ಭಾನುವಾರ, ಏಪ್ರಿಲ್ 27, 2025
HometechnologyOppo A59 5G : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು ಒಪ್ಪೋ A59 5G...

Oppo A59 5G : ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಂತು ಒಪ್ಪೋ A59 5G ಸ್ಮಾರ್ಟ್‌ಪೋನ್‌

- Advertisement -

Oppo A59 5G : ಒಪ್ಪೋ ಕಂಪೆನಿ ಈಗಾಗಲೇ ಹಲವು ಮಾದರಿಯ ಮೊಬೈಲ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದೀಗ ಅತ್ಯಂತ ಕಡಿಮೆ ಬೆಲೆಗೆ 5G ಸ್ಮಾರ್ಟ್‌ಪೋನ್‌ ಬಿಡುಗಡೆ ಮಾಡಲು ಸಜ್ಜಾಗಿದೆ. ಅದರಲ್ಲೂ₹1,500 ವರೆಗೆ ಕ್ಯಾಶ್‌ಬ್ಯಾಕ್‌ ಪಡೆಯಲು ಕೂಡ ಅವಕಾಶವನ್ನು ಕಲ್ಪಿಸಿದೆ. ಅಷ್ಟಕ್ಕೂ ಒಪ್ಪೋ ಎ59 5ಜಿ (Oppo A59 5G)ಸ್ಮಾರ್ಟ್‌ ಪೋನ್‌ ವಿಶೇಷತೆ ಏನು ಅನ್ನೋ ಕಂಪ್ಲೀಟ್‌ ಡಿಟೇಲ್ಸ್‌ ಇಲ್ಲಿದೆ.

Oppo A59 5G ಸ್ಮಾರ್ಟ್‌ ಪೋನ್‌ ಅತ್ಯಂತ ಸ್ಲಿಮ್ ಆಗಿರುವ ಬಾಡಿ ವಿನ್ಯಾಸವನ್ನು ಹೊಂದಿದೆ. ಚೀನಾದ ಟೆಕ್ ದೈತ್ಯ Oppo ಇತ್ತೀಚೆಗೆ ಭಾರತದಲ್ಲಿ ಬಹು ನಿರೀಕ್ಷಿತ Oppo A59 5G ಬಿಡುಗಡೆ ಮಾಡಲಿದೆ. ಈ ಸ್ಮಾರ್ಟ್‌ ಪೋನ್‌ ಸದ್ಯ ಭಾರತದ ಮಾರುಕಟ್ಟೆ ಯಲ್ಲಿ ₹15,000ಗೆ ಲಭ್ಯವಾಗಲಿದೆ. ಅತ್ಯಂತ ಕಡಿಮೆ ಬೆಲೆಗೆ ದೊರೆಯುವ 5G ಮೊಬೈಲ್‌ ಎನಿಸಿಕೊಂಡಿದೆ.

Oppo A59 5G Oppo 5G smartphone launched in the market at a very low price
Image Credit to Original Source

ಒಪ್ಪೋ ಎ 59 ಭಾರತದಲ್ಲಿ 14999ರೂಪಾಯಿಗೆ ಖರೀದಿ ಮಾಡಬಹುದಾಗಿದ್ದು. ಒಪ್ಪೋ ( Oppo), ಅಮೇಜಾನ್( Amazon),‌ ಪ್ಲಿಪ್‌ಕಾರ್ಟ್‌ ( Flipkart) ಅಧಿಕೃತ ವೆಬ್‌ಸೈಟ್‌ ಮೂಲಕ ಖರೀದಿಸಬಹುದಾಗಿದೆ. ಅಲ್ಲದೇ ಅಂಗಡಿಗಳಿಂದಲೂ ಖರೀದಿಸಲು ಅವಕಾಶವಿದೆ. ಒಪ್ಪೋ ಕಂಪೆನಿಯ ಈ ಮೊಬೈಲ್‌ನ್ನು ಗ್ರಾಹಕರು ಡಿಸೆಂಬರ್ 25, 2023 ರಿಂದ ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ : Redmi Note 13 5G : ಅತ್ಯಂತ ಕಡಿಮೆ ಬೆಲೆ ಭಾರತದ ಮಾರುಕಟ್ಟೆಗೆ ಎಂಟ್ರಿಯಾಗಲಿದೆ ರೆಡ್ ಮೀ ನೋಟ್‌ 13 5ಜಿ ಮೊಬೈಲ್‌, ಏನಿದರ ವಿಶೇಷತೆ ?

5G ತಂತ್ರಜ್ಞಾನವನ್ನು ಒಳಗೊಂಡಿರುವ ಈ ಸ್ಮಾರ್ಟ್‌ ಪೋನ್‌ 4GB RAM ಮತ್ತು 6GB RAM ಆವೃತ್ತಿಗಳಲ್ಲಿ ಲಭ್ಯವಿದೆ. ಅಲ್ಲದೇ ಸ್ಟಾರ್ರಿ ಬ್ಲ್ಯಾಕ್ ಮತ್ತು ಸಿಲ್ಕ್ ಗೋಲ್ಡ್ ಬಣ್ಣದ ವಿನ್ಯಾಸದಲ್ಲಿಯೂ ಮೊಬೈಲ್‌ ಖರೀದಿಸಲು ಅವಕಾಶವಿದೆ. ಸ್ಲಿಮ್ ಬಾಡಿ ವಿನ್ಯಾಸದ ಜೊತೆಗೆ 720 NITS ಬ್ರೈಟ್‌ನೆಸ್‌ನೊಂದಿಗೆ 90Hz ಸೂರ್ಯನ ಬೆಳಕಿನ ಪರದೆಯನ್ನು ಹೊಂದಿದೆ.

ಒಪ್ಪೊ ಕಂಪೆನಿಯ ಈ ಹೊಸ 5G ಸ್ಮಾರ್ಟ್‌ಫೋನ್ 6GB RAM ಮತ್ತು 128GB ROM ಒಳಗೊಂಡಿದೆ. ಅಲ್ಲದೇ RAM ಅನ್ನು 6GB ವರೆಗೆ ವಿಸ್ತರಣೆ ಮಾಡಲು ಅವಕಾಶವಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6020 SoC ಯಿಂದ ಉತ್ತೇಜಿಸಲ್ಪಟ್ಟ 5G ಸ್ಮಾರ್ಟ್‌ಫೋನ್ ಮೋಡೆಮ್ ಅನ್ನು ಕಡಿಮೆ ಶಕ್ತಿಯ 7nm ಚಿಪ್‌ ಒಳಗೊಂಡಿದೆ.

Oppo A59 5G Oppo 5G smartphone launched in the market at a very low price
Image Credit to Original Source

ಒಪ್ಪೋ ಎ 59 13MP ಪ್ರಾಥಮಿಕ ಕ್ಯಾಮೆರಾ, 2MP ಬೊಕೆ ಕ್ಯಾಮೆರಾ ಮತ್ತು ಸೆಲ್ಫಿಗಳಿಗಾಗಿ 8MP ವಿಶೇಷ ಕ್ಯಾಮೆರಾವನ್ನು ಒಳಗೊಂಡಿದೆ. ಇದು ಅಲ್ಟ್ರಾ ನೈಟ್ ಮೋಡ್ ಒಳಗೊಂಡಿದೆ. ಇದರಿಂದಾಗಿ ಉತ್ತಮ ಛಾಯಾಗ್ರಹಣಕ್ಕಾಗಿ ಮಲ್ಟಿ -ಫ್ರೇಮ್‌ ಶಬ್ದ ಕಡಿತದ ಜೊತೆಗೆ ರಾತ್ರಿಯ ವೇಳೆಯಲ್ಲಿ ಅದ್ಬುತ ಪೋಟೋಗಳನ್ನು ಸೆರೆ ಹಿಡಿಯಲು ಅವಕಾಶವಿದೆ. ಅಲ್ಲದೇ IP54 ಧೂಳು ನಿರೋಧಕ ರಕ್ಷಣೆ ಹೊಂದಿದೆ.

ಇದನ್ನೂ ಓದಿ : 50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

ಒಪ್ಪೋ ಎ 59 ಖರೀದಿಯ ಮೇಲೆ ಗ್ರಾಹಕರು ₹1500 ವರೆಗೆ ಕ್ಯಾಶ್‌ಬ್ಯಾಕ್ ಪಡೆದುಕೊಳ್ಳಲು ಅವಕಾಶವಿದೆ. ಅಲ್ಲದೇ ಎಸ್‌ಬಿಐ ( SBI) ಕಾರ್ಡ್‌ಗಳು, IDFC ಫಸ್ಟ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಕ್ರೆಡಿಟ್ ಕಾರ್ಡ್, AU ಫೈನಾನ್ಸ್ ಬ್ಯಾಂಕ್ ಮತ್ತು ಮುಖ್ಯ ರಿಟೇಲ್ ಔಟ್‌ಲೆಟ್‌ ಹಾಗೂ ಒಪ್ಪೋ ಕಂಪೆನಿಯ ಮೂಲಕ ಆರು ತಿಂಗಳವರೆಗೆ ಯಾವುದೇ ವೆಚ್ಚ ಇಲ್ಲದೆ EMI ಸೌಲಭ್ಯವನ್ನು ಪಡೆಯಬಹುದಾಗಿದೆ.

Oppo A59 5G ಭಾರತದಲ್ಲಿ 14,999 ರೂ. ಬೆಲೆಯದ್ದಾಗಿದೆ ಮತ್ತು Oppo ನ ಅಧಿಕೃತ ಸ್ಟೋರ್, Amazon, Flipkart ಮತ್ತು ಅಧಿಕೃತ ಚಿಲ್ಲರೆ ಅಂಗಡಿಗಳಿಂದ ಖರೀದಿಸಬಹುದು. ಆಯ್ದ ಬ್ಯಾಂಕ್‌ಗಳಿಂದ ಗ್ರಾಹಕರು 1,500 ರೂ. ವರೆಗೆ ಕ್ಯಾಶ್‌ಬ್ಯಾಕ್ ಮತ್ತು ಆರು ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಪಡೆಯಬಹುದು.

ಇದನ್ನೂ ಓದಿ : ಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

Oppo A59 5G : Oppo 5G smartphone launched in the market at a very low price

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular