ಸೋಮವಾರ, ಜೂನ್ 16, 2025
HometechnologyRealme GT 2 series Release: ಸದ್ಯವೇ ಬಿಡುಗಡೆ ಆಗಲಿದೆ ರಿಯಲ್‌ಮಿ ಜಿಟಿ 2 ಸಿರೀಸ್...

Realme GT 2 series Release: ಸದ್ಯವೇ ಬಿಡುಗಡೆ ಆಗಲಿದೆ ರಿಯಲ್‌ಮಿ ಜಿಟಿ 2 ಸಿರೀಸ್ ಸ್ಮಾರ್ಟ್‌ಫೋನ್‌ಗಳು; ವಿಶೇಷತೆಗಳೇನು?

- Advertisement -

ರಿಯಲ್‌ಮಿ ಇಂಟರ್‌ನ್ಯಾಶನಲ್‌ನ ಬ್ಯುಸಿನೆಸ್ ಹೆಡ್ ಮಾಧವ್ ಶೇತ್ ಅವರು ಇತ್ತೀಚೆಗೆ ಸಂದರ್ಶನವೊಂದನ್ನು ನೀಡಿದ್ದಾರೆ. ಅದರಲ್ಲಿ ಅವರು ಚೀನಾದ (China) ಹೊರಗೆ ರಿಯಲ್ ಮಿ ಜಿಟಿ2 ಪ್ರೊ (Realme GT 2 Pro) ಬಿಡುಗಡೆಯ ಬಗ್ಗೆ ಸುಳಿವು ನೀಡಿದ್ದಾರೆ. ಈ ವಾರದ ಆರಂಭದಲ್ಲಿ, ರಿಯಲ್‌ಮಿ ತನ್ನ ಇತ್ತೀಚಿನ ಪ್ರಮುಖ ಸ್ಮಾರ್ಟ್‌ಫೋನ್‌ಗಳಾದ ಜಿಟಿ2 ಮತ್ತು ಜಿಟಿ2 ( Realme GT2 Pro) ಪ್ರೊ ಅನ್ನು ಘೋಷಿಸಿತು ಮತ್ತು ಈಗ ಜಿಎಸ್ಎಂ ಅರೆನಾ ಪ್ರಕಾರ, ಜಿಟಿ2 ಸರಣಿಯು ಶೀಘ್ರದಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದೆ ಎಂದು ಮಾಧವ್ ಶೇತ್ (Madhav Sheth) ದೃಢಪಡಿಸಿದ್ದಾರೆ.

ರಿಯಲ್ ಮಿ ಜಿಟಿ2 ಸರಣಿಯನ್ನು ಪಡೆಯುವ ಮೊದಲ ಜಾಗತಿಕ ಮಾರುಕಟ್ಟೆ ಭಾರತವಾಗಲಿದೆ ಎಂದು ಶೇತ್ ಹೇಳಿದ್ದಾರೆ. ಇದಲ್ಲದೆ, ಈ ವರ್ಷ ಹೊಸ ಆಂಡ್ರಾಯ್ಡ್ ಟ್ಯಾಬ್ಲೆಟ್‌ಗಳು ಮತ್ತು ವಿಂಡೋಸ್ ಲ್ಯಾಪ್‌ಟಾಪ್‌ಗಳ ಸರಣಿಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಖಚಿತಪಡಿಸಿದ್ದಾರೆ. ಆದರೆ, ಅವರು ಯಾವುದೇ ನಿರ್ದಿಷ್ಟ ದಿನಾಂಕವನ್ನು ಬಹಿರಂಗಪಡಿಸಿಲ್ಲ. ಇಂಟೆಲ್‌ನ ಇತ್ತೀಚಿನ 12 ನೇ-ಜೆನ್ ಎಚ್ ಸರಣಿಯ ಚಿಪ್‌ಗಳಿಂದ ನಡೆಸಲ್ಪಡುವ ಲ್ಯಾಪ್‌ಟಾಪ್ ಅನ್ನು ಬಿಡುಗಡೆ ಮಾಡುವ ಮೊದಲ ಬ್ರಾಂಡ್‌ಗಳಲ್ಲಿ ಇದು ಒಂದಾಗಿದೆ ಎಂದು ರಿಯಲ್‌ ಮಿ ಈಗಾಗಲೇ ದೃಢಪಡಿಸಿದೆ.

ಸ್ಪೆಸಿಫಿಕೇಶನ್
ರಿಯಲ್‌ಮಿ ಜಿಟಿ 2 6.62-ಇಂಚಿನ ಸ್ಯಾಮ್ ಸಂಗ್ ಇ4 ಅಮೋಲ್ಡ್ ಡಿಸ್ಪ್ಲೇ ಜೊತೆಗೆ 120 ಹರ್ಟ್ಸ್ ರಿಫ್ರೆಶ್ ರೇಟ್ ಮತ್ತು ಫುಲ್ ಎಚ್‌ಡಿ+ ರೆಸಲ್ಯೂಶನ್ ಹೊಂದಿದೆ.
ಮತ್ತೊಂದೆಡೆ, ಜಿಟಿ 2 ಪ್ರೊ ಕ್ವಾಲಿಟಿ ಎಚ್‌ಡಿ+ ರೆಸಲ್ಯೂಶನ್ ಮತ್ತು 120 ಹರ್ಟ್ಸ್ ರಿಫ್ರೆಶ್ ದರದೊಂದಿಗೆ 6.7-ಇಂಚಿನ ಎಲ್‌ಟಿಪಿಒ ಅಮೋಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ರಿಯಲ್‌ಮಿ ಜಿಟಿ 2 ಪ್ರೊ ಕ್ವಾಲ್ಕಾಮ್‌ನ ಇತ್ತೀಚಿನ ಸ್ನಾಪ್‌ಡ್ರಾಗನ್ 8 ಜೆನ್ 1 ನಿಂದ ಹಾಗೂ ರಿಯಲ್‌ಮಿ ಜಿಟಿ 2 ಸ್ನಾಪ್‌ಡ್ರಾಗನ್ 888 ನಿಂದ ಚಾಲಿತವಾಗಿದೆ.
ಈ ಎರಡು ಸ್ಮಾರ್ಟ್‌ಫೋನ್‌ಗಳು ಹಿಂಭಾಗದಲ್ಲಿ 50 ಮೆಗಾಪಿಕ್ಸೆಲ್ ಟ್ರಿಪಲ್ ಕ್ಯಾಮೆರಾ ಹೊಂದಿದೆ ಮತ್ತು ಪ್ರೊನಲ್ಲಿ 32 ಮೆಗಾಪಿಕ್ಸೆಲ್ ಸೆಲ್ಫಿ ಮತ್ತು 16 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಎರಡೂ ಸ್ಮಾರ್ಟ್‌ಫೋನ್‌ಗಳು 5,000 ಎಂಎಎಚ್ ಬ್ಯಾಟರಿಯನ್ನು ಹೊಂದಿವೆ ಮತ್ತು 65 ವ್ಯಾಟ್ ವೇಗದ ಚಾರ್ಜಿಂಗ್ ಸಪೋರ್ಟ್ ಮಾಡುತ್ತದೆ.
ಮಾಹಿತಿಗಳ ಪ್ರಕಾರ, ರಿಯಲ್ ಮಿ 9 ಪ್ರೊ ಎಂದು ನಂಬಲಾದ ಹೊಸ ರಿಯಲ್ ಮಿ ಪೋನ್ 5,000 ಎಂ ಎ ಎಚ್ ಬ್ಯಾಟರಿಯೊಂದಿಗೆ ಟಿಯುವಿ ಪ್ರಮಾಣೀಕರಣವನ್ನು ಅಂಗೀಕರಿಸಿದೆ.

ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 ಚಿಪ್‌ಸೆಟ್ ಅನ್ನು ಪ್ಯಾಕ್ ಮಾಡುವ ನಿರೀಕ್ಷೆಯಿದೆ ಆದರೆ ಪ್ರೊ + ಮಾದರಿಯು ಡೈಮೆನ್ಸಿಟಿ 920 ಚಿಪ್‌ನಿಂದ ಚಾಲಿತವಾಗಲಿದ್ದು, ಸರಣಿಯ ಮೂರನೇ ಮಾದರಿಯಾದ ರಿಯಲ್‌ಮೆ 9ಐ ಸ್ನಾಪ್‌ಡ್ರಾಗನ್ 680 ಚಿಪ್‌ಸೆಟ್‌ನೊಂದಿಗೆ ಬರುವ ಸಾಧ್ಯತೆಯಿದೆ. Realme 9 Pro 2 ಮೆಗಾಪಿಕ್ಸೆಲ್ ಆಳ ಸಂವೇದಕ ಮತ್ತು 2 ಮೆಗಾಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಜೊತೆಗೆ 50 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ತರುತ್ತದೆ ಎಂದು ವರದಿಯಾಗಿದೆ

ಇದನ್ನೂ ಓದಿ: What is Ambergris smuggling: ಏನಿದು ಅಂಬರ್‌ಗ್ರೀಸ್ ಎಂಬ ತಿಮಿಂಗಿಲ ವಾಂತಿ? ಇದನ್ನು ಕಳ್ಳಸಾಗಣೆ ಮಾಡುವುದೇಕೆ?

ಇದನ್ನೂ ಓದಿ: real estate 11e sketch: ಕೃಷಿ ಭೂಮಿಯನ್ನು ಸೈಟ್ ಆಗಿ ಪರಿವರ್ತಿಸುವ, ಸೈಟ್ ಖರೀದಿಸುವ ಮುನ್ನ ಗಮನಿಸಲೇಬೇಕಾದ ಅಂಶಗಳಿವು

(Realme GT 2 series to be launch soon confirms Madhav Sheth)

RELATED ARTICLES

Most Popular