೆಗೆ ಉಪಯೋಗಿಸಿಬಹುದಾಗಿದೆ.

ಕನೆಕ್ಟಿವಿಟಿಯ ವೈಶಿಷ್ಟ್ಯಗಳು ಇನ್ನೂ 4.2 ಬ್ಲೂಟೂತ್‌ ಮತ್ತು ಮೈಕ್ರೋ USB ಚಾರ್ಜಿಂಗ್‌ ಪೋರ್ಟನ್ನೇ ಅವಲಂಬಿಸಿದೆ. ಆದರೆ ಆಡಿಯೋಗಾಗಿ 3.5mm ವೈರ್‌ನ ಜ್ಯಾಕ್‌ ಮತ್ತು ಹಿಂಬದಿಯಲ್ಲಿ ಬಯೋಮೆಟ್ರಿಕ್‌ ಸೆನ್ಸಾರ್‌ ಹೊಂದಿದೆ.

ಬೆಲೆ ಮತ್ತು ಲಭ್ಯತೆ :
ಸದ್ಯ ಭಾರತದಲ್ಲಿ ನೋಕಿಯಾ C21 ಪ್ಲಸ್‌ ಡಾರ್ಕ್‌ ಸಿಯಾನ್‌ ಮತ್ತು ವಾರ್ಮ್‌ ಗ್ರೇ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. 3/32 ಜಿಬಿಯ ಹ್ಯಾಂಡ್‌ಸೆಟ್‌ 10,299 ರೂ.ಗಳಾದರೆ, 4/64 ಜಿಬಿಯ ಹ್ಯಾಂಡ್‌ಸೆಟ್‌ 11,299 ರೂ.ಗಳಾಗಿದೆ. ವೈಯರ್ಡ್‌ ಇಯರ್‌ಫೋನ್‌ ಅನ್ನು ಉಚಿತವಾಗಿ ಲಾಂಚ್‌ ಆಫರ್‌ನಲ್ಲಿ ನೋಕಿಯಾ ನೀಡುತ್ತಿದೆ. ಕೆಲವು ಬ್ಯಾಂಕ್‌ ಖಾತೆಗಳ ಕ್ರೆಡಿಟ್‌ ಕಾರ್ಡ್‌ಗಳನ್ನು ಬಳಸುವುದರಿಂದ 1,000 ವರೆಗೆ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ. ಇ–ಕಾಮರ್ಸ್‌ ಸೈಟ್‌ಗಳಾದ ಫ್ಲಿಪ್‌ಕಾರ್ಟ್‌, ಅಮೇಜಾನ್‌ ಸೇರಿದಂತೆ ರಿಟೇಲ್‌ ಅಂಗಡಿಗಳಲ್ಲಿ ಲಭ್ಯವಾಗಲಿದೆ.

ಇದನ್ನೂ ಓದಿ :Airtel Prepaid Plan : 265 ರೂ.ಗಳ ಪ್ರಿಪೇಯ್ಡ್‌ ಪ್ಲಾನ್‌ನ ಪ್ರಯೋಜನಗಳನ್ನು ಹೆಚ್ಚಿಸಿದ ಏರ್‌ಟೆಲ್‌!

ಇದನ್ನೂ ಓದಿ : Samsung Galaxy S23 : ಹೊಸ ವಿಶೇಷತೆಯೊಂದಿಗೆ ಬರಲಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ S23 ಸೀರಿಸ್‌ ! 200MP ಕ್ಯಾಮರಾ ಮತ್ತು ಸ್ನಾಪ್‌ಡ್ರಾಗನ್‌ 8 ಜೆನ್‌ 2 SoC ಇದರ ವಿಶೇಷತೆಯಾಗಲಿದೆಯೇ?

(Nokia C21 Plus budget Phone Launched in India 3 days battery life is its greatest feature)

Comments are closed.