Engineering Student Suicide : ಸುರತ್ಕಲ್‌ ಇಂಜಿನಿಯರಿಂಗ್‌ ವಿದ್ಯಾರ್ಥಿ ಆತ್ಮಹತ್ಯೆ

ಮಂಗಳೂರು : ದೇಹದಲ್ಲಿ ಕೆಮಿಕಲ್‌ ರಿಯಾಕ್ಷನ್‌ ಆಗುತ್ತಿದ್ದು, ಶೈಕ್ಷಣಿಕ ಸಾಲ ತೀರಿಸಲಾಗುತ್ತಿಲ್ಲ ಅನ್ನೋ ಭಯದಿಂದಲೇ ಇಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿ ಓರ್ವ ಆತ್ಮಹತ್ಯೆ (Engineering Student Suicide) ಮಾಡಿಕೊಂಡಿರುವ ಘಟನೆ ಮಂಗಳೂರು ಹೊರವಲಯದ ಸುರತ್ಕಲ್‌ನಲ್ಲಿ ನಡೆದಿದೆ.

ಬಿಹಾರದ ಜಮುಯಿ ಜಿಲ್ಲೆಯ ಓರೈಯಾ ಗ್ರಾಮದ ನಿವಾಸಿ ಸೌರವ್‌ (19ವರ್ಷ) ಎಂಬಾತನೇ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಸೌರವ್‌ ಸುರತ್ಕಲ್‌ನ ಎನ್‌ಐಟಿಕೆ ಕಾಲೇಜಿನಲ್ಲಿ ಎರಡನೇ ವರ್ಷದ ಇಂಜಿಯರಿಂಗ್‌ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದ. ಆದರೆ ಇಂದು ಡೆತ್‌ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬೆಳಗ್ಗೆ ರೂಮಿನ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಕಿಟಕಿಯಲ್ಲಿ ನೋಡಿದಾಗಿ ಸೌರವ್‌ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನಾ ಸ್ಥಳದಲ್ಲಿ ಮಂಗಳೂರು ನಗರ ಪೊಲೀಸ್‌ ಆಯುಕ್ತರಾದ ಎನ್.ಶಶಿಕುಮಾರ್‌ ಅವರು ಭೇಟಿ ಮಾಹಿತಿ ಕಲೆಹಾಕಿದ್ದಾರೆ.

ನನ್ನ ದೇಹದಲ್ಲಿ ಕೆಮಿಕಲ್‌ ರಿಯಾಕ್ಷನ್‌ ಆಗುತ್ತಿದೆ. ವಿದ್ಯಾಭ್ಯಾಸ ಮುಗಿದ ಮೇಲೆ ಕೆಲಸ ಸಿಗುತ್ತೋ ಇಲ್ಲವೋ ಎಂಬ ಭಯ ಕಾಡುತ್ತಿದೆ. ನನ್ನ ಆತ್ಮಹತ್ಯೆಗೆ ನಾನೇ ಕಾರಣ ಎಂದು ಡೆತ್‌ನೋಟ್‌ನಲ್ಲಿ ಬರೆದಿದ್ದು, ನನ್ನ ಸಾವಿನ ಸುದ್ದಿಯನ್ನು ಪೋಷಕರಿಗೆ ತಿಳಿಸಿ ಎಂದು ಉಲ್ಲೇಖಿಸಿದ್ದಾನೆ ಎಂದು ನಗರ ಪೊಲೀಸ್‌ ಆಯುಕ್ತರಾಗಿರುವ ಎನ್.‌ ಶಶಿಕುಮಾರ್‌ ಅವರು ತಿಳಿಸಿದ್ದಾರೆ.

ಘಟನೆ ನಡೆಯುತ್ತಿದ್ದಂತೆಯೇ ಕಾಲೇಜಿನ ಆಡಳಿತ ಮಂಡಳಿ ಸೌರವ್‌ ಪೋಷಕರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಆರ್ಥಿಕ ಸಂಕಷ್ಟದಿಂದಾಗಿ ಮೃತದೇಹವನ್ನು ಊರಿಗೆ ತಂದು ಅಂತ್ಯಕ್ರೀಯೆ ನಡೆಸಲು ಸಾಧ್ಯವಿಲ್ಲ. ಹೀಗಾಗಿ ನೀವೇ ಅಂತ್ಯಕ್ರೀಯೆ ನಡೆಸುವಂತೆ ತಿಳಿಸಿದ್ದಾರೆ. ಆದರೆ ಕಾಲೇಜಿನ ಆಡಳಿತ ಮಂಡಳಿ ಹಾಗೂ ವಿದ್ಯಾರ್ಥಿಗಳ ಸಹಕಾರದಿಂದಾಗಿ ಸೌರವ್‌ ಪೋಷಕರನ್ನು ಕಾಲೇಜಿಗೆ ಕರೆಯಿಸಿ ಮೃತ ದೇಹಲವನ್ನು ಊರಿಗೆ ಕಳುಹಿಸುವ ಕಾರ್ಯವನ್ನು ಮಾಡಲಾಗಿದೆ. ಈ ಕುರಿತು ಸುರತ್ಕಲ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ : Uttarakhand :ಅಂಕಲ್​ ಎಂದು ಕರೆದಿದ್ದಕ್ಕೆ ರೋಷಾವೇಷ..!ವಿದ್ಯಾರ್ಥಿನಿಯ ತಲೆಗೆ ಜಜ್ಜಿ ಆಕ್ರೋಶ

ಇದನ್ನೂ ಓದಿ : Gangrape Instagram Friend: ಚಲಿಸುತ್ತಿದ್ದ ಕಾರಿನಲ್ಲಿ 18 ವರ್ಷದ ಯುವತಿ ಮೇಲೆ ಅತ್ಯಾಚಾರವೆಸಗಿದ ಇನ್‌ಸ್ಟಾಗ್ರಾಂ ಗೆಳೆಯ

ಇದನ್ನೂ ಓದಿ : 22 Crore Stolen Passwords : ಬರೋಬ್ಬರಿ 22 ಕೋಟಿ ಪಾಸ್​ವರ್ಡ್​ಗಳು ಸೋರಿಕೆ..! ನಿಮ್ಮ ಖಾತೆಯೂ ಆಗಿರಬಹುದು ಹ್ಯಾಕ್​​​

(Surathkal Engineering College Student In Mangalore Commits Suicide)

Comments are closed.