Pebble Smartwatch : ಓರಿಯನ್ ಮತ್ತು ಸ್ಪೆಕ್ಟ್ರಾ ಎಂಬ ಎರಡು ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸಿದ ಪೆಬ್ಬಲ್‌!

ಪೆಬ್ಬಲ್ (Pebble) ಓರಿಯನ್ ಮತ್ತು ಸ್ಪೆಕ್ಟ್ರಾ ಎಂಬ ಎರಡು ಸ್ಮಾರ್ಟ್‌ವಾಚ್‌ಗಳನ್ನು (Smartwatch) ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಸ್ಮಾರ್ಟ್ ವಾಚ್‌ಗಳ (Pebble Smartwatch) ಶ್ರೇಣಿಯನ್ನು ವಿಸ್ತರಿಸಿದೆ. ಪೆಬ್ಬಲ್ ಓರಿಯನ್ ಚೌಕಾಕಾರದ್ದಾಗಿದ್ದರೆ, ಪೆಬ್ಬಲ್ ಸ್ಪೆಕ್ಟ್ರಾ ವೃತ್ತಾಕಾರದ ಡಯಲ್ ದ್ದಾಗಿದೆ. ಪೆಬ್ಬಲ್ ನ ಈ ಎರಡೂ ಸ್ಮಾರ್ಟ್‌ವಾಚ್‌ಗಳು ಬಜೆಟ್ ಫ್ರೆಂಡ್ಲಿಯಾಗಿವೆ. ಬ್ಲೂಟೂತ್ ಧ್ವನಿ ಕರೆ ಇದರ ವೈಶಿಷ್ಟ್ಯವಾಗಿದೆ. ಬಳಕೆದಾರರು ಕೈಗೆ ಧರಿಸಿಯೇ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಇದು ಅನುವು ಮಾಡಿಕೊಡುತ್ತದೆ.

ಪೆಬ್ಬಲ್ ಓರಿಯನ್ ವೈಶಿಷ್ಟ್ಯಗಳು :
ಪೆಬ್ಬಲ್ ಓರಿಯನ್ 1.81-ಇಂಚಿನ ಚೌಕಾಕಾರದ 240 x 286 ಪಿಕ್ಸೆಲ್‌ಗಳ ರೆಸಲ್ಯೂಶನ್ ನೀಡುತ್ತದೆ. ಸ್ಮಾರ್ಟ್ ವಾಚ್‌ ಅನ್ನು ಸತು ಮಿಶ್ರಲೋಹದಿಂದ ತಯಾರಿಸಲಾಗಿದೆ. ಮುಖ್ಯವಾಗಿ, ಧರಿಸಬಹುದಾದ ಸ್ಮಾರ್ಟ್‌ವಾಚ್‌ ಸ್ವಯಂ ಸ್ಪೀಕರ್ ಕ್ಲೀನರ್ ವೈಶಿಷ್ಟ್ಯವನ್ನು ಹೊಂದಿದೆ, ಮತ್ತುಸಾಧನದಲ್ಲಿನ ತೇವಾಂಶವನ್ನು ಸ್ವಚ್ಛಗೊಳಿಸಲು ಆಡಿಯೊ ಟ್ಯೂನ್ ಅನ್ನು ಬಳಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ.

ಪೆಬ್ಬಲ್ ಓರಿಯನ್ 120 ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ನೀಡುತ್ತದೆ. ಈ ಸ್ಮಾರ್ಟ್‌ವಾಚ್‌ ಬಿಲ್ಟ್‌–ಇನ್‌ ಮೈಕ್ರೊಫೋನ್ ಮತ್ತು ಸ್ಪೀಕರ್ ಅನ್ನು ಹೊಂದಿದೆ. ಬಳಕೆದಾರರು ತಮ್ಮ ಫೋನ್‌ಗಳನ್ನು ಬಳಸದೆಯೇ ಪ್ರಯಾಣದಲ್ಲಿರುವಾಗ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅನುಮತಿನೀಡುತ್ತದೆ. ಧ್ವನಿ ಸಹಾಯಕದ ಬೆಂಬಲದೊಂದಿಗೆ ಈ ಸ್ಮಾರ್ಟ್ ವಾಚ್ ಬಿಲ್ಟ್‌–ಇನ್‌ ಆಟಗಳನ್ನು ಹೊಂದಿದೆ. IP67 ಪ್ರಮಾಣೀಕರಿಸಿದ ಧೂಳು ಮತ್ತು ನೀರಿನ ಪ್ರತಿರೋಧಕ ಹೊಂದಿದೆ. ಸಾಧನವನ್ನು ಬಹಳಷ್ಟು ವೈಶಿಷ್ಟ್ಯತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ. ಆರೋಗ್ಯದ ಕಾಳಜಿವಹಿಸುವವರಿಗೆ , ಪೆಬ್ಬಲ್ ಓರಿಯನ್ ಹೃದಯ ಬಡಿತ ಸಂವೇದಕವನ್ನು ಹೊಂದಿದ್ದು ಅದನ್ನು 24×7 ಟ್ರ್ಯಾಕ್ ಮಾಡಬಹುದು. ರಕ್ತದ ಆಮ್ಲಜನಕದ ಶುದ್ಧತ್ವ ಅಂದರೆ SpO2 ಸಂವೇದಕ ಆನ್‌ಬೋರ್ಡ್‌ನಲ್ಲಿಯೂ ಇದೆ. ಇದಲ್ಲದೆ, ಇದು ಸ್ಲೀಪ್‌ ಮೊನಿಟರಿಂಗ್‌ ಮತ್ತು ಸ್ತ್ರೀ ಆರೋಗ್ಯ ಟ್ರ್ಯಾಕಿಂಗ್ ಅನ್ನು ಸಹ ಒಳಗೊಂಡಿದೆ. ಬ್ಯಾಟರಿಗೆ ಸಂಬಂಧಿಸಿದಂತೆ, ಈ ಸಾಧನವು 260 mAh ಬ್ಯಾಟರಿಯನ್ನು ಹೊಂದಿದ್ದು, ಒಂದೇ ಚಾರ್ಜ್‌ನಲ್ಲಿ 10 ದಿನಗಳವರೆಗೆ ಇರಬಲ್ಲದಿ ಎಂದು ಹೇಳಲಾಗುತ್ತದೆ.

ಪೆಬ್ಬಲ್ ಸ್ಪೆಕ್ಟ್ರಾ ವೈಶಿಷ್ಟ್ಯಗಳು :
ಪೆಬ್ಬಲ್ ಸ್ಪೆಕ್ಟ್ರಾಗೆ ಸಂಬಂಧಿಸಿದಂತೆ ಈ ಸ್ಮಾರ್ಟ್ ವಾಚ್ ಚಿಕ್ಕದಾದ 1.35-ಇಂಚಿನ AMOLED ವೃತ್ತಾಕಾರದ ಡಿಸ್ಪ್ಲೆಯೊಂದಿಗೆ ಬರುತ್ತದೆ. ಇದು 390 x 390 ಪಿಕ್ಸೆಲ್‌ಗಳ ರೆಸಲ್ಯೂಶನ್ ಮತ್ತು 600 ನಿಟ್‌ಗಳ ಗರಿಷ್ಠ ಹೊಳಪನ್ನು ಒದಗಿಸುತ್ತದೆ. ಹೆಚ್ಚುವರಿಯಾಗಿ,ಇದರ ಸ್ಕ್ರೀನ್‌ ಯಾವಾಗಲೂ ಆನ್ ಡಿಸ್ಪ್ ಮೋಡ್‌ನಲ್ಲಿಯೇ ಇರುತ್ತದೆ. ಓರಿಯನ್‌ನಂತೆಯೇ, ಸ್ಪೆಕ್ಟ್ರಾವು ಸಹ ಸತು ಮಿಶ್ರಲೋಹದಿಂದ ತಯಾರಾಗಿದೆ. ಮತ್ತು ತಿರುಗುವ ಬಟನ್ ಅನ್ನು ಹೊಂದಿದೆ. ಇದು ಬ್ಲೂಟೂತ್ ಕರೆ ವೈಶಿಷ್ಟ್ಯ ಮತ್ತು AI- ಸಕ್ರಿಯಗೊಳಿಸಿದ ಧ್ವನಿ ಸಹಾಯಕ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಪೆಬ್ಬಲ್ ಸ್ಪೆಕ್ಟ್ರಾದ ಆರೋಗ್ಯ ಮತ್ತು ಕ್ರೀಡಾ ವೈಶಿಷ್ಟ್ಯಗಳು ಓರಿಯನ್ ಮಾದರಿಯನ್ನು ಹೋಲುತ್ತದೆ. ಆದರೆ, ಇದು ಒಂದು ದೊಡ್ಡ 300 mAh ಬ್ಯಾಟರಿ ಚಲಿಸುತ್ತಿದ್ದು, ಒಂದೇ ಚಾರ್ಜ್‌ನಲ್ಲಿ 30 ದಿನಗಳವರೆಗೆ ಸ್ಟ್ಯಾಂಡ್‌ಬೈ ಸಮಯವನ್ನು ಒದಗಿಸುತ್ತದೆ.

ಪೆಬ್ಬಲ್ ಓರಿಯನ್ ಮತ್ತು ಸ್ಪೆಕ್ಟ್ರಾ ದ ಬೆಲೆ ಮತ್ತು ಲಭ್ಯತೆ :
ಮೊದಲೇ ಹೇಳಿದಂತೆ ಪೆಬ್ಬಲ್ ಓರಿಯನ್ ಮತ್ತು ಪೆಬಲ್ ಸ್ಪೆಕ್ಟ್ರಾ ಇವೆರಡೂ ಬಜೆಟ್‌ ಫ್ರೆಂಡ್ಲೀ ವಾಚ್‌ಗಳಾಗಿವೆ. ಪೆಬ್ಬಲ್ ಓರಿಯನ್ ಆರಂಭಿಕ ಮಾರಾಟದ ಬೆಲೆಯು ರೂ. 3,499, ಆದರೆ ಪೆಬ್ಬಲ್ ಸ್ಪೆಕ್ಟ್ರಾ ಸದ್ಯಕ್ಕೆ ರಿಯಾಯಿತಿ ದರದಲ್ಲಿ ರೂ. 5,499 ಸಿಗಲಿದೆ.

ಇದನ್ನೂ ಓದಿ : Which Car is Best : ಯಾವ ಕಾರ್‌ ಬೆಸ್ಟ್‌ ? ಪೆಟ್ರೋಲ್‌, ಡೀಸಲ್‌, ಹೈಬ್ರಿಡ್‌, CNG ಅಥವಾ EV?

ಇದನ್ನೂ ಓದಿ : Sprite Bottle Color : 60 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಬಣ್ಣ ಬದಲಾಯಿಸಿಕೊಂಡ ಸ್ಪ್ರೈಟ್‌ ಬಾಟಲ್‌!

Pebble Smartwatch launched Orion and Spectra two watches in India

Comments are closed.