50MP ಕ್ಯಾಮೆರಾ, 5,000mAh ಬ್ಯಾಟರಿ : ಕೇವಲ 6,799 ರೂ.ಗೆ ಸಿಗುತ್ತೆ ರೆಡ್‌ಮೀ 12C ಸ್ಮಾರ್ಟ್‌ಫೋನ್

Redmi 12C smartphone : ರೆಡ್‌ ಮೀ ಕಂಪೆನಿ ಈ ಸ್ಮಾರ್ಟ್‌ಪೋನ್‌ ಮೇಲೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಈ ಡಿಸ್ಕೌಂಟ್‌ ಕೇಳಿದ್ರೆ ನಿಮಗೆ ನಿಜಕ್ಕೂ ಅಚ್ಚರಿಯಾಗಲಿದೆ. Redmi 12C ಸ್ಮಾರ್ಟ್‌ಪೋನ್‌ ಖರೀದಿಯ ಮೇಲೆ ಶೇ.51ರಷ್ಟು ವಿಶೇಷ ರಿಯಾಯಿತಿ ಘೋಷಿಸಿದೆ

Redmi 12C smartphone : ಸ್ಮಾರ್ಟ್‌ಪೋನ್‌ ಖರೀದಿಸುವ ಪ್ಲ್ಯಾನ್‌ ಇದ್ದರೆ, ಕೂಡಲೇ ಖರೀದಿಸಿ ಯಾಕೆಂದ್ರೆ ಹಲವು ಕಂಪೆನಿಗಳು ಸ್ಮಾರ್ಟ್‌ಪೋನ್‌ ಮೇಲೆ ಭರ್ಜರಿ ಆಫರ್‌ ಘೋಷಣೆ ಮಾಡಿವೆ. ಅದ್ರಲ್ಲೂ ರೆಡ್‌ಮೀ ಕಂಪೆನಿಯು ರೆಡ್‌ಮೀ12 ಸಿ Redmi 12C ಸ್ಮಾರ್ಟ್‌ಫೋನ್ ಮೇಲೆ ಶೇ.51ರಷ್ಟು ವಿಶೇಷ ರಿಯಾಯಿತಿ ಘೋಷಣೆ ಮಾಡಿದೆ.

ಅತ್ಯಂತ ಕಡಿಮೆ ಬೆಲೆಗೆ ಮಾರುಕಟ್ಟೆಗೆ ಎಂಟ್ರಿ ಕೊಟ್ಟಿರುವ ರೆಡ್‌ ಮೀ (Redmi 12C) ಸ್ಮಾರ್ಟ್ ಫೋನ್ ಇದೀಗ ಭಾರೀ ಡಿಸ್ಕೌಂಟ್ ನೀಡುತ್ತಿದೆ. ಅದ್ರಲ್ಲೂ ಈ ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ನಲ್ಲಿ ಅತೀ ಹೆಚ್ಚು ರಿಯಾಯಿತಿಯನ್ನು ನೀಡಲಾಗುತ್ತಿದೆ. 4GB RAM + 64 GB ಸಂಗ್ರಹಣ ಸಾಮರ್ಥ್ಯದ ಆಯ್ಕೆಯನ್ನು ಹೊಂದಿದೆ.

Redmi 12C smartphone 50MP camera 5,000mAh battery available for just Rs 6,799
Image Credit to Original Source

ರೆಡ್‌ ಮೀ ಕಂಪೆನಿ ಈ ಸ್ಮಾರ್ಟ್‌ಪೋನ್‌ ಮೇಲೆ ಭರ್ಜರಿ ಆಫರ್‌ ಘೋಷಣೆ ಮಾಡಿದೆ. ಈ ಡಿಸ್ಕೌಂಟ್‌ ಕೇಳಿದ್ರೆ ನಿಮಗೆ ನಿಜಕ್ಕೂ ಅಚ್ಚರಿಯಾಗಲಿದೆ. Redmi 12C ಸ್ಮಾರ್ಟ್‌ಪೋನ್‌ ಖರೀದಿಯ ಮೇಲೆ ಶೇ.51ರಷ್ಟು ವಿಶೇಷ ರಿಯಾಯಿತಿ ಘೋಷಿಸಿದೆ. ರೆಡ್‌ ಮೀ 12C ಸ್ಮಾರ್ಟ್‌ಫೋನ್ ಮಾರುಕಟ್ಟೆ ಬೆಲೆ ರೂ 13,999 ಇದೆ.

ಇದನ್ನೂ ಓದಿ : OTP ಇಲ್ಲದೇ ಖಾಲಿಯಾಗುತ್ತೆ ನಿಮ್ಮ ಬ್ಯಾಂಕ್‌ ಖಾತೆಯ ಹಣ : ತಪ್ಪದೇ ಈ ಕೆಲಸ ಇಂದೇ ಮಾಡಿ ಮುಗಿಸಿ

ಆದರೆ ಈ ಸ್ಮಾರ್ಟ್‌ಫೋನ್ ಮೇಲೆ ಫ್ಲಿಪ್‌ಕಾರ್ಟ್ 51% ರಿಯಾಯಿತಿ ನೀಡಲಾಗಿದೆ. ಹಾಗಾಗಿ ಈ ಫೋನ್ ನಿಮಗೆ ಕೇವಲ 6,799 ರೂ.ಗಳಲ್ಲಿ ಲಭ್ಯವಿರುತ್ತದೆ.‌ ನೀವೇನಾದ್ರೂ 10000 ರೂ. ಒಳಗೆ ಬೆಸ್ಟ್‌ ಸ್ಮಾರ್ಟ್‌ಫೋನ್ ಖರೀದಿಸಲು ಯೋಚಿಸಿದ್ದರೆ ಇದು ಉತ್ತಮ ಆಯ್ಕೆಯಾಗಿರಲಿದೆ. ಪ್ಲಿಪ್‌ ಕಾರ್ಟ್‌ ಮಾತ್ರವಲ್ಲ ವಿವಿಧ ಬ್ಯಾಂಕುಗಳು ಕೂಡ ಸ್ಮಾರ್ಟ್‌ಪೋನ್‌ ಖರೀದಿಯ ಮೇಲೆ ಇನ್ನಷ್ಟು ಆಫರ್‌ ನೀಡುತ್ತಿವೆ.

ರೆಡ್‌ಮೀ (Redmi 12C) ಸ್ಮಾರ್ಟ್‌ಫೋನ್ ವೈಶಿಷ್ಟ್ಯಗಳು

Redmi 12C ಸ್ಮಾರ್ಟ್‌ಫೋನ್ 6.71-ಇಂಚಿನ ಪೂರ್ಣ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1650 × 720 ಫಿಕ್ಸೆಲ್‌ ಗಳ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದರಿಂದಾಗಿ ವಿಡಿಯೋ ಹಾಗೂ ಪೋಟೋಗಳನ್ನು ನೀವು 20.6:9 ಆಕಾರ ಅನುಪಾತದಲ್ಲಿ ವೀಕ್ಷಣೆ ಮಾಡಬಹುದು. 500 ನಿಟ್ಸ್ ಬ್ರೈಟ್ನೆಸ್ ಜೊತೆಗೆ ಸಣ್ಣ ಡಿವಿ ಡ್ರಾಪ್ ನಾಚ್ ವಿನ್ಯಾಸವನ್ನು ಹೊಂದಿದೆ.

ಇದನ್ನೂ ಓದಿ : ಭರ್ಜರಿ ಡಿಸ್ಕೌಟ್‌ : ಅರ್ಧ ಬೆಲೆಗೆ ಸಿಗಲಿದೆ Vivo V27 5G 12GB RAM ಸ್ಮಾರ್ಟ್‌ಪೋನ್‌

Redmi 12C ಸ್ಮಾರ್ಟ್‌ಫೋನ್ MediaTek Helio G85 SoC ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಇದು Android 12 OS ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 4GB RAM + 64 GB ಮತ್ತು 6GB + 128GB ಆಂತರಿಕ ಸಂಗ್ರಹಣೆಯ ರೂಪಾಂತರ ಸಾಮರ್ಥ್ಯದ ಆಯ್ಕೆಗಳನ್ನು ಸಹ ಹೊಂದಿದೆ. ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ವಿಸ್ತರಣೆ ಮಾಡಬಹುದಾಗಿದೆ.

Redmi 12C smartphone 50MP camera 5,000mAh battery available for just Rs 6,799
Image Credit to Original Source

Redmi 12C ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಪಡೆಯುತ್ತದೆ. ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸಂವೇದಕವನ್ನು ಹೊಂದಿದೆ. ಎರಡನೇ ಕ್ಯಾಮರಾವನ್ನು AI ಕ್ಯಾಮರಾ ಎಂದು ಗುರುತಿಸಲಾಗಿದೆ. ಇದಲ್ಲದೆ, 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

ಇದನ್ನೂ ಓದಿ : UPI ಪಾವತಿಯಲ್ಲಿ ಬಾರೀ ಬದಲಾವಣೆ : ಮೋದಿ ಸರಕಾರದಿಂದ ಹೊಸ ರೂಲ್ಸ್‌ ಜಾರಿ

Redmi 12C ಸ್ಮಾರ್ಟ್‌ಫೋನ್ 5,000mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 10W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇತರ ಸಂಪರ್ಕ ಆಯ್ಕೆಗಳಲ್ಲಿ 4G/5G VOLTE, Wi-Fi, Bluetooth v5.0, USB Type-C, ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಸೇರಿವೆ. ಇದಲ್ಲದೆ, ಹೈಬ್ರಿಡ್ ಸಿಮ್ ಸ್ಲಾಟ್, ಅಕ್ಸೆಲೆರೊಮೀಟರ್, ಹಿಂಭಾಗದ ಫಿಂಗರ್‌ಪ್ರಿಂಟ್ ಸೆನ್ಸಾರ್ ಅನ್ನು ಸಹ ನೀಡಲಾಗಿದೆ.

Redmi 12C smartphone 50MP camera 5,000mAh battery available for just Rs 6,799

Comments are closed.