Samsung Galaxy A14 5G and Galaxy A23 5G: ಸ್ಯಾಮಸಂಗ್‌ನಿಂದ ಎರಡು 5G ಮೊಬೈಲ್‌ ಅನಾವರಣ; ಗ್ಯಾಲೆಕ್ಸಿ A14 ಹಾಗೂ ಗ್ಯಾಲೆಕ್ಸಿ A23 ಬೆಲೆ ಮತ್ತು ವೈಶಿಷ್ಟ್ಯಗಳು

ಗ್ಯಾಜೆಟ್‌ ಲೋಕದಲ್ಲಿ ಹೊಸ ಹೊಸ ಸ್ಮಾರ್ಟ್‌ಫೋನ್‌ಗಳು ಲಗ್ಗೆಯಿಡುತ್ತಲೇ ಇದೆ. ನಿರ್ದಿಷ್ಟ ಸ್ಮಾರ್ಟ್‌ಫೋನ್‌ಗಳನ್ನು ಲೈಕ್‌ ಮಾಡುವ ಗ್ಯಾಜೆಟ್‌ ಪ್ರಿಯರಿಗೆ ಅದು ಆಗಾಗ ಸಂತೋಷವನ್ನೂ ನೀಡುತ್ತಿರುತ್ತದೆ. ಸ್ಯಾಮ್‌ಸಂಗ್‌ ಸೋಮವಾರ A ಸರಣಿಯ ಎರಡು 5ಜಿ ಸ್ಮಾರ್ಟ್‌ಫೋನ್‌ (Samsung Galaxy A14 5G and Galaxy A23 5G) ಅನ್ನು ಅನಾವರಣಗೊಳಿಸಿದೆ. ಅದು ಗ್ಯಾಲೆಕ್ಸಿ A14 ಹಾಗೂ ಗ್ಯಾಲೆಕ್ಸಿ A23 ಸ್ಮಾರ್ಟ್‌ಫೋನ್‌ ಅನ್ನು ಭಾರತದ ಗ್ರಾಹಕರಿಗೆ ನೀಡಿದೆ. ಈ ಮೊಬೈಲ್‌ ಪ್ರೀಮಿಯಮ್‌ ವಿನ್ಯಾಸವನ್ನು ತೋರಿಸುತ್ತದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ 16 GB RAM ಮತ್ತು RAM ಪ್ಲಸ್‌ ಹಾಗೂ 5000 mAh ಬ್ಯಾಟರಿ ಹೊಂದಿದೆ. ಈ ಫೋನ್‌ನ ಮುಖ್ಯ ಧ್ಯೇಯ 5ಜಿ ಯನ್ನು ಎಲ್ಲರಿಗೂ ಬಳಸಲು ಅವಕಾಶ ಒದಗಿಸುವುದಾಗಿದೆ, ಎಂದು ಸ್ಯಾಮ್‌ಸಂಗ್ ಇಂಡಿಯಾದ ಮೊಬೈಲ್ ವ್ಯವಹಾರದ ಹಿರಿಯ ನಿರ್ದೇಶಕ ಆದಿತ್ಯ ಬಬ್ಬರ್ IANS ಗೆ ನೀಡಿದ ಸುದ್ದಿಯ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಸ್ಮಾರ್ಟ್‌ಪೋನ್‌ನ ಆರಂಭಿಕ ಬೆಲೆಯು 14,999 ರೂ. ಗಳಾಗಿದೆ.

ಗ್ಯಾಲೆಕ್ಸಿ A14 ಹಾಗೂ ಗ್ಯಾಲೆಕ್ಸಿ A23 ಸ್ಮಾರ್ಟ್‌ಫೋನ್‌ನ ವೈಶಿಷ್ಟ್ಯಗಳು:

ಗ್ಯಾಲೆಕ್ಸಿ A14ನ ವೈಶಿಷ್ಟ್ಯಗಳು :
ಗ್ಯಾಲೆಕ್ಸಿ A14 6.6 ಇಂಚಿನ HD+ ಡಿಸ್ಪ್ಲೇ, 90Hz ರಿಫ್ರೆಶ್‌ ದರ ಹೊಂದಿದ್ದು ಸ್ಮೂತ್‌–ಸ್ಕ್ರಾಲಿಂಗ್‌ ನೀಡಲಿದೆ. ಈ ಹ್ಯಾಂಡ್‌ಸೆಟ್‌ Exynos 1330 ಆಕ್ಟಾ–ಕೋರ್‌ ಪ್ರೊಸೆಸ್ಸರ್‌ನಿಂದ ಚಾಲಿತವಾಗಲಿದೆ. ಇದು OneUI 5.0 ಹೊಂದಿರುವ ಆಂಡ್ರಾಯ್ಡ್‌ 13 ನಲ್ಲಿ ಕಾರ್ಯನಿರ್ವಹಿಸಲಿದೆ. 50 MP ಪ್ರಾಥಮಿಕ ಕ್ಯಾಮೆರಾ ಇರುವ ಟ್ರಿಪಲ್‌ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಜೊತೆಗೆ ಉತ್ತಮ ಕ್ವಾಲಟಿ ಫೋಟೋಗಳಿಗಾಗಿ ಡೆಪ್ತ್‌ ಸೆನ್ಸಾರ್‌ ಮತ್ತು ಮೈಕ್ರೋ ಲೆನ್ಸ್‌ ಅನ್ನು ಹೊಂದಿದೆ. ಸೆಲ್ಫಿಗಾಗಿ ಮುಂಭಾಗದಲ್ಲಿ 13 MP ಕ್ಯಾಮೆರಾ ಅಳವಡಿಸಲಾಗಿದೆ. ಈ ಫೋನ್‌ 5000 mAh ಶಕ್ತಿಯ ಬ್ಯಾಟರಿ ಪ್ಯಾಕ್‌ ಹೊಂದಿದೆ. ಇದನ್ನು ಡಾರ್ಕ್‌ ರೆಡ್‌, ಲೈಟ್‌ ಗ್ರೀನ್‌ ಮತ್ತು ಬ್ಲಾಕ್‌ ಬಣ್ಣಗಳ ಆಯ್ಕೆಗಳನ್ನು ನೀಡಿದೆ.

ಗ್ಯಾಲೆಕ್ಸಿ A14ನ ಬೆಲೆ :
ಗ್ಯಾಲೆಕ್ಸಿ A14 ಮೂರು ಆವೃತ್ತಿಗಳಲ್ಲಿ ಬಿಡುಗಡೆಯಾಗಿದೆ.
4GB RAM ಮತ್ತು 64 GB ಸ್ಟೋರೇಜ್‌ ಇರುವ ಫೋನ್‌ ನ ಬೆಲೆ 16,499 ರೂ.ಗಳಾಗಿದೆ.
6GB RAM ಮತ್ತು 128 GB ಸ್ಟೋರೇಜ್‌ ಇರುವ ಫೋನ್‌ ನ ಬೆಲೆ 18,999 ರೂ. ಗಳಾಗಿದೆ. ಮತ್ತು
8GB RAM ಮತ್ತು 128 GB ಸ್ಟೋರೇಜ್‌ ಇರುವ ಫೋನ್‌ ನ ಬೆಲೆ 20,999 ರೂ. ಗಳಾಗಿದೆ.

ಗ್ಯಾಲೆಕ್ಸಿ A23ನ ವೈಶಿಷ್ಟ್ಯಗಳು :
ಗ್ಯಾಲೆಕ್ಸಿ A23 6.6-ಇಂಚಿನ FHD+ ಡಿಸ್ಪ್ಲೇ ಹೊಂದಿದೆ. ಇದರ ರಿಫ್ರೆಶ್ ದರವು 120Hz ಆಗಿದ್ದು, ಸ್ಮೂತ್‌ ಸ್ಕ್ರಾಲಿಂಗ್‌ ಮತ್ತು ಫ್ಲುಯಿಡ್‌ ಸ್ಕ್ರೀನ್‌ ಟ್ರಾನ್ಸಿಷನ್‌ ಪಡೆದುಕೊಂಡಿದೆ. ಈ ಸ್ಮಾರ್ಟ್‌ಫೋನ್ 50MP ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಜೊತೆಗೆ ಅಲ್ಟ್ರಾ-ವೈಡ್, ಡೆಪ್ತ್ ಮತ್ತು ಮ್ಯಾಕ್ರೋ ಲೆನ್ಸ್‌ ಹೊಂದಿದೆ. ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ ಮತ್ತು 5000mAh ಬ್ಯಾಟರಿ ಪ್ಯಾಕ್‌ ಹೊಂದಿದೆ. ಇದು ದಿನಬಳಕೆಯ ಅಗತ್ಯತೆಗೆ ಅನುಗುಣವಾಗಿ ಆಟೋಮೆಟಿಕ್‌ ಆಗಿ ವಿದ್ಯುತ್ ಉಳಿತಾಯ ಮೋಡ್ ಅನ್ನು ಬದಲಾಯಿಸುವ ಅಡಾಪ್ಟಿವ್ ಪವರ್-ಸೇವಿಂಗ್ ಮೋಡ್‌ ಅನ್ನು ಹೊಂದಿದೆ. ಈ ಫೋನ್‌ ಕೂಡಾ ಮೂರು ಬಣ್ಣಗಳ ಆಯ್ಕೆಯಲ್ಲಿ ದೊರಯಲಿದೆ– ಸಿಲ್ವರ್, ಲೈಟ್‌ ಬ್ಲೂ ಮತ್ತು ಆರೆಂಜ್‌.

ಗ್ಯಾಲೆಕ್ಸಿ A23 ಸ್ಮಾರ್ಟ್‌ಫೋನ್‌ನ ಬೆಲೆ:
ಗ್ಯಾಲೆಕ್ಸಿ A23 ಎರಡು ಆವೃತ್ತಿಗಳನ್ನು ಹೊಂದಿದೆ.
6GB RAM ಮತ್ತು 128GB ಸಂಗ್ರಹಣೆಯ ಫೋನ್‌ನ ಬೆಲೆಯು 22,999 ರೂ.ಗಳಾಗಿದೆ. ಮತ್ತು
8GB RAM ಮತ್ತು 128GB ಸಂಗ್ರಹಣೆಯ ಫೋನ್‌ನ ಬೆಲೆಯು 24,999 ರೂ.ಗಳಾಗಿದೆ.

ಗ್ಯಾಲೆಕ್ಸಿ A14 ಹಾಗೂ ಗ್ಯಾಲೆಕ್ಸಿ A23 ಸ್ಮಾರ್ಟ್‌ಫೋನ್‌ನ ಲಭ್ಯತೆ :
ಎರಡೂ ಹ್ಯಾಂಡ್‌ಸೆಟ್‌ಗಳನ್ನು ಜನವರಿ 20 ರಿಂದ ಸ್ಯಾಮ್‌ಸಂಗ್‌ನ ಅಧಿಕೃತ ಸ್ಟೋರ್‌ನಲ್ಲಿ ಮತ್ತು ಆನ್‌ಲೈನ್‌ನಲ್ಲಿ ಖರೀದಿಸಬಹುದಾಗಿದೆ.

ಇದನ್ನೂ ಓದಿ : Young Professionals Scheme : ವೃತ್ತಿಪರರಿಗಾಗಿ ಪ್ರಾರಂಭವಾಗಲಿದೆ ಹೊಸ ಯೋಜನೆ; ಎರಡು ವರ್ಷಗಳವರೆಗೆ ಬ್ರಿಟನ್‌ನಲ್ಲಿ ವಾಸ ಮತ್ತು ಕೆಲಸ

ಇದನ್ನೂ ಓದಿ : SBI WhatsApp Banking : ನೀವು ಎಸ್‌ಬಿಐ ಗ್ರಾಹಕರೇ ? ಹಾಗಿದ್ದರೆ ನಿಮಗೆ ಸಿಗಲಿದೆ 9 ಉಚಿತ ಸೇವೆ

(Samsung Galaxy A14 5G and Galaxy A23 5G launched in India. Know the price and specifications)

Comments are closed.