Remote Desktop App : ಡೆಸ್ಕ್‌ಟಾಪ್‌ ರಿಮೋಟ್ ಅಪ್ಲಿಕೇಷನ್‌ ಡೌನ್ಲೋಡ್ ಮಾಡುವಾಗ ಜಾಗ್ರತೆಯಿಂದಿರಿ..!!

ರಿಮೋಟ್ ಡೆಸ್ಕ್‌ಟಾಪ್ ಅಪ್ಲಿಕೇಶನ್‌ (Remote Desktop app) ಮೂಲಕ ವಂಚಕರು ಬ್ಯಾಂಕ್ ಖಾತೆಗಳಿಂದ (Bank account ) ಜನರ ಹಣವನ್ನು ಕದಿಯಲು ಬೆಳೆಸಿಕೊಳ್ಳುತ್ತಾರೆ. ಆದ್ರೆ ವಂಚಕರು ಮಾತ್ರ ಜನರಲ್ಲಿ ಈ ಪ್ಲಿಕೇಶನ್ ಡೌನ್ಲೋಡ್ (Download )ಮಾಡಿದ್ರೆ ಉತ್ತಮ ಹಾಗೂ ನಿಮ್ಮ ಹಣ ಸುರಕ್ಷಿತವಾಗಿ ಇರುತ್ತದೆ ಎಂದು ಜನರನ್ನು ಮೂರ್ಖ ಗೊಳಿಸುತ್ತಿದ್ದಾರೆ. RBI ಇಂತಹ ಅಪ್ಲಿಕೇಶನ್‌ಗಳ ಬಳಕೆಯ ವಿರುದ್ಧ ಬ್ಯಾಂಕುಗಳಿಗೆ ಹಾಗೂ ಪಾವತಿದಾರ ನಿರ್ವಾಹಕರಿಗೆ ಎಚ್ಚರಿಸಿದೆ.

ವಂಚಕರಿಗೆ ಅನುಕೂಲ, ಜನರಿಗೆ ಅನಾನುಕೂಲ:

ಯಾರಾದರೂ ಡೆಸ್ಕ್‌ಟಾಪ್ರಿ ಮೋಟ್ ಅಪ್ಲಿಕೇಶನ್ಯ  ಡೌನ್ಲೋಡ್ ಮಾಡಕ್ಕೆ ಹೇಳಿದ್ರೆ ಮಾಡಬೇಡಿ. ಏಕೆಂದರೆ ಅತಿಸುಲಭವಾಗಿ ನಿಮ್ಮ ಖಾತೆಯಿಂದ ಅವರ ಖಾತೆಗೆ ಹಣ ವರ್ಗಾವಣೆ ಆಗುತ್ತದೆ. ಈ ಅಪ್ಲಿಕೇಶನ್‌ನಲ್ಲಿ ಯಾವುದೇ ಭದ್ರತಾ ಸಮಸ್ಯೆಗಳನ್ನು ಹೊಂದಿರದಿದ್ದರೂ, ವಂಚಕರು ಬಳಕೆದಾರರ ಮೊಬೈಲ್ ಮೂಲಕ ತಮ್ಮ ವಹಿವಾಟುಗಳನ್ನು ನಡೆಸುತ್ತಾರೆ.
ಇಲ್ಲಿ ಯಾರ ಖಾತೆಗೆ ಹಣ ವರ್ಗಾವಣೆ ಆಗಿದೆ ಎಂದು ಮಾಹಿತಿ ತಿಳಿದು ಬರುವುದಿಲ್ಲ. ವಂಚಕರು ಸಾಮಾನ್ಯವಾಗಿ ಬ್ಯಾಂಕ್ ಅಧಿಕಾರಿಯಂತೆ ಪೋಸ್ ನೀಡುತ್ತಾರೆ,  ಮತ್ತು AnyDesk ಅಥವಾ ಅಂತಹುದೇ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು  ಸಲಹೆ ನೀಡುತ್ತಾರೆ. ನಂತರ ಅವರು ಆ್ಯಪ್ ಡೌನ್‌ಲೋಡ್ ಮಾಡಿದ ನಂತರ ರಚಿಸಲಾದ 9-ಅಂಕಿಯ ಅಪ್ಲಿಕೇಶನ್ ಕೋಡ್ ಅನ್ನು ಬಳಕೆದಾರರಲ್ಲಿ ಕೇಳುತ್ತಾರೆ.

ನಮ್ಮ ಅನುಕೂಲಕ್ಕೆ ಬಹಳಷ್ಟು ಅಪ್ಲಿಕೇಶನನ್ನು ನಾವು ಬಳಸುತ್ತೇವೆ. ಅಂತಹದೇ ಒಂದು ಎನಿ ಡೆಸ್ಕ್  (AnyDesk ) ಈ ಅಪ್ಲಿಕೇಶನ್‌ಗಳು ಬಳಕೆದಾರರಿಗೆ ರಿಮೋಟ್‌ನಿಂದ ಕಂಪ್ಯೂಟರ್‌ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ.

ಇದನ್ನೂ ಓದಿ : WhatsApp : ನಕಲಿ ವಾಟ್ಸಪ್‌ ಅಕೌಂಟ್‌ಗಳ ಮೇಲೆ ಎಚ್ಚರವಿರಲಿ!! ಅವುಗಳಿಂದ ದೂರವಿರಿ

ಟ್ವಿಟ್ಟರ್‌ ನಲ್ಲಿ ರಿ-ಟ್ವೀಟ್ :

ಈ ಅಪ್ಲಿಕೇಶನ್ ಅನ್ನು ಸ್ಥಾಪಿಸುವುದರಿಂದ ವಂಚಕರು ತನ್ನ ಕ್ರೆಡಿಟ್ ಕಾರ್ಡ್‌ನಿಂದ 1 ಲಕ್ಷ ರೂ.ಗಳನ್ನು “ಲೂಟಿ” ಮಾಡಲು ಕಾರಣವಾಯಿತು ಎಂಬ
ಬಳಕೆದಾರರ  ಟ್ವಿಟ್ಟರಲ್ಲಿ ಟ್ವೀಟ್ ಮಾಡಿದ್ದಾರೆ.  ಇದಕ್ಕೆ ಪ್ರತಿಕ್ರಿಯಿಸಿದ ಎನಿ ಡೆಸ್ಕ್ (AnyDesk) ಅಂತಹ ವಂಚನೆಯು ಬಳಕೆದಾರರಿಂದ ಮಾತ್ರ ಸಾಧ್ಯ ಎಂದು ಹೇಳಿದೆ. ಯಾರಿಗಾದರೂ  ಅಪ್ಲಿಕೇಶನ್  ಅನುಮತಿ ನೀಡಿದರೆ ಮಾತ್ರ ಇಂತಹ ಘಟನೆಗಳು ಉಂಟಾಗುತ್ತದೆ. “ಅಂತಹ ಯಾವುದೇ ವಹಿವಾಟುಗಳು ಎನಿ ಡೆಸ್ಕ್ ( AnyDesk) ನ ಅಪ್ಲಿಕೇಶನ್‌ನ ಯಾವುದೇ ಸಮಸ್ಯೆಯಿಂದಾಗಿಲ್ಲ” ಎಂದು ತಿಳಿಸಿದ್ದಾರೆ.

ವಂಚಕನು ತನ್ನ ಸಾಧನದಲ್ಲಿ 9-ಅಂಕಿಯ ಕೋಡ್ ಅನ್ನು ನಮೂದಿಸಿದ ನಂತರ, ಇತರ ಅಪ್ಲಿಕೇಶನ್‌ಗಳಿಗೆ ಹೋಲುವ ಕೆಲವು ಅನುಮತಿಗಳನ್ನು ನೀಡಲು ಬಳಕೆದಾರರಲ್ಲಿ ಕೇಳುತ್ತಾನೆ. ವಂಚಕರು ಬಳಕೆದಾರನ ಫೋನ್ ಗೆ ಪ್ರವೇಶವನ್ನು ಪಡೆಯಲು ಮತ್ತು ಮೋಸದ ವಹಿವಾಟುಗಳನ್ನು ನಡೆಸಲು ಇದು ಅನುಮತಿಸುತ್ತದೆ. AnyDesk, ಆದಾಗ್ಯೂ, ಬಳಕೆದಾರರು ರಿಮೋಟ್ ಆಗಿ ಕಂಪ್ಯೂಟರ್‌ಗೆ ಸಂಪರ್ಕಿಸಲು ಅನುಮತಿಸುವ ಏಕೈಕ ಅಪ್ಲಿಕೇಶನ್ ಅಲ್ಲ. ಟೀಮ್ ವ್ಯೂರ್( Team viewer ) ಕ್ವಿಕ್ ಸಪೋರ್ಟ್  ( QuickSupport) ಎಂಬ ಇನ್ನೊಂದು ಅಪ್ಲಿಕೇಶನ್ ಇದೇ ರೀತಿಯ ಸೇವೆಯನ್ನು ನೀಡುತ್ತದೆ.ಹಾಗಾಗಿ ಜನರು ತಮ್ಮ ಎಚ್ಚರಿಕೆಯಲ್ಲಿ ತಾವು ಇರಬೇಕು.

ಇದನ್ನೂ ಓದಿ :Sony Wireless Headphone :ಹೊಸ ವೈಶಿಷ್ಟ್ಯಗಳೊಂದಿಗೆ ಈ ವಾರ ಬಿಡುಗಡೆಯಾಗಲಿರುವ ಸೋನಿಯ ಹೊಸ WH-1000XM5 ವೈರ್‌ಲೆಸ್‌ ಹೆಡ್‌ಫೋನ್‌!

(Remote Desktop App be alert while downloading the apps)

Comments are closed.