ಡಿಜಿಟಲ್ ಯುಗ ಬಂದಮೇಲೆ ಪೇಮೆಂಟ್ (Online Payment) ಮಾಡಲು ಹೊಸ ಅವಕಾಶವೊಂದು ತೆರೆದಿಟ್ಟಿದೆ. ಹಣವನ್ನು ನಗದು ರೂಪದಲ್ಲಿ ನೀಡದೇ ಡಿಜಿಟಲ್ ಮೂಲಕ ಕುಳಿತಲ್ಲಿಂದಲೆ ವರ್ಗಾಯಿಸುವ ರೂಡಿ ಬಹುತೇಕರಲ್ಲಿ ಬೆಳೆದುಬಿಟ್ಟಿದೆ. ಆದರೆ ಡಿಜಿಟಲೀಕರಣದ ಮೂಲಕ ಹಣ ಪಾವತಿಸುವ ಈ ರೂಢಿಯು ಆನ್‌ಲೈನ್ ವಂಚನೆಗಳಿಗೂ ಸಾಕ್ಷಿಯಾಗುವ ಸಾಧ್ಯತೆಗಳಿವೆ. ಸೈಬರ್ ಆನ್‌ಲೈನ್ ವಂಚನೆಗಳು (Cyber Fraud) ಪ್ರತಿದಿನವೂ ಎಗ್ಗಿಲ್ಲದೇ ನಡೆಯುತ್ತಿದೆ. ಹಣ ವರ್ಗಾವಣೆಯ ವೇಳೆ ವಂಚನೆಗೆ ಒಳಗಾಗದಿರಲು ಪೇಟಿಎಂ ( Paytm Fake App Alert )ತನ್ನ ಬಳಕೆದಾರರಿಗೆ ಕೆಲವೊಂದು ಸಲಹೆಗಳನ್ನು ನೀಡಿದೆ. ಏಕೆಂದರೆ ಪೇಟಿಎಂ ಹೆಸರಲ್ಲಿ ನಕಲಿ ಅಪ್ಲಿಕೇಶನ್‌ಗಳು ಹರಿದಾಡುತ್ತಿವೆ.
Google Pay (GPay), PhonePe, Paytm ಮುಂತಾದ ಆನ್‌ಲೈನ್ ಹಣ ವರ್ಗಾವಣೆ ಅಪ್ಲಿಕೇಶನ್‌ಗಳನ್ನು ಜನರು ಪ್ರತಿನಿತ್ಯ ಬಳಸುವುದರಿಂದ ಈ ಅಪ್ಲಿಕೇಶನ್‌ಗಳೇ ಸೈಬರ್ ಕಳ್ಳತನ ಮಾಡುವವರಿಗೆ ದಾರಿಯಾಗಿದೆ. ಹಣವನ್ನು ಲಪಟಾಯಿಸುವ ಉದ್ದೇಶದಿಂದ ಇಂತಹ ಆನ್‌ಲೈನ್ ಹಣ ಪಾವತಿ ಅಪ್ಲಿಕೇಶನ್ ಬಳಕೆದಾರರಿಗೆ ನಕಲಿ ಕರೆಗಳನ್ನು ಮಾಡುವುದು, ನಕಲಿ ವೆಬ್‌ಸೈಟ್‌ಗಳಿಗೆ ಲಿಂಕ್‌ಗಳೊಂದಿಗೆ ನಕಲಿ ಮೇಲ್‌ಗಳನ್ನು ಕಳುಹಿಸುವುದು ಸೇರಿದಂತೆ ಜನರನ್ನು ವಂಚಿಸಲು ವಿವಿಧ ವಿಧಾನಗಳನ್ನು ಸೈಬರ್ ವಂಚಕರು ಬಳಸುತ್ತಿದ್ದಾರೆ.
- ಮೋಸದ ಅಪ್ಲಿಕೇಶನ್‌ಗಳ ಬಗ್ಗೆ ಎಚ್ಚರದಿಂದಿರಿ: ಗೂಗಲ್ ಪ್ಲೇ ಸ್ಟೋರ್ ಮತ್ತು ಆಪ್ ಸ್ಟೋರ್‌ನಲ್ಲಿ ಆನ್‌ಲೈನ್ ಮೂಲಕ ಹಣ ಪಾವತಿಸುಬಹುದಾದ ಅನೇಕ ನಕಲಿ ಅಪ್ಲಿಕೇಶನ್‌ಗಳಿವೆ. ನಾವು ಯಾವುದೇ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮುನ್ನ ಅದರ ಕುರಿತು ಈಗಾಗಲೇ ಬಳಕೆ ಮಾಡಿದವರು ಎಂತವ ರಿವ್ಯೂ ಬರೆದಿದ್ದಾರೆ ಎಂದು ಗಮನಿಸಬೇಕು. ಅತಿ ಕಡಿಮೆ ಡೌನ್‌ಲೋಡ್, ನೆಗೆಟಿವ್ ರಿವ್ಯೂ ಅಥವಾ ಕಮೆಂಟ್‌ಗಳ ಮೂಲಕ ಜನರು ತಮಗೆ ಅಪ್ಲಿಕೇಶನ್‌ನಿಂದ ಆದ ಅನುಭವವನ್ನು ದಾಖಲಿಸಿರುತ್ತಾರೆ. ಅಪ್ಲಿಕೇಶನ್ ಡೌನ್‌ಲೋಡ್ ಮಾಡುವಾಗ, ಅದನ್ನು ಆಪ್ ಸ್ಟೋರ್ ಅಥವಾ ಪ್ಲೇ ಸ್ಟೋರ್‌ನಲ್ಲಿ ಸುರಕ್ಷಿತ ಎಂದು ಪರಿಗಣಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
- ಯಾವುದೇ ಕಾರಣಕ್ಕೂ ಯಾರಿಗೂ ನಿಮ್ಮ ಪಾಸ್‌ವರ್ಡ್ ಹೇಳಬೇಡಿ: ಇದು ಬಹಳ ಮುಖ್ಯವಾದ ಸುರಕ್ಷತಾ ಸೂತ್ರ. ಎಂದಿಗೂ ನಿಮ್ಮ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಎಷ್ಟೇ ಆಪ್ತರಿರಲಿ, ನಿಮ್ಮ ಪಾಸ್‌ವರ್ಡ್ ನಿಮಗೆ ಮಾತ್ರ ತಿಳಿದಿರಲಿ. ಯುಪಿಐ ಪಿನ್‌ಗಳನ್ನು ಇತರರಿಗೆ ತಿಳಿಸುವುದು ಬೇಡವೇ ಬೇಡ. ನೀವು ಪಾವತಿಸುವ ಕಾರ್ಡ್ ವಿವರಗಳನ್ನು ಪಾವತಿ ಸಂದರ್ಭದಲ್ಲಿ ಸೇವೆ ಮಾಡಬೇಡಿ: ಯಾವುದೇ ಆನ್‌ಲೈನ್ ಅಪ್ಲಿಕೇಶನ್‌ಗಳನ್ನು ಬಳಸಿಕೊಂಡು ಕಾರ್ಡ್ ಪಾವತಿಗಳನ್ನು ಮಾಡುವಾಗ ನೀವು ಕಾರ್ಡ್ ವಿವರಗಳನ್ನು ಸೇವೆ ಮಾಡಬಾರದು. ನೀವು ವಿವರಗಳನ್ನು ಉಳಿಸಿದರೆ, ನೀವು ನಂತರ ವಿವರಗಳನ್ನು ಅಳಿಸಬಹುದು.
ಆನ್‌ಲೈನ್ ಅಪ್ಲಿಕೇಶನ್ ಮೂಲಕ ಹಣ ಪಾವತಿಸುವಾಗ ಬಹಳ ಎಚ್ಚರಿಕೆಯಿಂದಿರಬೇಕು. ವಂಚನೆ ಅಥವಾ ನಕಲಿ ಇಮೇಲ್‌ಗಳು ಮತ್ತು ಸಂದೇಶಗಳು ಇನ್‌ಬಾಕ್ಸ್‌ಗೆ ಬಂದಾಗಲಂತೂ ಅವುಗಳ ಸುದ್ದಿಗೇ ಹೋಗಬಾರದು. ಬಹಳ ಜಾಗರೂಕರಾಗಿರಬೇಕು. ಮೆಸೆಜ್ ಮೂಲಕ ಭರವಸೆ ಅಥವಾ ಆಮಿಶಗಳನ್ನು ಕಳಿಸಿ ವಂಚಿಸುವ ಅಪಾಯವು ಆನ್‌ಲೈನ್ ಅಪ್ಲಿಕೇಶನ್‌ಗಳಲ್ಲಿ ಆಗುತ್ತದೆ. ಹೀಗಾಗಿ ಅಪರಿಚಿತರು ಕಳುಹಿಸಿದ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು.
ಇದನ್ನೂ ಓದಿ: KMF BAMUL Recruitment: ಇಲ್ಲಿದೆ ಉದ್ಯೋಗಾವಕಾಶ, 97,100 ರೂ. ವೇತನ : ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ
(Paytm Fake App Alert scam how to stay safe from online fraud)