ರಿಯಲ್‌ಮಿ (Realme) ಚೀನಾದಲ್ಲಿ ಬಜೆಟ್ ಸ್ಮಾರ್ಟ್‌ಫೋನ್ ರಿಯಲ್‌ಮಿ GT ನಿಯೊ 5 SE (Realme GT Neo 5 SE) ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್ (Smartphone) ನಲ್ಲಿ, ಕಂಪನಿಯು ಸ್ನಾಪ್‌ಡ್ರಾಗನ್ 7 ನೇ ಜನರೇಷನ್ 2 ಚಿಪ್‌ಸೆಟ್, 5500 mAh ಬ್ಯಾಟರಿ ಮತ್ತು 64 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ 144 hz ರಿಫ್ರಿಶ್ ದರ ಅಳವಡಿಸಿದೆ. ಈ ಮೊಬೈಲ್ ಫೋನ್ ಸದ್ಯ ಚೀನಾದಲ್ಲಿ ಮಾತ್ರ ಬಿಡುಗಡೆಯಾಗಿದ್ದು, ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಈ ಮೊಬೈಲ್ ಫೋನ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ವಿವಿರ ಇಲ್ಲಿದೆ ಓದಿ.
ಬೆಲೆ ಹೇಗಿದೆ?
ಕಂಪನಿಯು ರಿಯಲ್‌ಮಿ GT ನಿಯೊ 5 SE ಅನ್ನು 4 ಸ್ಟೋರೇಜ್ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಅದರಲ್ಲಿ 8 GB RAM + 256GB ರೂಪಾಂತರದ ಮೊಬೈಲ್‌ನ ಬೆಲೆ 23,900 ರೂ, 12 GB RAM + 256GB ರೂಪಾಂತರದ ಮೊಬೈಲ್‌ನ ಬೆಲೆ 26,300 ರೂ, 12 GB RAM + 512GB ರೂಪಾಂತರದ ಬೆಲೆ 27,500 ರೂ ಮತ್ತು 16 GB RAM +1 TB ಮೊಬೈಲ್‌ನ ಬೆಲೆ 33,500 ರೂ.
ವೈಶಿಷ್ಟ್ಯಗಳು:
ರಿಯಲ್‌ಮಿ GT ನಿಯೊ 5 SE ಸ್ಮಾರ್ಟ್‌ಫೋನ್ 6.74-ಇಂಚಿನ AMOLED ಡಿಸ್ಪ್ಲೇಯನ್ನು 144hz ನ ರಿಫ್ರೆಶ್ ದರದೊಂದಿಗೆ ಬಿಡುಗಡೆಯಾಗಿದೆ. ಈ ಮೊಬೈಲ್ ಫೋನ್ ಆಕ್ಟಾಕೋರ್ ಸ್ನಾಪ್‌ಡ್ರಾಗನ್ 7 ಪ್ಲಸ್ ಜನರೇಷನ್ 2 ಪ್ರೊಸೆಸರ್‌ನಿಂದ ಚಲಿಸಿದೆ. ಇದು ಆಂಡ್ರಾಯ್ಡ್ 13 ಆಧಾರಿತ MIUI 4.0 ನಲ್ಲಿ ಕಾರ್ಯನಿರ್ವಹಿಸಿಲಿದೆ. ಇದರಲ್ಲಿ ಡಾಲ್ಬಿ ಅಟ್ಮಾಸ್ ಸ್ಪೀಕರ್‌ಗಳನ್ನು ನೀಡಲಾಗಿದೆ. ಅಲ್ಲದೆ, 5,500 mAh ಬ್ಯಾಟರಿಯು 100 W ರ್‍ಯಾಪಿಡ್ ಚಾರ್ಜಿಂಗ್ ಬೆಂಬಲಿಸಲಿದೆ. ಛಾಯಾಗ್ರಹಣಕ್ಕಾಗಿ, ಮೊಬೈಲ್ ಫೋನ್‌ನಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು 64-ಮೆಗಾಪಿಕ್ಸೆಲ್ ಮುಖ್ಯ ಸಂವೇದಕ, 8-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಸಂವೇದಕ ಮತ್ತು 2-ಮೆಗಾಪಿಕ್ಸೆಲ್ ಮೈಕ್ರೋಸ್ಕೋಪಿಕ್ ಸಂವೇದಕವನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ ಮುಂಭಾಗದಲ್ಲಿ 16 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ನೀಡಲಾಗಿದೆ.
ಇದನ್ನೂ ಓದಿ : NIT ಕರ್ನಾಟಕ ನೇಮಕಾತಿ 2023 : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನಾಳೆ ಬಿಡುಗಡೆಯಾಗಲಿದೆ ಈ ಫೋನ್:
ನಾಳೆ ಒನ್‌ಪ್ಲಸ್ (OnePlus) ತನ್ನ ಕೈಗೆಟುಕುವ ಬೆಲೆಯ ಫೋನ್‌ಗಳಲ್ಲಿ ಒಂದನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಮೊಬೈಲ್ ಫೋನ್‌ನಲ್ಲಿ, 67W ವೇಗದ ಚಾರ್ಜಿಂಗ್‌ನೊಂದಿಗೆ 5000 mAh ಬ್ಯಾಟರಿಯನ್ನು ಪಡೆಯಬಹುದಾಗಿದೆ. ಒನ್‌ಪ್ಲಸ್ ನಾರ್ಡ್ CE 3 ಲೈಟ್ 5G ಮೊಬೈಲ್‌ನ ಬೆಲೆ ಸುಮಾರು 21,000 ರೂ. ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : Mahavira Jayanti 2023: ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಿ ಮತ್ತು ಆಚರಣೆಗಳ ಬಗ್ಗೆ ಇಲ್ಲಿದೆ ವಿವರ
Realme GT Neo 5 SE smartphone launched in china. Check the price and specifications