OnePlus Smartphone: ಫೆಬ್ರವರಿ 7 ರಂದು ಬಿಡುಗಡೆಯಾಗಲು ಸಜ್ಜಾಗಿದೆ ಒನ್‌ಪ್ಲಸ್‌ನ ಟಾಪ್‌–ಎಂಡ್‌ ಸ್ಮಾರ್ಟ್‌ಫೋನ್‌ ಓನ್‌ಪ್ಲಸ್‌ 11 5G

ಸ್ಮಾರ್ಟ್‌ಫೋನ್‌ಗಳಲ್ಲಿ (Smartphones) ಗ್ಲೋಬಲ್‌ ಬ್ರಾಂಡ್‌ ಆದ ಒನ್‌ಪ್ಲಸ್‌, 11 5Gಯನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಇದು ಹೈ–ಪರ್ಫಾಮೆನ್ಸ್‌ ಸ್ಮಾರ್ಟ್‌ಫೋನ್‌ ಆಗಿದ್ದು, ಫೋಟೋಗ್ರಾಫಿ, ಮಲ್ಟಿಟಾಸ್ಕಿಂಗ್‌, ಗೇಮಿಂಗ್‌ನಿಂದ ವಿನ್ಯಾಸದವರೆಗೆ ಎಲ್ಲದರಲ್ಲಿಯೂ ಶ್ರೇಷ್ಠತೆಯನ್ನು ನೀಡಬಹುದು ಎಂದು ನಿರೀಕ್ಷಿಸಲಾಗಿದೆ. ಒನ್‌ಪ್ಲಸ್‌ ಸ್ಮಾರ್ಟ್‌ಫೋನ್‌ಗಳು (OnePlus Smartphone) ಮಾದರಿಯ ಫೋನ್‌ಗಳಾಗಿವೆ. ಹಾಗಾಗಿ ಇದು ಫ್ಲಾಗ್‌ಶಿಪ್‌ ಫೋನ್‌ಗಳಲ್ಲಿಯೂ ಅತ್ಯುತ್ತಮ ತಂತ್ರಜ್ಞಾನವನ್ನು ನೀಡುತ್ತದೆ.

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಫೆಬ್ರವರಿ 7 ರಂದು ದೆಹಲಿಯ NCR ನಲ್ಲಿ ನಡೆಯಲಿರುವ ಒನ್‌ಪ್ಲಸ್‌ ಕ್ಲೌಡ್‌ 11 ಬಿಡುಗಡೆಯ ಈವೆಂಟ್‌ನಲ್ಲಿ ಅನಾವರಣಮಾಡಲಿದೆ. ಹಾಗೆಯೇ ಅದೇ ಈವೆಂಟ್‌ನಲ್ಲಿ ಒನ್‌ಪ್ಲಸ್‌ನ ಬಡ್ಸ್‌ ಪ್ರೋ 2 ಇಯರ್‌ಬಡ್‌ಗಳು ಮತ್ತು ಒನ್‌ಪ್ಲಸ್‌ ಟಿವಿ 65 Q2 aಅನ್ನು ಸಹ ಬಿಡುಗಡೆ ಮಾಡಲಾಗುತ್ತಿದೆ.

ಒನ್‌ಪ್ಲಸ್‌ 11 5G ಸ್ಮಾರ್ಟ್‌ಫೋನ್‌ ಮಲ್ಟಿ–ಟಾಸ್ಕಿಂಗ್‌ ಮತ್ತು ಹೆಚ್ಚಿನದನ್ನು ನಿರೀಕ್ಷಿಸುವವರಿಗಾಗಿದೆ. ಇದು ಸ್ನಾಪ್‌ಡ್ರಾಗನ್‌ 8 ಜೆನ್‌2 ಮೊಬೈಲ್‌ ಪ್ಲಾಟ್‌ಫಾರ್ಮ್‌ನೊಂದಿಗೆ ಬರುವ ನಿರೀಕ್ಷೆಯಿದೆ. ತನ್ನ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ವೇಗದ CPU ಮತ್ತು ಹೆಚ್ಚಿನ ಗ್ರಾಫಿಕ್ಸ್‌ಗಾಗಿ ವೇಗದ GPU ನೀಡಲಿದೆ. ಇದಕ್ಕಾಗಿ ಈ ಹೆಚ್ಚಿನ ವಿಶೇಷತೆಗಳನ್ನು ಬೆಂಬಲಿಸಲು ಸುಧಾರಿತ ಬ್ಯಾಟರಿ ದಕ್ಷತೆಯೊಂದಿಗೆ ಬರುವ ನಿರೀಕ್ಷೆಯಿದೆ.

ಸಂಗ್ರಹಣೆ ಮತ್ತು ಕಾರ್ಯಕ್ಷಮತೆಗಾಗಿ 16 GB ಸುಧಾರಿತ RAM ನಿರೀಕ್ಷಿಸಲಾಗಿದೆ. ವರದಿಗಳು ಹೇಳಿದಂತೆ ಗೇಮಿಂಗ್‌ ಅನುಭವವನ್ನು ಹೆಚ್ಚಿಸುವ ಸಲುವಾಗಿ ಡೋಲ್‌ಬೆ ವಿಶನ್‌, ಮತ್ತು ಡೋಲ್‌ಬೆ ಆಟಮ್ಸ್‌ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದಾಗಿದೆ. ಫೋಟೋ ಮತ್ತು ವಿಡಿಯೋಗಳಿಗಾಗಿ ಸುಧಾರಿತ ಕ್ಯಾಮೆರಾಗಳಿರಬಹುದು. ಈ ಸ್ಮಾರ್ಟ್‌ಫೋನ್‌ನಲ್ಲಿ ವೀಡಿಯೊಗ್ರಫಿ ಮತ್ತು ಛಾಯಾಗ್ರಹಣಕ್ಕಾಗಿ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ತಂತ್ರಜ್ಞಾನವನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ. ಇದು ಸುಧಾರಿತ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದುವ ಸಾಧ್ಯತೆಯಿದೆ.

ಇದನ್ನೂ ಓದಿ : Tata Motors : ಇಂದಿನಿಂದ ದುಬಾರಿಯಾಗಲಿದೆ ಟಾಟಾದ ಪ್ರಯಾಣಿಕ ವಾಹನಗಳು

ಒನ್‌ಪ್ಲಸ್‌ 11 5G ಫೋನ್‌ IMX890 50 MP ಮುಖ್ಯ ಸಂವೇದಕ, IMX709 32 MP ಪೋರ್ಟ್ರೇಟ್ ಲೆನ್ಸ್ ಮತ್ತು IMX581 48 MP ಅಲ್ಟ್ರಾ-ವೈಡ್ ಕ್ಯಾಮೆರಾವನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಜೊತೆಗೆ, ಸ್ಪಷ್ಟ ಫೋಟೋಗಳಿಗಾಗಿ ಲೈಟ್‌ ಕಲರ್‌ ಗುರುತಿಸುವಿಕೆಗಾಗಿ 13-ಚಾನೆಲ್ ಮಲ್ಟಿ-ಸ್ಪೆಕ್ಟ್ರಲ್ ಸಂವೇದಕದಂತಹ ವೈಶಿಷ್ಟ್ಯಗಳನ್ನು ಹೊಂದಿರುವ ನಿರೀಕ್ಷೆಯಿದೆ.

ಇದೇ ಈವೆಂಟ್‌ನಲ್ಲಿ ಒನ್‌ಪ್ಲಸ್‌ ಬಡ್ಸ್‌ ಪ್ರೋ 2 ಇಯರ್‌ಬಡ್‌ಗಳು ಮತ್ತು ಒನ್‌ಪ್ಲಸ್‌ TV 65 Q2 ಪ್ರೋ ಭಾರತದಲ್ಲಿ ಅನಾವರಣಗೊಳ್ಳಲಿದೆ.

ಇದನ್ನೂ ಓದಿ : Union budget 2023: ಕೇಂದ್ರ ಬಜೆಟ್‌ ನಲ್ಲಿ ಕರ್ನಾಟಕಕ್ಕೆ ಸಿಕ್ಕಿದ್ದೇನು ?

(OnePlus Smartphone set for launch on February 7)

Comments are closed.